ಶಿಮ್ಲಾ: ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಜನಾದೇಶದ ಸಂಪ್ರದಾಯವೊಂದು ಮತ್ತೆ ಮುಂದುವರಿಯುವ ಲಕ್ಷಣ ದಟ್ಟವಾಗಿ ತೋರುತ್ತಿದೆ. 1982ರಿಂದಲೂ ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರ ಅನುಭವಿಸುತ್ತಾ ಬಂದಿದೆ. ಇದೀಗ ಇದೇ ಸಂಪ್ರದಾಯ ಮುಂದುವರಿಯವುದು ಬಹತೇಕ ಖಚಿತವಾಗಿದೆ.
ಒಂದೊಂದೇ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆ ಸದ್ಯ ಅಧಿಕಾರದಲ್ಲಿರುವ ಬಿಜೆಪಿಯ ಮುನ್ನಡೆ ಕಡಿಮೆಯಾಗುತ್ತಿದೆ. ಕಾಂಗ್ರೆಸ್ ತನ್ನ ಮುನ್ನಡೆಯನ್ನು ಹೆಚ್ಚು ಮಾಡಿಸಿಕೊಳ್ಳುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಒಂದರಲ್ಲಿ ಗೆಲುವು ಸಾಧಿಸಿದೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ ಸ್ವತಂತ್ರ ಅಭ್ಯರ್ಥಿಗಳು ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ:ಗುಜರಾತ್ ನಲ್ಲಿ 41 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದ್ರೂ… ಮೋದಿ, ಶಾ ರಣತಂತ್ರ ಯಶಸ್ವಿ!
68 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಹುಮತ ಗಳಿಸಲು 35 ಸ್ಥಾನಗಳ ಅಗತ್ಯವಿದೆ.
2017 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 44 ಸ್ಥಾನಗಳನ್ನು, ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದುಕೊಂಡಿತು. ಒಂದು ಸ್ಥಾನ ಸಿಪಿಐ-ಎಂ, ಎರಡು ಸ್ಥಾನ ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿತ್ತು. ಕಳೆದ ಚುನಾವಣೆಯ ಟ್ರೆಂಡನ್ನು ಈ ವರ್ಷ ಬದಲಾಯಿಸಲು ಕಾಂಗ್ರೆಸ್ ಯೋಜಿಸಿದ್ದು, ಸದ್ಯದ ಫಲಿತಾಂಶ ಹಾಗೆಯೇ ಸಾಗುತ್ತಿದೆ.