Advertisement
ಪಟ್ಟಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ಶ್ರೀರಾಮನವಮಿ ಹಾಗೂ ಹನುಮಾನ ಜಯಂತ್ಯುತ್ಸವ ನಿಮಿತ್ತ ಕ್ಷಾತ್ರ ಸಮಾವೇಶಕ್ಕೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತ್ತಾಲಿಕ ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತಿದೆ.
Related Articles
Advertisement
ಕ್ಷಾತ್ರ ಸಮಾವೇಶ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಕೇಸರಿ ಧ್ವಜ, ಬಂಟಿಂಗ್ಸ್, ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸಮಾವೇಶ ಜರುಗಲಿದ್ದು, 10 ಸಾವಿರಕ್ಕೂ ಅಧಿಧಿಕ ಜನಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಮೂವರು ಡಿವೈಎಸ್ಪಿ, ಎಂಟು ಜನ ಸಿಪಿಐ, 15 ಪಿಎಸ್‌ಐ, 60 ಎಎಸ್‌ಐ, 200 ಪೊಲೀಸ್ ಪೇದೆ, ನಾಲ್ವರು ಡಿಎಆರ್, ಇಬ್ಬರು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗುತ್ತಿದೆ ಎಂದು ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ತಿಳಿಸಿದ್ದಾರೆ.
ಮೆರವಣಿಗೆ ಪ್ರಾರಂಭವಾಗುವ ಷಣ್ಮುಖ ಶಿವಯೋಗಿ ಮಠದಿಂದ ಪದವಿ ಪೂರ್ವ ಕಾಲೇಜಿನ ವರೆಗೆ ಪಿಕೇಟಿಂಗ್, ಬ್ಯಾರಿಕೇಡ್, ಫಿಕ್ಸ್ ಪಾಯಿಂಟ್‌ಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.