Advertisement

ಹಿ.ಪ್ರ: ಬಲವಂತ ಮತಾಂತರ ತಡೆ ವಿಧೇಯಕ ಮಂಡನೆ

12:30 AM Aug 30, 2019 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿನ ಬಿಜೆಪಿ ಸರ್ಕಾರ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಯಲು ವಿಧೇಯಕವನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿದೆ.

Advertisement

ಹಾಲಿ ಇರುವ ಕಾನೂನಿನಲ್ಲಿ ಬಲವಂತವಾಗಿ ಮತಾಂತರ ಮಾಡುವುದು ಸಾಬೀತಾದಲ್ಲಿ ಅವರಿಗೆ ಏಳು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗುತ್ತದೆ. ಹೊಸ ವಿಧೇಯಕದ ಬಗ್ಗೆ ಶುಕ್ರವಾರ ಚರ್ಚೆ ಕೈಗೆತ್ತಿಕೊಳ್ಳಲಾಗುತ್ತದೆ.

ಬಲವಂತವಾಗಿ, ತಪ್ಪು ಮಾಹಿತಿ ನೀಡುವುದು, ಮದುವೆ, ಆಮಿಷವೊಡ್ಡುವುದು ಸೇರಿದಂತೆ ಇನ್ನು ಯಾವುದೇ ಮಾರ್ಗದ ಮೂಲಕ ಮತಾಂತರ ಮಾಡುವುದು ಅಪರಾಧ ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಚರ್ಚೆಯ ಬಳಿಕ ವಿಧೇಯಕ ಅನುಮೋದನೆಗೊಂಡರೆ 2 ಸಾವಿರನೇ ಇಸ್ವಿಯಲ್ಲಿ ಜಾರಿಗೆ ತಂದ ಕಾನೂನಿನ ಸ್ಥಾನದಲ್ಲಿ ಹೊಸ ಕಾನೂನು ಜಾರಿಯಾಗಲಿದೆ.

ಒಂದು ವೇಳೆ ನಿಗದಿತ ವ್ಯಕ್ತಿ ಮತಾಂತರಗೊಂಡರೆ ಅದಕ್ಕೆ ಸಂಬಂಧಿಸಿದಂತೆ ಸೆಕ್ಷನ್‌ 7ರ ಪ್ರಕಾರ ಘೋಷಣೆಯನ್ನು ನೀಡಬೇಕಾಗುತ್ತದೆ. ಈ ಅಂಶ ಮರಳಿ ಮಾತೃ ಧರ್ಮಕ್ಕೆ ಮತಾಂತರವಾಗುವವರಿಗೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next