Advertisement

IAAFಅಥ್ಲೆಟಿಕ್ಸ್ :ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದ ಹಿಮಾದಾಸ್‌!

02:32 PM Jul 13, 2018 | |

ಟ್ಯಾಂಪಿಯರ್ : 18 ರ ಹರೆಯದ ಓಟಗಾರ್ತಿ ಹಿಮಾ ದಾಸ್‌ ಅವರು ಫಿನ್ಲ್ಯಾಂಡ್ ನ‌ಲ್ಲಿ ನಡೆಯುತ್ತಿರುವ ಐಎಎಎಫ್ ಅಂಡರ್‌ 20 ಅಥ್ಲೆಟಿಕ್ಸ್‌  ಕೂಟದಲ್ಲಿ 400 ಮೀಟರ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. 

Advertisement

ಸ್ಪರ್ಧೆಯ ಮೂರನೇ ದಿನ ಮಹಿಳೆಯರ ವಿಭಾಗದ 400 ಮೀಟರ್‌ ಓಟವನ್ನು 51.46 ಸೆಕೆಂಡ್‌ಗಳಲ್ಲಿ ಪೂರೈಸಿ ಬಂಗಾರ ಗೆದ್ದಿದ್ದಾರೆ. ಸಾಧನೆಯೊಂದಿಗೆ ಎಲ್ಲಾ ವಯಸ್ಸಿನವರ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ  ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.  

ಐತಿಹಾಸಿಕ ಸಾಧನೆ ಮಾಡಿದ ಹಿಮಾಗೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next