ವಾಷಿಂಗ್ಟನ್: ಅಮೆರಿಕದ ಶ್ವೇತಭವನದಲ್ಲಿ ದೀಪಾವಳಿ ಆಚರಿಸಲಾಗುತ್ತಿದೆಯಾದರೂ, ಈ ವರ್ಷ ದೀಪಾವಳಿ ಆಚರಣೆಯ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದುಗಳನ್ನೇ ಮರೆತಿದ್ದಾರೆ! ತಮ್ಮ ಟ್ವಿಟರ್ ಖಾತೆ ಯಲ್ಲಿ ದೀಪಾವಳಿ ಶುಭಾ ಶಯ ಕೋರಿದ್ದ ಟ್ರಂಪ್ ಜೈನ, ಸಿಕ್ಖ್ ಹಾಗೂ ಬೌದ್ಧರಿಗೆ ದೀಪಾ ವಳಿ ಶುಭಾಶಯವನ್ನು ಕೋರಿದ್ದರು. ಆದರೆ ಹಿಂದೂಗಳ ಹಬ್ಬಕ್ಕೆ ಹಿಂದೂಗಳಿಗೇ ಶುಭಾ ಶಯ ಕೋರಿರಲಿಲ್ಲ. ಟ್ವೀಟ್ ನಲ್ಲಿ ನೀಡಿದ್ದ ಲಿಂಕ್ ಕೂಡ ತಪ್ಪಾಗಿತ್ತು. ಇದಕ್ಕೆ ಜನರು ಆಕ್ಷೇಪ ಎತ್ತುತ್ತಿದ್ದಂತೆಯೇ ಕೆಲವು ನಿಮಿಷಗಳಲ್ಲಿ ಟ್ವೀಟ್ ಡಿಲೀಟ್ ಮಾಡಿ, ಮತ್ತೂಂದು ಟ್ವೀಟ್ ಮಾಡಲಾಯಿತು. ಆ ಟ್ವೀಟ್‌ನಲ್ಲೂ ಹಿಂದು ಪ್ರಸ್ತಾಪವಿರಲಿಲ್ಲ. ನಂತರ ಮತ್ತೂಮ್ಮೆ ಟ್ವೀಟ್ ಮಾಡಿದಾಗ ಹಿಂದುಗಳು ಎಂಬುದನ್ನೂ ನಮೂದಿಸಲಾಗಿತ್ತು. ಈ ಮಧ್ಯೆ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದು, ಇಲ್ಲಿ ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಿದ್ದಾರೆ. ಮೋದಿ ನನ್ನ ಉತ್ತಮ ಮಿತ್ರ. ಈಗ ನನ್ನ ಪುತ್ರಿಗೂ ಮಿತ್ರರಾಗಿದ್ದಾರೆ. ಆದರೆ ಭಾರತದ ಜೊತೆಗೆ ಮಾತುಕತೆ ನಡೆಸುವುದು ಕಷ್ಟಕರ ಎಂದಿದ್ದಾರೆ.