Advertisement

ಬಹುಪತ್ನಿತ್ವ, ಬಾಲ್ಯವಿವಾಹ ತ್ಯಜಿಸಿ: ಬಾಂಗ್ಲಾದೇಶಿ ಮುಸ್ಲಿಮರಿಗೆ ಹಿಮಂತ ಶರ್ಮಾ ಷರತ್ತು

03:33 PM Mar 24, 2024 | Team Udayavani |

ಹೊಸದಿಲ್ಲಿ: ‘ಮಿಯಾ’ ಎಂದು ಕರೆಯಲ್ಪಡುವ ಬಂಗಾಳಿ ಮಾತನಾಡುವ ಬಾಂಗ್ಲಾದೇಶಿ ಮುಸ್ಲಿಮರನ್ನು ರಾಜ್ಯದಲ್ಲಿ ಸ್ಥಳೀಯ ಜನರು ಎಂದು ಗುರುತಿಸಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಷರತ್ತುಗಳನ್ನು ವಿಧಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ನಂತರ ಅವರ ಈ ಹೇಳಿಕೆಗಳು ಮಹತ್ವ ಪಡೆದಿದೆ.

Advertisement

ಅಸ್ಸಾಂನಲ್ಲಿ ಮಿಯಾ ಸಮುದಾಯವನ್ನು ಗುರುತಿಸಲು, ಸಮುದಾಯದ ಜನರು ಕೆಲವು ಸಾಂಸ್ಕೃತಿಕ ಆಚರಣೆಗಳು ಮತ್ತು ರೂಢಿಗಳನ್ನು ಅನುಸರಿಸಬೇಕು ಎಂದು ಹಿಮಂತ ಶರ್ಮಾ ಪ್ರತಿಪಾದಿಸಿದರು.

ಕುಟುಂಬದ ಗಾತ್ರವನ್ನು ಎರಡು ಮಕ್ಕಳಿಗೆ ಸೀಮಿತಗೊಳಿಸುವುದು, ಬಹು ಪತ್ನಿತ್ವವನ್ನು ತಡೆಹಿಡಿಯುವುದು ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ವಿವಾಹವನ್ನು ತಡೆಯುವುದು ಮಿಯಾ ಸಮುದಾಯವನ್ನು ಈಶಾನ್ಯ ರಾಜ್ಯದಲ್ಲಿ ಸ್ಥಳೀಯರು ಎಂದು ಗುರುತಿಸಲು ಬೇಕಾದ ಕೆಲವು ಅವಶ್ಯಕತೆಗಳು ಎಂದು ಅವರು ಒತ್ತಿ ಹೇಳಿದರು.

“ಮಿಯಾಗಳು (ಬಂಗಾಳಿ ಮಾತನಾಡುವ ಮುಸ್ಲಿಮರು) ಸ್ಥಳೀಯರೇ ಅಥವಾ ಅಲ್ಲವೇ ಎಂಬುದು ಬೇರೆ ವಿಷಯ. ನಾವು ಹೇಳುತ್ತಿರುವುದು ಅವರು ಸ್ಥಳೀಯರಾಗಲು ಪ್ರಯತ್ನಿಸಿದರೆ ನಮಗೆ ಯಾವುದೇ ತೊಂದರೆಯಿಲ್ಲ. ಆದರೆ ಅದಕ್ಕಾಗಿ ಅವರು ಬಾಲ್ಯ ವಿವಾಹ ಮತ್ತು ಬಹುಪತ್ನಿತ್ವವನ್ನು ತ್ಯಜಿಸಬೇಕು. ಅಲ್ಲದೆ ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸಬೇಕು” ಎಂದು ಹಿಮಂತ ಶರ್ಮಾ ಶನಿವಾರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next