Advertisement
ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 25 ಮಂದಿಯನ್ನು ಕಾಯಿಲೆ ಬಲಿ ತೆಗೆದುಕೊಂಡಿದೆ. ಮಂಗನ ಕಾಯಿಲೆ ಈ ಬಾರಿಯೂ ಈಗಾಗಲೇ ಒಂದೇ ತಿಂಗಳಲ್ಲಿ ನಾಲ್ಕು ಮಂದಿಯ ಜೀವ ತೆಗೆದಿರುವುದು ಸಾಕಷ್ಟು ಆತಂಕವನ್ನುಂಟು ಮಾಡಿದೆ ಎಂದರು.
ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹತ್ತು ಹಲವು ಸಂಘ-ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಸಹ್ಯಾದ್ರಿ ಉತ್ಸವದಲ್ಲಿ ಜಿಲ್ಲಾಡಳಿತ ಮುಳುಗಿತ್ತು. ಜಿಲ್ಲಾಡಳಿತದ ನಿರ್ಲಕ್ಷ್ಯವೇ ಹಲವು ಜೀವಗಳಿಗೆ ಪರೋಕ್ಷ ಕಾರಣವಾಗಿತ್ತು ಎಂದು ಆರೋಪಿಸಿದರು.
Related Articles
Advertisement
ಕಳೆದ ಐವತ್ತು ವರ್ಷದ ಹಿಂದೆ ಸಂಶೋಧನೆಗೊಂಡ ಚುಚ್ಚುಮದ್ದನ್ನು ಈಗಲೂ ನೀಡಲಾಗುತ್ತಿದೆ. ಆದರೆ ವೈರಸ್‌ನಲ್ಲಿ ಆದ ಬೆಳವಣಿಗೆಗೆ ತಕ್ಕಂತೆ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಸಂಶೋಧಿಸದೆ ಹಳೆಯ ಮಾದರಿಯ ಚುಚ್ಚುಮದ್ದುಗಳನ್ನು ನೀಡುತ್ತಿದ್ದು, ಜನರು ಮುಂಜಾಗ್ರತೆಯಾಗಿ ಚುಚ್ಚುಮದ್ದು ಪಡೆದರೂ ಸಹ ಮಂಗನ ಕಾಯಿಲೆಯಿಂದ ಜನರು ಬಳಲುವಂತಾಗಿದೆ ಎಂದು ಆರೋಪಿಸಿದರು.
ಈ ಬಾರಿ ಕೂಡ ಜಿಲ್ಲಾಡಳಿತ ಮುಂಜಾಗ್ರತೆಯಾಗಿ ಚುಚ್ಚುಮದ್ದು ವಿಷಯದಲ್ಲಾಗಲಿ, ಮಂಗನ ಸಾವಿನ ಪತ್ತೆ ಕೂಂಬಿಂಗ್ ಆಗಲಿ, ಕನಿಷ್ಠ ಜನಜಾಗೃತಿಯ ಕ್ರಮವನ್ನಾಗಲಿ ಮುಂಚಿತವಾಗಿ ಕೈಗೊಂಡಿಲ್ಲ. ಲೋಪಗಳ ಫಲವಾಗಿ ಇದೀಗ ಮತ್ತೆ ನಾಲ್ಕು ಮುಗ್ಧ ಜೀವಗಳು ಬಲಿಯಾಗಿವೆ ಎಂದರು. ಕಳೆದ ಬಾರಿ ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ ಸರ್ಕಾರ, ಈವರೆಗೆ ಖಾಸಗಿ ಆಸ್ಪತ್ರೆಗೆ ಹಣ ಪಾವತಿ ಮಾಡಿಲ್ಲ. ಈ ಕಾರಣಕ್ಕೆ ಕೆಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಚಿಕಿತ್ಸಾ ವೆಚ್ಚವನ್ನು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ನೋಡಿಕೊಂಡು ಸೋಂಕಿತರ ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಆದರೆ ಈ ವಿಷಯ ಜಿಲ್ಲಾಡಳಿತ ಕಡೆಯಿಂದ ಸಾಕಷ್ಟು ಲೋಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷವೇ ಸಾಗರದಲ್ಲಿ ವೈರಾಣು ರೋಗ ಸಂಶೋಧನೆಗಾಗಿ ವಿಶೇಷ ಪ್ರಯೋಗಾಲಯ ಆರಂಭಿಸಲು ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಿದೆ. ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು. ಜಿಲ್ಲೆಯ ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಅಗತ್ಯ ಚುಚ್ಚುಮದ್ದು ಸೇರಿದಂತೆ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಬೇಕು ಎಂದರು.
ಸಾಗರದಲ್ಲಿ ಕೆಎಫ್‌ಡಿ ವೈರಾಣು ಸಂಶೋಧನಾ ಕೇಂದ್ರದ ಆರಂಭಿಸಲು ಶೀಘ್ರಗತಿಯಲ್ಲಿ ಕೆಲಸ ಆರಂಭಿಸಬೇಕು. ಈ ನಮ್ಮ ಹಕ್ಕೊತ್ತಾಯಗಳನ್ನು ಮುಂದಿನ ಹದಿನೈದು ದಿನಗಳಲ್ಲಿ ಈಡೇರಿಸದೇ ಇದ್ದಲ್ಲಿ ವಿವಿಧ ಸಂಘಟನೆಗಳೊಂದಿಗೆ ಜಿಲ್ಲೆಯ ನಾಗರಿಕರನ್ನು ಸಂಘಟಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಹೋರಾಟಗಾರರಾದ ಕೆ.ಪಿ. ಶ್ರೀಪಾಲ್, ಶಶಿ ಸಂಪಳ್ಳಿ, ಎಂ. ಗುರುಮೂರ್ತಿ, ರಾಜಪ್ಪ, ಮಂಜುನಾಥ್ ನವುಲೆ, ಚಟ್ನಳ್ಳಿ ನಾಗರಾಜ್, ರವಿ, ಮಾಲತೇಶ್ ಮತ್ತಿತರರು ಇದ್ದರು.