Advertisement

ಹಿಮಾಚಲ ಲೂಟಿಗೈದವರಿಗೆ ಜನ ವಿದಾಯ ಹೇಳಲಿದ್ದಾರೆ; ಕೈಗೆ ಮೋದಿ!

12:39 PM Nov 02, 2017 | Team Udayavani |

ನವದೆಹಲಿ: ಹಿಮಾಚಲ ಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ರಾಜ್ಯವನ್ನು ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದು, ಆ ನಿಟ್ಟಿನಲ್ಲಿ ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಲಿದ್ದಾರೆ ಎಂದು ಭವಿಷ್ಯ ನುಡಿದರು.

Advertisement

ಹಿಮಾಚಲಪ್ರದೇಶದ ಕಾಂಗ್ರಾ ಪ್ರದೇಶದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿಯೇ ತೊಡಗಿದ್ದಾರೆ. ಹೀಗಾಗಿ ಹಿಮಾಚಲ ಪ್ರದೇಶವನ್ನು ಯಾರು ಲೂಟಿ ಮಾಡಿದ್ದಾರೋ(ಕಾಂಗ್ರೆಸ್) ಅಂತವರಿಗೆ ನವೆಂಬರ್ 9ರಂದು ಮತದಾರರು ಬೀಳ್ಕೊಡುಗೆಯ ಅವಕಾಶ ನೀಡಲಿದ್ದಾರೆ  ಎಂದು ವ್ಯಂಗ್ಯವಾಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ 2012ರ ಡಿಸೆಂಬರ್ ತಿಂಗಳಿನಿಂದ ವೀರಭದ್ರ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಅಕ್ರಮ ಸಂಪತ್ತು ಹೊಂದಿರುವ ಆರೋಪದ ಪ್ರಕರಣವನ್ನು ಸಿಂಗ್ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next