Advertisement

ಮಸೀದಿಯಲ್ಲಿ ಹಿಂದೂ ಮದುವೆ : ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕೇರಳದ ಅಲೆಪ್ಪಿ

10:00 AM Jan 20, 2020 | sudhir |

– ಚೆರುವಲ್ಲಿ ಮುಸ್ಲಿಂ ಜಮಾತ್‌ ಮಸೀದಿ ಆಡಳಿತ ಮಂಡಳಿಯೇ ಆಯೋಜಿಸಿದ್ದ ಮದುವೆ
– ಹಿಂದೂ ಸಂಪ್ರದಾಯದ ಮದುವೆಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಅಂಜು-ಶರತ್‌
– ವಧುವಿನ ಕುಟುಂಬದ ಬಡತನಕ್ಕೆ ಕರಗಿ ಮಸೀದಿಯಲ್ಲಿ ಮದುವೆಗೆ ಅನುವು
– ನವಜೋಡಿಗೆ ಮಸೀದಿ ವತಿಯಿಂದ 8 ಸವರನ್‌ ಚಿನ್ನ ಉಡುಗೊರೆ

Advertisement

ಅಲೆಪ್ಪಿ (ಕೇರಳ): ಕೋಮು ಸೌಹಾರ್ದತೆಗೆ ಹೊಸ ಉದಾಹರಣೆ ಎಂಬಂತೆ, ಕೇರಳದ ಅಲೆಪ್ಪಿಯ ಚೆರುವಲ್ಲಿ ಮುಸ್ಲಿಂ ಜಮಾತ್‌ ಮಸೀದಿಯಲ್ಲಿ ಹಿಂದೂ ಜೋಡಿಯ ವಿವಾಹವೊಂದು ಭಾನುವಾರ ಜರುಗಿದೆ.

ಮಸೀದಿಯ ಆಡಳಿತ ಮಂಡಳಿಯೇ ಆಯೋಜಿಸಿದ್ದ ಈ ಮದುವೆಯಲ್ಲಿ ಅಂಜು ಮತ್ತು ಶರತ್‌ ಎಂಬ ಯುವಜೋಡಿ, ತಮ್ಮ ಬಂಧುಮಿತ್ರರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದೆ.

ನವಜೋಡಿಗೆ ಮಸೀದಿ ಆಡಳಿತ ಮಂಡಳಿ 8 ಸವರನ್‌ ಚಿನ್ನವನ್ನು ಉಡುಗೊರೆಯಾಗಿ ನೀಡಿದೆ.

ವಧು ಅಂಜುವಿನ ಮನೆಯವರು ಮದುವೆಯ ಖರ್ಚನ್ನೂ ನಿಭಾಯಿಸದಷ್ಟು ಬಡವರಾಗಿದ್ದ ಹಿನ್ನೆಲೆಯಲ್ಲಿ, ಅವರ ಕಷ್ಟಕ್ಕೆ ಸ್ಪಂದಿಸಿರುವ ಮಸೀದಿಯ ಆಡಳಿತ ಮಂಡಳಿ ಈ ಮದುವೆ ನೆರವೇರಿಸಿಕೊಟ್ಟಿದೆ.

Advertisement

ಪಿಣರಾಯಿ ಶ್ಲಾಘನೆ:
ಮದುವೆಯ ಫೋಟೋ ಟ್ವೀಟ್‌ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್‌, “”ಕೇರಳ ರಾಜ್ಯದ ಜನತೆ ಯಾವತ್ತೂ ಒಗ್ಗಟ್ಟಿನಿಂದ ಬಾಳುವಂಥವರಾಗಿದ್ದು ಯಾವುದೇ ಅನ್ಯ ಶಕ್ತಿ ಈ ಒಗ್ಗಟ್ಟನ್ನು ಒಡೆಯಲು ಸಾಧ್ಯವಿಲ್ಲ” ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next