Advertisement

ಲೇಖಕಿ ಕೃಷ್ಣಾ  ಸೋಬ್ತಿಗೆ ಜ್ಞಾನಪೀಠ

11:32 AM Nov 04, 2017 | Team Udayavani |

ಹೊಸದಿಲ್ಲಿ: ಪ್ರಸಕ್ತ ಸಾಲಿನ ಜ್ಞಾನಪೀಠ ಪ್ರಶಸ್ತಿ ಹಿಂದಿ ಸಾಹಿತಿ ಕೃಷ್ಣಾ ಸೋಬ್ತಿ (92) ಅವರಿಗೆ ನೀಡಲು ತೀರ್ಮಾನಿಸಲಾಗಿದೆ.

Advertisement

 1925ರಲ್ಲಿ ಈಗಿನ ಪಾಕಿಸ್ಥಾನದ ಗುಜರಾತ್‌ ಎಂಬಲ್ಲಿ ಸೋಬ್ತಿ ಜನಿಸಿದರು. ತಮ್ಮ ಸಣ್ಣ ಕತೆಗಳಲ್ಲಿ ಕ್ರಾಂತಿಕಾರಕ ಶೈಲಿಗಳನ್ನು ಅಳವಡಿಸಿದ ಹೆಗ್ಗಳಿಕೆ ಕೃಷ್ಣಾರದ್ದು. ಹಿಂದಿ, ಉರ್ದು ಮತ್ತು ಪಂಜಾಬಿ ಸಂಸ್ಕೃತಿಯ ಜೀವನ ಕ್ರಮ ಅವರ ಲೇಖನ, ಸಣ್ಣ ಕತೆಗಳಲ್ಲಿ ಗೋಚರಿಸುತ್ತಿತ್ತು. 1952ರಲ್ಲಿ “ಚನ’ ಎಂಬುದು ಅವರ ಮೊದಲ ಕಾದಂಬರಿ.  ಒಟ್ಟು ಏಳು ಕಾದಂಬರಿಗಳು, ನಾಲ್ಕು ಸಣ್ಣ ಕತೆ, ಐದು ಅನುವಾದಿತ ಕೃತಿಗಳನ್ನು ಹಿಂದಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. 1980ರಲ್ಲಿ “ಝಿಂದಾಜಿನಮಾ’ ಎಂಬ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1996ರಲ್ಲಿ ಅಕಾಡೆಮಿಯ ಫೆಲೋಶಿಪ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next