ಶ್ರೀರಂಗಪಟ್ಟಣ: ದಲಿತರು, ಹಿಂದೂಗಳ ಮನೆಗೆ ಮುಸ್ಲಿಂ ಯುವಕರು ದಾಳಿ ನಡೆಸಿ, ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದರೂ ಪೊಲೀಸರು ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ವಿಶ್ವ ಹಿಂದೂಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪಟ್ಟಣದ ಡಿವೈಎಸ್‌ಪಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದರು.
ತಾಲೂಕಿನ ಹೊಸ ಆನಂದೂರು ಗ್ರಾಮದ ದಲಿತ ಸೋಮಶೇಖರ್ ಎಂಬುವವರ ಮನೆಗೆ ಮುಸ್ಲಿಮರು ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ದೂರು ನೀಡಿ 3-4 ದಿನಗಳು ಕಳೆದಿದ್ದರೂ ಆರೋ ಪಿಗಳನ್ನು ಬಂಧಿಸದ ಕ್ರಮವನ್ನು ಖಂಡಿಸಿ, ಹಿಂದೂ ಸಂಘಟನೆ ಕಾರ್ಯಕರ್ತರು ಸಂತ್ರಸ್ಥರ ಜೊತೆಗೂಡಿ ಪ್ರತಿಭಟಿಸಿದರು.
ದಲಿತ ಸೋಮಶೇಖರ್ ಅವರಿಗೆ ಸೇರಿದ್ದ ಮಾವಿನ ಮರವಿದ್ದು, ಪಕ್ಕದಲ್ಲಿರುವ ಮದರಸದ ಲ್ಲಿರುವ ಮುಸ್ಲಿಂ ಯುವಕರು ಹಲವು ಬಾರಿ ಮಾವಿನ ಕಾಯಿಗಳನ್ನು ಕದ್ದು ಕೀಳುತ್ತಿದ್ದು, ಈ ಬಗ್ಗೆ ಸೋಮಶೇಖರ್ ಗದರಿಸಿ ಕಳುಹಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಮುಸ್ಲಿಂ ಯುವಕನ ಕುಟುಂಬಸ್ಥರು ಸೋಮಶೇಖರ್ ಮನೆಗೆ ಆಗಮಿಸಿ, ಮಾತುಕತೆ ನಡೆಸಿ ತೆರಳಿದ್ದರು ಎಂದು ತಿಳಿದು ಬಂದಿದೆ.
ಭಯದ ವಾತಾವರಣ ಸೃಷ್ಟಿ: ನಂತರ ಸಂಜೆ ವೇಳೆಗೆ 30ರಿಂದ 40 ಮಂದಿ ಮುಸ್ಲಿಂ ಸಮುದಾ ಯದವರು ಏಕಾಏಕಿ ಸೋಮಶೇಖರ್ ಮನೆಗೆ ನುಗ್ಗಿ ಅವರನ್ನು ಹಾಗೂ ಅವರ ಹೆಣ್ಣು ಮಕ್ಕಳಿಬ್ಬರ ಮೇಲೆ ಹಲ್ಲೆ ನಡೆಸಿ, ನಿಂದಿಸಿ ಕೊಲೆ ಬೆದರಿಕೆ ಒಡ್ಡಿರುವುದಾಗಿ ಕೆಆರ್‌ಎಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅದಾಗ್ಯೂ ಮುಸ್ಲಿಂ ಯುವಕರು ಬೈಕ್‌ಗಳಲ್ಲಿ ಸೋಮ ಶೇಖರ್ ಮನೆ ಮುಂದೆ ಗಸ್ತು ತಿರಿಗಿ, ಮಹಿಳೆ ಯರು ಮನೆಯಿಂದ ಈಚೆಗೆ ಬಾರದಂತೆ ಭಯದ ವಾತಾವರಣ ಸೃಷ್ಟಿಸಿರುವುದಾಗಿ ಸೋಮಶೇಖರ್ ತಿಳಿಸಿದ್ದಾರೆ.
ಪೊಲೀಸರು ಮೀನಮೇಷ: ವಿಷಯ ತಿಳಿದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಸಂತ್ರಸ್ಥ ಸೋಮಶೇಖರ್ ಅವರ ಮನೆಗೆ ತೆರಳಿ ನಿಮ್ಮೊಂದಿಗೆ ನಾವಿರು ವುದಾಗಿ ಧೈರ್ಯ ತುಂಬಿದ್ದಲ್ಲದೆ, ಠಾಣೆಗೆ ತೆರಳಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮುಸ್ಲಿಂ ಪರ ನಿಂತಿದ್ದು, ಮುಸ್ಲಿಂ ಸಮುದಾಯದಿಂದಲೂ ಪ್ರತಿ ದೂರು ಕೊಡಿಸಿರುವುದರಿಂದ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಂತ್ರಸ್ಥರು ಹಾಗೂ ಕಾರ್ಯಕರ್ತರು ಆರೋಪಿಸಿದರು.
ಡಿವೈಎಸ್‌ಪಿಗೆ ಮನವಿ ಸಲ್ಲಿಕೆ: ಈ ಹಿನ್ನಲೆಯಲ್ಲಿ ಪಟ್ಟಣದ ಡಿವೈಎಸ್‌ಪಿ ಕಚೇರಿ ಎದುರು ಸಂತ್ರಸ್ಥರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಏ.7ರ ಶುಕ್ರವಾರ ಸ್ವಯಂ ಘೋಷಿತ ಶ್ರೀರಂಗಪಟ್ಟಣ ಬಂದ್‌ಗೆ ಕರೆ ನೀಡುತ್ತಿದ್ದು, ಮುಂದಿನ ಎಲ್ಲಾ ಆಗುಹೋಗುಗಳಿಗೆ ಪೊಲೀಸರೇ ನೇರ ಹೊಣೆ ಎಂದು ಡಿವೈಎಸ್‌ಪಿ ಮುರಳಿ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಹೊಸಆನಂದೂರು ಬಸವರಾಜು, ಭಜರಂಗದಳ ವಿಭಾಗ ಸಂಚಾಲಕ ಬಾಲಕೃಷ್ಣ, ಜಿಲ್ಲಾ ಸಂಚಾಲಕ ಪುನೀತ್, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಚಂದನ್, ತಾಲೂಕು ಕಾರ್ಯದರ್ಶಿ ಸುನೀಲ್, ಸಂಚಾಲಕ ಶಂಕರ್, ಸಹ ಸಂಚಾಲಕ ಸಂತೋಷ್, ವಕೀಲ ರವೀಶ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.