Advertisement
ಹಿಂದೂ ಸಮಾಜವನ್ನು ಕೆದಕಬೇಡಿ, ಬೆಳ್ಮಣ್ ಪರಿಸರ ಅತ್ಯಂತ ಶಾಂತವಾಗಿತ್ತು. ಮತಾಂತರ ಮಾಡುವ ಮೂಲಕ ಹಾಲಿಗೆ ವಿಷ ಬೆರೆಸುವ ಕಾರ್ಯವಾಗಿದೆ. ಇದನ್ನು ಇಲ್ಲಿಗೆ ನಿಲ್ಲಿಸಿ. ಮುಂದುವರಿದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ ಎಂದರು.
ಭಗವದ್ಗೀತೆ, ರಾಮಾಯಣ, ಮಹಾಭಾರತದ ಕುರಿತು ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ. ಧರ್ಮದ ಚಿಂತನೆ ಮನೆ-ಮನಗಳಲ್ಲಿ ನೆಲೆಸಬೇಕು. ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡದೇ ನಮ್ಮತನವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಇದರಿಂದ ಧರ್ಮ ಮತ್ತಷ್ಟು ಸಮೃದ್ಧವಾಗುವುದು ಎಂದರು. ಅಲ್ಪಸಂಖ್ಯಾಕರೆಂದು ಮೀಸಲಾತಿ ಒದಗಿಸಿ, ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾಕರ ನಡುವೆ ಕಂದಕ ಸೃಷ್ಟಿಸಲಾಗುತ್ತಿದೆ. ನಾವೆಲ್ಲರೂ ಭಾರತೀಯರೆಂಬ ನೆಲೆಯಲ್ಲಿ ಒಂದೇ ರೀತಿಯ ನಿಯಮ ಜಾರಿಯಾಗಬೇಕು. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ದೃಢ ನಿರ್ಧಾರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಪ್ರಭಾಕರ್ ಭಟ್ ಅಭಿಪ್ರಾಯಪಟ್ಟರು.
Related Articles
Advertisement
ಉಡುಪಿ ಎ.ಎಸ್.ಪಿ. ಕುಮಾರಚಂದ್ರ ಅವರಿಗೆ ಬಜರಂಗ ದಳ ಹಾಗೂ ವಿಹಿಂಪದಿಂದ ಮತಾಂತರ ತಡೆಗಟ್ಟುವಂತೆ ಮನವಿ ನೀಡಲಾಯಿತು. ಸುಮಾರು 150ಕ್ಕಿಂತ ಹೆಚ್ಚು ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಬಜರಂಗ ದಳ ಜಿಲ್ಲಾ ಸುರಕ್ಷಾ ಪ್ರಮುಖ್ ಮಹೇಶ್ ಬೈಲೂರು ಸ್ವಾಗತಿಸಿ, ಅಶೋಕ್ ನಾರಾವಿ ನಿರೂಪಿಸಿ, ಜಯಪ್ರಕಾಶ್ ಪ್ರಭು ವಂದಿಸಿದರು.