Advertisement

27ರಿಂದ ಗೋವಾದಲ್ಲಿ ಹಿಂದೂ ಅಧಿವೇಶನ

11:20 PM May 13, 2019 | Lakshmi GovindaRaj |

ಬೆಂಗಳೂರು: ಹಿಂದೂ ರಾಷ್ಟ್ರ ಸ್ಥಾಪನೆ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮೇ 27 ರಿಂದ ಜೂನ್‌ 8ರವರೆಗೆ ಗೋವಾದಲ್ಲಿ 8ನೇ “ಅಖಿಲ ಭಾರತೀಯ ಹಿಂದೂ ಅಧಿವೇಶನ’ ಹಮ್ಮಿಕೊಳ್ಳಲಾಗಿದೆ.

Advertisement

ಅಧಿವೇಶನದಲ್ಲಿ ಹಿಂದೂ ಸಂಘಟನೆಗಳು ಮತ್ತು ಸಂಪ್ರದಾಯದವರು ರಾಷ್ಟ್ರಹಿತ ಮತ್ತು ಧರ್ಮಹಿತಕ್ಕಾಗಿ ಯೋಗದಾನ ನೀಡುವುದು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಸೇರಿ ಇತ್ಯಾದಿ ವಿಚಾರಗಳ ಚರ್ಚೆ, ಮುಂದಿನ ದಿನಗಳಲ್ಲಿ ಪ್ರಾಂತ್ಯವಾರು ನಡೆಯಬೇಕಾದ ಅಧಿವೇಶನಗಳು ಹಾಗೂ ಹಿಂದೂಹಿತ ನಿರ್ಧಾರಗಳಿಗೆ ಸಮ್ಮತಿಸುವ ಚಟುವಟಿಕೆಗಳು ನಡೆಯಲಿವೆ.

ಅಧಿವೇಶನದ ಭಾಗವಾಗಿ ಮೇ 27, 28 ರಂದು ಧರ್ಮಪ್ರೇಮಿ ನ್ಯಾಯವಾದಿಗಳ ಅಧಿವೇಶನ, 28ರಂದು ಉದ್ಯಮಿಗಳ ಅಧಿವೇಶನ ಹಾಗೂ ಮೇ 29 ರಿಂದ ಜೂನ್‌ 4ರವರೆಗೆ ಅಖಿಲ ಭಾರತ ಹಿಂದೂ ಅಧಿವೇಶನ, ಜೂನ್‌ 5ರಿಂದ 8ರವರೆಗೆ ಹಿಂದೂ ರಾಷ್ಟ್ರ ಸಂಘಟಕರ ಪ್ರಶಿಕ್ಷಣ ಮತ್ತು ಅಧಿವೇಶನ ನಡೆಯಲಿದೆ.

ಈ ಹಿಂದಿನ ಏಳು ಅಧಿವೇಶನಗಳಲ್ಲಿ ಸಾಕಷ್ಟು ಬೆಂಬಲ, ಪ್ರೋತ್ಸಹ ದೊರಕಿತ್ತಲ್ಲದೇ ದೇಶದ ವಿವಿಧ ರಾಜ್ಯಗಳ ನೂರಾರು ಹಿಂದು ಸಂಘಟನೆಗಳು, ಸಾವಿರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಬಾರಿ ಅಧಿವೇಶನದ ವ್ಯಾಪ್ತಿಯು ವಿಸ್ತಾರಗೊಂಡಿದ್ದು, ವಿಶೇಷವಾಗಿ ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ, ಮಲೇಶಿಯಾ, ಬಾಂಗ್ಲಾ ದೇಶಗಳಿಂದಲೂ ಹಿಂದೂ ಸಂಘಟನೆಗಳು, ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

“ಈ ಹಿಂದಿನ ಅಧಿವೇಶನಗಳು ಸಾಕಷ್ಟು ಉಪಯುಕ್ತವಾಗಿದ್ದು, ಅದರ ಪ್ರೇರಣೆಯಿಂದ 96 ಪ್ರಾಂತೀಯ ಹಿಂದೂ ಅಧಿವೇಶನಗಳು ನಡೆದಿವೆ. ಹಿಂದೂ ರಾಷ್ಟ್ರ ಹಾಗೂ ಧರ್ಮದ ಅಪಮಾನ, ಅವಹೇಳನ ಕೃತ್ಯಗಳ ವಿರುದ್ಧ ವ್ಯಾಪಕ ಜಾಗೃತಿ ಉಂಟಾಗಿದೆ.

Advertisement

ಉದ್ಯಮಿಗಳ ಪರಿಷತ್ತಿನ ಸ್ಥಾಪನೆ ಅದರಡಿ ವಿವಿಧ ಶಿಬಿರಗಳು, ರಾಷ್ಟ್ರೀಯ ಪತ್ರಕರ್ತರ ಪೀಠ, ಆರೋಗ್ಯ ಸಹಾಯ ಸಮಿತಿ ಸ್ಥಾಪನೆ, ಮಧ್ಯಪ್ರದೇಶದಲ್ಲಿ ಭೋಜಶಾಲಾ ಮುಕ್ತಿ ಆಂದೋಲನ, ತಿರುಪತಿ ಪಾವಿತ್ರತೆ ರಕ್ಷಣೆಯ ಆಂದೋಲನದ ರಾಷ್ಟ್ರೀಕರಣ, ಬಾಂಗ್ಲಾ ದೇಶದಲ್ಲಾಗುತ್ತಿರುವ ಗೋ ಕಳ್ಳಸಾಗಣೆಗೆ ವಿರೋಧ, ಉತ್ತರಾಖಂಡ, ನೇಪಾಳದ ನೆರೆಪೀಡಿತ,

ಭೂಕಂಪನ ಪ್ರದೇಶದಲ್ಲಿ ಸಹಾಯ ಕಾರ್ಯಕ್ರಮ, ನಿರಾಶ್ರಿತ ಕಾಶ್ಮೀರಿ ಹಿಂದೂಗಳ ಪುನರ್‌ವಸತಿಗಾಗಿ “ಏಕ ಭಾರತ ಅಭಿಯಾನ್‌ – ಕಾಶ್ಮೀರ ಕಿ ಓರ್‌’ ಸಭೆಗಳು, ಮಹಾನ್‌ ಹಿಂದು ನಾಯಕರ ತ್ತೈಮಾಸಿಕ ಸಭೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಈ ಬಾರಿಯ ಗೋವಾ ಅಧಿವೇಶನ ಆಯೋಜಕ ನಾಗೇಶ ಗಾಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next