Advertisement

ರಫೇಲ್‌ ನಿರ್ಮಾಣಕ್ಕೆ ಎಚ್‌ಎಎಲ್‌? : ಈಗಾಗಲೇ ಪೂರ್ತಿಯಾಗಿವೆ ಹಲವು ಸುತ್ತಿನ ಚರ್ಚೆ

08:45 AM Feb 20, 2020 | Hari Prasad |

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ನಿರ್ಮಾಣದಲ್ಲಿ ಬೆಂಗಳೂರಿನಲ್ಲಿರುವ ಹಿಂದುಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಭಾಗಿಯಾಗಲಿದೆಯೇ? ಹೌದು ಎನ್ನುವಂತಿದೆ ಸದ್ಯ ನಡೆಯುತ್ತಿರುವ ಬೆಳವಣಿಗೆ. ಫ್ರಾನ್ಸ್‌ನ ಡಸೋ ಏವಿಯೇಷನ್‌ ಮತ್ತು ಎಚ್‌ಎಎಲ್‌ ಈ ಬಗ್ಗೆ ಮತ್ತೆ ಮಾತುಕತೆಯಲ್ಲಿ ತೊಡಗಿವೆ. ಮಿರಾಜ್‌ 2000 ಯುದ್ಧ ವಿಮಾನವನ್ನು ಮೇಲ್ದರ್ಜೆಗೆ ಏರಿಸುವ ಕೆಲಸದಲ್ಲಿ ಎರಡೂ ಕಂಪನಿಗಳು ಜತೆಗೂಡಿ ಕೆಲಸ ಮಾಡಿದ್ದವು.

Advertisement

ಕೆಲ ದಿನಗಳ ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ನಾಲ್ಕು ವರ್ಷಗಳ ಅವಧಿಯಲ್ಲಿ 36 ಯುದ್ಧ ವಿಮಾನ ಗಳನ್ನು ಖರೀದಿಸಲಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ಬೇಕಾಗಿರುವ ಬಿಡಿಭಾಗಗಳನ್ನು ಬೆಂಗಳೂರಿನ ಎಚ್‌ಎಎಲ್‌ನಲ್ಲಿಯೇ ಸಿದ್ಧಪಡಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಸದ್ಯದ ಒಪ್ಪಂದದ ಪ್ರಕಾರ 60 ಸಾವಿರ ಕೋಟಿ ರೂ. ಮೌಲ್ಯದ ರಫೇಲ್‌ ಯುದ್ಧ ವಿಮಾನಗಳನ್ನು ನಾಗ್ಪುರದಲ್ಲಿರುವ ರಿಲಯನ್ಸ್‌ ಡಿಫೆನ್ಸ್‌ ಕಾರ್ಖಾನೆಯಲ್ಲಿ ಜೋಡಿಸಲಾಗುತ್ತದೆ. ಇವೆಲ್ಲದರ ಜತೆಗೆ ದೇಶದ ರಕ್ಷಣೆಗೆ ಹಲವು ಕೊಡುಗೆಗಳನ್ನು ನೀಡಿರುವ ಎಚ್‌ಎಎಲ್‌ ಅನ್ನು ಸೇರ್ಪಡೆಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತಿದೆ. ದೇಶದ ಎರಡು ವಾಯುನೆಲೆಗಳಲ್ಲಿ ರಫೇಲ್‌ ಯುದ್ಧ ವಿಮಾನಗಳನ್ನು ಇಳಿಸಲು ಮತ್ತು ಐಎಎಫ್ ಸಿಬ್ಬಂದಿಗೆ ಅದರ ಬಗ್ಗೆ ಡಸೋ ಏವಿಯೇಷನ್‌ ವತಿಯಿಂದಲೇ ತರಬೇತಿ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next