Advertisement

ಹಿಂದೂ ಸಮಾಜ ಜಾಗೃತಗೊಳ್ಳಬೇಕು: ಮುತಾಲಿಕ್‌

01:21 AM Apr 16, 2022 | Team Udayavani |

ಗಂಗೊಳ್ಳಿ: ದೇಶದಲ್ಲಿ ದೊಡ್ಡ ಪ್ರಮಾಣದ ಜಾಗೃತಿ ಆಗುತ್ತಿದೆ. ಗಂಗೊಳ್ಳಿಯಲ್ಲಿ ಗೋಹತ್ಯೆ ವಿಚಾರವಾಗಿ ಆರಂಭವಾದ ಬೃಹತ್‌ ಹೋರಾಟ ಅನೇಕ ಬದಲಾವಣೆಗೆ ಕಾರಣವಾಗಿದೆ. ಹಿಂದೂ ಸಮಾಜ ಇನ್ನಷ್ಟು ಜಾಗೃತಗೊಂಡರೆ ಯಾವ ದುಷ್ಟ ಶಕ್ತಿಯೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರತಿಪಾದಿಸಿದರು.

Advertisement

ಅವರು ಶುಕ್ರವಾರ ಹಿಂದು ಜಾಗರಣ ವೇದಿಕೆ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಿದ ಸಾಮೂಹಿಕ ಸತ್ಯನಾರಾಯಣ ಪೂಜೆ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು.

ಸರಕಾರ ನನ್ನನ್ನು ನಿರ್ಬಂಧಿಸಿ ದ್ದರಿಂದ ನೇರವಾಗಿ ಭಾಗವಹಿಸಲು ಸಾಧ್ಯ ವಾಗಿಲ್ಲ. ಅನೇಕ ವರ್ಷಗಳ ಹಿಂದೂ ಸಮಾಜ ಜಾಗೃತಿಯ ಹೋರಾಟದಲ್ಲಿ ಒಂದಿಂಚೂ ಹಿಂದೆ ಸರಿದಿಲ್ಲ ಎಂದರು.

ಮುತಾಲಿಕ್‌ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರೂ ಅವರು ಅನಾರೋಗ್ಯದಿಂದ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ:ಅಂಜನಾದ್ರಿ ಮೆಟ್ಟಿಲು ಹತ್ತುವ ವೇಳೆ ಹೃದಯಾಘಾತ : ಮುಂಬೈ ಮೂಲದ ಪ್ರವಾಸಿಗ ಸಾವು

Advertisement

ಒಳ್ಳೆಯ ಬೆಳವಣಿಗೆ
ಸಮಾಜದ ಶಾಂತಿ ಕೆಡಿಸುವಂತಹ ಅನೇಕ ಘಟನೆಗಳು ನಡೆಯುತ್ತಿದ್ದು, ಹಿಂದು ಸಮಾಜ ಈ ಬಗ್ಗೆ ಜಾಗೃತಗೊಳ್ಳಬೇಕು. ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುತ್ತಿರು ವುದು ಒಳ್ಳೆಯ ಬೆಳವಣಿಗೆ. ನಾವು ಜಾಗೃತರಾದರೆ ಮಾತ್ರ ಧರ್ಮ ಉಳಿಯುವುದು ಎನ್ನುವುದಾಗಿ ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಹೇಳಿದರು. ಹಿಂದು ಜಾಗರಣ ವೇದಿಕೆ ದ. ಕರ್ನಾಟಕ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತ್ಯಾಯ ದಿಕ್ಸೂಚಿ ಭಾಷಣ ಮಾಡಿದರು.

ಶ್ರೀ ವರಲಕ್ಷ್ಮೀ ಚಾರಿಟೆಬಲ್‌ ಟ್ರಸ್ಟ್‌ ಉಪ್ಪುಂದದ ಮ್ಯಾನೇಜಿಂಗ್‌ ಟ್ರಸ್ಟಿ ಡಾ| ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಾಯಕವಾಡಿ ಶ್ರೀ ಸಂಗಮೇಶ್ವರ ದೇಗುಲದ ಕಾರ್ಯದರ್ಶಿ ಜಿ. ಸುಬ್ಬ, ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇಗುಲದ ಪಾತ್ರಿ ನಾಗರಾಜ ಖಾರ್ವಿ, ಕೋಟಿ ಚೆನ್ನಯ್ಯ ಗರಡಿಯ ಪಾತ್ರಿ ರಾಘವೇಂದ್ರ ಪೂಜಾರಿ, ಹಿಂದು ಜಾಗರಣ ವೇದಿಕೆ ಉಡುಪಿಯ ಪ್ರಶಾಂತ್‌ ನಾಯಕ್‌ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಬೃಹತ್‌ ಶೋಭಾಯಾತ್ರೆ ನಡೆಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಗೋವಿಂದ್ರಾಯ ಶೇರುಗಾರ್‌ ಸ್ವಾಗತಿಸಿ, ಯಶವಂತ್‌ ಗಂಗೊಳ್ಳಿ ಪ್ರಸ್ತಾವಿಸಿದರು. ಸುಂದರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಬಿಗಿ ಬಂದೋಬಸ್ತ್
ಪ್ರಮೋದ್‌ ಮುತಾಲಿಕ್‌ ಅವರಿಗೆ ಕಾರ್ಯಕ್ರಮಕ್ಕೆ ನಿರ್ಬಂಧ ಹಿನ್ನೆಲೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಗಂಗೊಳ್ಳಿಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next