Advertisement

Bhatkal ಚಿನ್ನದ ಪಳ್ಳಿಯನ್ನೂ ಹಿಂದೂಗಳು ಪಡೆದೇ ತೀರುತ್ತೇವೆ:ಅನಂತ ಕುಮಾರ್ ಹೆಗಡೆ

08:39 PM Jan 13, 2024 | Team Udayavani |

ಕುಮಟಾ: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ನಿರ್ನಾಮ ಆಗಿ, ಶ್ರೀರಾಮ ಮಂದಿರ ನಿರ್ಮಾಣ ಆದಂತೆ, ಜಿಲ್ಲೆಯ ಭಟ್ಕಳದಲ್ಲಿರುವ ಚಿನ್ನದ ಪಳ್ಳಿಯೂ ಅದರ ಸಾಲಿಗೆ ಸೇರಿ ಹಿಂದೂಗಳು ಅದನ್ನೂ ಪಡೆದೇ ತೀರುತ್ತೇವೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದೇಶದ ಹಲವೆಡೆಗಳಲ್ಲಿ ಹಿಂದೂ ಧರ್ಮಕ್ಕೆ ಅನ್ಯಾಯ ಆದ ಸಂಗತಿಗಳಿವೆ.ಅದನ್ನು ತೊಡೆದುಹಾಕಿ ಸಮಾಜ ಮತ್ತೆ ಎದ್ದೇಳುತ್ತಿದೆ.ಇನ್ನು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ.ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ರೆ ಇದು ಹಿಂದೂ ರಕ್ತವೇ ಅಲ್ಲ.ಜೊತೆಗೆ ಹಿಂದೂ ಧರ್ಮ ಋಣವನ್ನು ಇಟ್ಟಿಕೊಳ್ಳುವ ಧರ್ಮವೇ ಅಲ್ವೆ ಅಲ್ಲ.ಇದು ಅನಂತ ಕುಮಾರ್ ಹೆಗಡೆಯ ತೀರ್ಮಾನ ಅಲ್ಲ, ಬದಲಾಗಿ ಸಮಸ್ತ ಹಿಂದೂ ಧರ್ಮದ ತಿರ್ಮಾನ ಎಂದು ಗುಡುಗಿದರು.

ಶಿರಸಿಯ ಸಿಪಿ ಬಜಾರಲ್ಲಿರುವ ಮಸೀದಿ ಇರುವುದು ಅದು ವಿಜಯ ವಿಟ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡ ಮಾರುತಿ ದೇವಸ್ಥಾನ. ಇಂತಹ ಅಪಮಾನಗೊಂಡಿರುವ ಅನೇಕ ಸಂಕೇತಗಳನ್ನು ಕಿತ್ತುಹಾಕೋ ತನಕ ಈ ಹಿಂದೂ ಸಮಾಜ ಮತ್ತೆ ಕೈಕಟ್ಟಿ ಕೂರುವುದಿಲ್ಲ ಎಂದರು.

ಜಾತಿಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಇಂದಿಗೂ ಮೂರ್ಖ ರಾಮಯ್ಯನಂತವರು ಒಡೆಯುತ್ತಿದ್ದಾರೆ.ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ.ಸಿದ್ದರಾಮಯ್ಯ ನಮ್ಮ ವಿರೊಧಿ. ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು ನಮ್ಮ ವಿರೋಧಿಗಳು.ಅಲ್ಪಸಂಖ್ಯಾತರ ಓಟಿಗೆ ಹರಾಜಾಗಿ ಹೊದವರು ನಮ್ಮ ವಿರೋಧಿಗಳು.ಈ ಮೊದಲು ಆಮಂತ್ರಣ ಬಂದ ಮೇಲೆ ರಾಮಮಂದಿರಕ್ಕೆ ಹೋಗುವುದಾಗಿ ತಿಳಿಸಿದ್ದ ಸಿದ್ದರಾಮಯ್ಯ ಈಗ ಜನವರಿ 22 ರ ಬಳಿಕ ಯಾವಾಗಲಾದರೂ ಹೋಗುವೆ ಎನ್ನುತ್ತಿದ್ದಾರೆ. ನೀನು ಬರು ಇಲ್ಲ ಬಿಡು, ರಾಮ ಜನ್ಮ ಭೂಮಿ ಕಾರ್ಯ ಏನು ನಿಲ್ಲೋದಿಲ್ಲ ಮಗನೆ” ಎಂದು ಸಿಎಂ ಸಿದ್ದರಾಮಯ್ಯನ ವಿರುದ್ಧ ಏಕವಚನದಲ್ಲೇ ಅನಂತ ಕುಮಾರ ಹೆಗಡೆ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next