ನವದೆಹಲಿ: ಫಿನ್‌ಲ್ಯಾಂಡ್‌ನಲ್ಲಿ ನಡೆದ ಅಥ್ಲೆಟಿಕ್ಸ್ ವಿಶ್ವಚಾಂಪಿಯನ್‌ಶಿಪ್‌ನ ಕಿರಿಯರ 400 ಮೀ. ವಿಭಾಗದಲ್ಲಿ ಚಿನ್ನ ಗೆದ್ದು ಹಿಮಾ ದಾಸ್ ಮನೆ ಮಾತಾಗಿದ್ದಾರೆ. ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ ಅವರಿಗೆ ನಗದು ಬಹುಮಾನ ಘೋಷಿಸಿವೆ. ಅದರ ಬೆನ್ನಲ್ಲೇ ಫಿನ್‌ಲ್ಯಾಂಡ್‌ನ ಭಾರತೀಯರೂ ಕೂಡ ಹಿಮಾಗೆ 1 ಲಕ್ಷ ರೂ. ನೀಡಿ ಗೌರವಿಸಿದ್ದಾರೆ. ತಾವಿರುವ ದೇಶದಲ್ಲಿ ಭಾರತೀಯರೊಬ್ಬರು ಅದ್ಭುತ ಸಾಧನೆ ಮಾಡಿದ ಘಟನೆಯಿಂದ ಪ್ರೇರಿತರಾದ ಫಿನ್‌ಲ್ಯಾಂಡ್ ಭಾರತೀಯರು ತಕ್ಷಣವೇ ಪರಸ್ಪರ ಮಾತಾಡಿಕೊಂಡು ಹಣ ಸಂಗ್ರಹಿಸಿದ್ದಾರೆ. ಮೊನ್ನೆ ಭಾನುವಾರ ಆ ಮೊತ್ತವನ್ನು ಹಿಮಾಗೆ ತಲುಪಿಸಿದ್ದಾರೆ.
ಪುರುಷರೊಂದಿಗೆ ತರಬೇತಿಯ ಆಸೆ
ಹಿಮಾ ದಾಸ್ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪುರುಷ ಅಥ್ಲೀಟ್‌ಗಳೊಂದಿಗೆ ತರಬೇತಿ ನಡೆಸಲು ಬಯಸಿದ್ದಾರೆಂದು ತರಬೇತುದಾರ ನಿಪಾನ್ ದಾಸ್ ಹೇಳಿದ್ದಾರೆ. ಹಿಮಾ ದಾಸ್ ಪ್ರಾಮಾಣಿಕಳಾದ, ಪರಿಶ್ರಮಿ ವ್ಯಕ್ತಿ. ಎಲ್ಲವನ್ನೂ ಏಕಾಗ್ರತೆಯಿಂದ ಮಾಡುತ್ತಾಳೆ. ಭಿನ್ನವಾಗಿ
ಯೋಚಿಸುವ ಹಿಮಾ, ಪುರುಷರೊಂದಿಗೆ ತರಬೇತಿ ಪಡೆದು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಯಸಿದ್ದಾರೆಂದು ನಿಪಾನ್ ಹೇಳಿಕೊಂಡಿದ್ದಾರೆ