ಕಾಬೂಲ್: “ಅಫ್ಘಾನಿಸ್ತಾನ ತೊರೆಯಬೇಡಿ. ದೇಶ ತೊರೆದ ಹಿಂದೂ, ಸಿಖ್ ಸಮುದಾಯದವರು ಮತ್ತೆ ವಾಪಸ್ ಬನ್ನಿ’- ಹೀಗೆಂದು ಮನವಿ ಮಾಡಿದ್ದು ತಾಲಿಬಾನ್ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಮುಲ್ಲಾ ಅಬ್ದುಲ್ ವಾಸಿ.
ಸದ್ಯ ದೇಶದಲ್ಲಿ ಭದ್ರತೆ ಸುಧಾರಿಸಿದೆ ಎಂದು ಹೇಳಿಕೊಂಡಿರುವ ಆಚ, ಅಲ್ಪಸಂಖ್ಯಾತ ಹಿಂದೂ-ಸಿಖ್ ಧರ್ಮೀಯರು ಮತ್ತೆ ಅಫ್ಘಾನಿಸ್ತಾನಕ್ಕೆ ಮರಳಬಹುದು ಎಂದು ಮನವಿ ಮಾಡಿದ್ದಾನೆ.
ಜು.24ರಂದು ಆಫ್ಘನ್‌ನಲ್ಲಿ ಇನ್ನೂ ನೆಲೆಸಿರುವ ಹಿಂದೂ ಮತ್ತು ಸಿಖ್ ಧರ್ಮೀಯರ ಜತೆಗೆ ಡಾ.ಮುಲ್ಲಾ ಅಬ್ದುಲ್ ವಾಸಿ ಭೇಟಿಯಾಗಿದ್ದ. ಈ ಸಂದರ್ಭದಲ್ಲಿ ದೇಶದಲ್ಲಿ ಭದ್ರತೆ ಸುಧಾರಣೆಯಾಗಿದೆ ಎಂದು ಮನವರಿಕೆ ಮಾಡಿದ್ದಾರೆ.
ಈಗಾಗಲೇ ಭಾರತಕ್ಕೆ ವಾಪಸಾಗಿರುವ ಹಿಂದೂ ಮತ್ತು ಸಿಖ್ ಸಮುದಾಯದವರೂ ಮರಳುವಂತೆ ಮಾಡಬೇಕು ಎಂದೂ ಸಮುದಾಯಕ್ಕೆ ಮನವಿ ಮಾಡಿದ್ದಾನೆ.
ಜೂ.18ರಂದು ಕಾಬೂಲ್‌ನಲ್ಲಿರುವ ಕರ್ತೆ ಪರ್ವಾನ್ ಸಿಖ್ ಗುರುದ್ವಾರದ ಮೇಲೆ ನಡೆದಿದ್ದ ದಾಳಿಯಲ್ಲಿ ಮೂವರು ಅಸುನೀಗಿದ್ದರು. ಈ ಘಟನೆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ಮತ್ತು ಹಿಂದೂ ಸಮುದಾಯದವರು ಭಾರತಕ್ಕೆ ವಾಪಸಾಗಿದ್ದರು.