Advertisement

ವಕೀಲ ವೃತ್ತಿಯಿಂದ ಸಿಎಂ ಗಾದಿವರೆಗೆ ಹಿಮಾಂತ! ಅಸ್ಸಾಂ ಸಿಎಂ ಆಗಿ ಆಯ್ಕೆಯಾದ ಹಿಮಾಂತ ಹಿನ್ನೋಟ

02:31 AM May 10, 2021 | Team Udayavani |

ಗುವಾಹಾಟಿ: ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಹಿಮಾಂತ ಬಿಸ್ವಾ ಶರ್ಮಾ, ಈಶಾನ್ಯ ವಲಯದ ರಾಜಕೀಯ ರಂಗದ ಅತ್ಯಂತ ಪ್ರಭಾವಿ, ಚತುರ ರಾಜಕಾರಣಿಗಳಲ್ಲೊಬ್ಬರು. 2016ರಲ್ಲಿ ಹಾಗೂ 2021ರಲ್ಲಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೆಂದರೆ ಅದರ ಹಿಂದೆ ಹಿಮಾಂತ ಅವರ ಶ್ರಮ ಸಾಕಷ್ಟಿದೆ.

Advertisement

ಗುವಾಹಾಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದ ಹಿಮಾಂತ, 2001ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡಿದ್ದರು. ಅಲ್ಲಿಂದ 2015ರ ವರೆಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡವರು. 2001ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಜಲುಕ್‌ಬಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಎಜಿಪಿ ಅಭ್ಯರ್ಥಿ ಭಿಂಗು ಕುಮಾರ್‌ ಪುಕಾನ್‌ ವಿರುದ್ಧ ಗೆದ್ದಿದ್ದರು. 2006, 2011ರ ಲ್ಲಿಯೂ ಜಯಸಾಧಿಸಿದ್ದರು.2002ರಲ್ಲಿ ಆಗಿನ ಅಸ್ಸಾಂ ಸಿಎಂ ತರುಣ್‌ ಗೊಗೋಯ್‌ ನೇತೃತ್ವದ ಸರಕಾರದಲ್ಲಿ ಸಚಿವರಾಗಿ ಸೇರ್ಪಡೆಗೊಂಡಿದ್ದರು. 2011ರ ವರೆಗೂ ಅವರು ನಾನಾ ಇಲಾಖೆಗಳನ್ನು ನಿರ್ವಹಿಸಿದ್ದರು.

ಹಿಮಾಂತ-ಬಿಜೆಪಿ ಸಮಾಗಮ: 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ “ಕಾಂಗ್ರೆಸ್‌ ಮುಕ್ತ ಭಾರತ’ ಪರಿಕಲ್ಪನೆಯನ್ನು ಈಡೇರಿಸಲು ದೇಶದ ಎಲ್ಲೆಡೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕುತ್ತಿತ್ತು. ಆಗ ಅದರ ಕಣ್ಣಿಗೆ ಬಿದ್ದರು ಹಿಮಾಂತ. ಅದು ಮುಂದೆ, ಹಿಮಾಂತ ಅವರಿಗೆ ಬಿಜೆಪಿ ಜತೆಗೆ ಸಖ್ಯ ಬೆಳೆಯಲು ಕಾರಣವಾಯಿತು. 2015ರ ಆ. 23ರಂದು ಹೊಸದಿಲ್ಲಿಯಲ್ಲಿ ಹಿಮಾಂತ ಬಿಜೆಪಿ ಸೇರಿದರು.

ಅದರ ಮರುವರ್ಷವೇ ನಡೆದ ಅಸ್ಸಾಂ ಚುನಾವಣೆಯ ವೇಳೆ ಪಕ್ಷದ ಪರವಾಗಿ ಅತ್ಯುತ್ತಮ ರಣತಂತ್ರಗಳನ್ನು ಹೆಣೆದರು. ಹೀಗಾಗಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ ಮುಖ್ಯಮಂತ್ರಿಯಾಗಿದ್ದು ಆಗ ಕೇಂದ್ರದಲ್ಲಿ ಸಚಿವರಾಗಿದ್ದ ಸರ್ಬಾನಂದ ಸೊನೊವಾಲ್‌. ಬಿಜೆಪಿಗೆ ನಿಷ್ಠರಾಗಿ ಕೆಲವು ವಿಷಮ ಘಳಿಗೆಗಳಲ್ಲಿ ಪಕ್ಷವನ್ನು ವಿವಾದಗಳಿಂದ ಪಾರು ಮಾಡಿದರು. ಸಿಎಎ ವಿವಾದದಿಂದ ಪಕ್ಷವನ್ನು ಸುಲಭವಾಗಿ ಪಾರು ಮಾಡಿದರು.

ರಾಜಕೀಯ ಹೆಜ್ಜೆಗಳು: 1996ರಿಂದ 2001 - ಗುವಾಹಾಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ.
– 2001 – ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆ
– 2002-2004 – ಕೃಷಿ, ಯೋಜನೆ-ಅಭಿವೃದ್ಧಿ, ಹಣ ಕಾಸು, ಆರೋಗ್ಯ, ಶಿಕ್ಷಣ ಇತರ ಇಲಾಖೆಗಳ ಸಹಾಯಕ/ಕ್ಯಾಬಿನೆಟ್‌ ಸಚಿವರಾಗಿ ಸೇವೆ.
– ಆ. 23, 2015 – ಬಿಜೆಪಿ ಸೇರ್ಪಡೆ.
– ಮೇ 24, 2016 – ಸರ್ಬಾನಂದ ಸೊನೊವಾಲ್‌ ಸಂಪುಟಕ್ಕೆ ಸೇರ್ಪಡೆ; ಹಣಕಾಸು, ಆರೋಗ್ಯ, ಶಿಕ್ಷಣ, ಯೋಜನೆ-ಅಭಿವೃದ್ಧಿ, ಪ್ರವಾಸ, ಪಿಂಚಣಿ ಮತ್ತು ಸಾರ್ವ ಜನಿಕ ಕುಂದುಕೊರತೆ ಇಲಾಖೆಗಳ ನಿರ್ವಹಣೆ.

Advertisement

ರಾಹುಲ್‌ಗೆ ಟಾಂಗ್‌
ರಾಹುಲ್‌ ಗಾಂಧಿ ಕಾಂಗ್ರೆಸ್‌ ಉಪಾಧ್ಯಕ್ಷರಾಗಿದ್ದಾಗ 2016ರಲ್ಲಿ ಅಸ್ಸಾಂನ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ಹಿಮಾಂತ ಹೊಸದಿಲ್ಲಿಯಲ್ಲಿರುವ ರಾಹುಲ್‌ ನಿವಾಸಕ್ಕೆ ತೆರಳಿದ್ದರು. ಆಗ “ಪಿಡಿ’ ಎಂಬ ನಾಯಿಗೆ ಬಿಸ್ಕೆಟ್‌ ತಿನ್ನಿಸುವುದರಲ್ಲೇ ಮಗ್ನರಾಗಿದ್ದ ರಾಹುಲ್‌,ಅವರ ಮಾತುಗಳನ್ನು ಕೇಳಿಸಿಕೊಳ್ಳಲೇ ಇಲ್ಲ! 2017ರ ಅ. 29ರಂದು “ವೀಡಿಯೋàವನ್ನು ಟ್ವೀಟ್‌ ಮಾಡಿದ್ದ ರಾಹುಲ್‌, “ನನ್ನ ಪರವಾಗಿ ಯಾರು ಟ್ವೀಟ್‌ ಮಾಡುತ್ತಾ ರೆಂದು ಕೆಲವರು ಪ್ರಶ್ನಿಸಿದ್ದರು. ಈ ಪಿಡಿಯೇ ಟ್ವೀಟ್‌ ಮಾಡುತ್ತಿದೆ’ ಎಂದು ಬರೆದುಕೊಂಡಿದ್ದರು. ಅದಕ್ಕೆ ಉತ್ತರಿಸಿದ್ದ ಹಿಮಾಂತ “ರಾಹುಲ್‌, ಪಿಡಿಯನ್ನು ನನ ಗಿಂತ ಹೆಚ್ಚು ಬಲ್ಲವರು ಬೇರೊಬ್ಬರಿಲ್ಲ. ನಿಮ್ಮ ಭೇಟಿಗೆ ಬಂದಾಗ ನೀವು ಪಿಡಿಗೆ ಬಿಸ್ಕೆಟ್‌ ಹಾಕುವುದರಲ್ಲಿ ಬ್ಯುಸಿಯಾಗಿದ್ದಿರಿ ಎಂದು ಬರೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next