ನ್ಯೂಯಾರ್ಕ್: ಕಲ್ಲು ಬಂಡೆಗಳ ನಡುವೆ ಸಾಹಸಿಗನೊಬ್ಬ ಬೈಕ್ ಸವಾರಿ ಮಾಡುತ್ತಿದ್ದ ವೇಳೆ 70 ಅಡಿ ಆಳದ ಪ್ರಪಾತಕ್ಕೆ ಬಿದ್ದು ಪವಾಡ ಸದೃಶವಾಗಿ ಬದುಕುಳಿದು ಬಂದ ಘಟನೆ ಅಮೇರಿಕಾದ ಕೊಲರಾಡೋ ಪ್ರದೇಶದಲ್ಲಿ ನಡೆದಿದೆ.
ಟೆಕ್ಸಾಸ್ ಮೂಲದ ಬೈಕ್ ಸಾಹಸಿಗ ರಿಕ್ ಹೊಗ್ಗೆ ತನ್ನ ಸ್ನೆಹಿತರ ಜೊತೆಗೂಡಿ ಕಡಿದಾದ ರಸ್ತೆಯಲ್ಲಿ ಬೈಕ್ ರೈಡ್ ಮಾಡುತ್ತಿದ್ದ ವೇಳೆ, ಬೈಕ್ ಕಲ್ಲುಬಂಡೆಗೆ ಬಡಿದು 70 ಅಡಿ ಪ್ರಪಾತಕ್ಕೆ ಬಿದ್ದಿತ್ತು.
ಪ್ರಪಾತಕ್ಕೆ ಬಿದ್ದರೂ ಕೆಳಗಡೆ ಹರಿಯುತ್ತಿದ್ದ ನದಿಯ ಕಾರಣದಿಂದ ರಿಕ್ ಹೊಗ್ಗೆ ಬಚಾವ್ ಆಗಿದ್ದ. ಬಂಡೆಗಳನ್ನು ತಪ್ಪಿಸಿ ಸವಾರಿ ಮಾಡುತ್ತಿದ್ದ ವೇಳೆ ಸಮತೋಲನ ತಪ್ಪಿ ಪ್ರಪಾತಕ್ಕೆ ಬಿದ್ದಿರುವ ದೃಶ್ಯ ಹೆಲ್ಮೆಟ್ ನಲ್ಲಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ.
ನದಿಗೆ ಬಿದ್ದಿದ್ದ ರಿಕ್ ಹೊಗ್ಗೆ ಯನ್ನು ಆತನ ಸ್ನೇಹಿತರು ಕೆಲವು ಹೊತ್ತಿನ ನಂತರ ಪತ್ತೆಹಚ್ಚಿ ರಕ್ಕಿಸಿದ್ದಾರೆ. ಪ್ರಪಾತಕ್ಕೆ ಬೀಳುತ್ತಿದ್ದ ಸಮಯದಲ್ಲಿ ನನಗೆ ನನ್ನ ಮಕ್ಕಳ ಬಗ್ಗೆ ಚಿಂತೆಯಾಯಿತು. ದೇವರ ಅನುಗ್ರಹದಿಂದ ಬದುಕುಳಿದಿದ್ದೇನೆ. ಇದರಿಂದ ಬದುಕಿನ ಮೌಲ್ಯ ಅರಿವಾಗಿದೆ. ಸಾವಿನಿಂದ ಸ್ಪಲ್ಪದರಲ್ಲೇ ಪಾರದೇ ಎಂದು ರಿಕ್ ಹೊಗ್ಗೆ ತಿಳಿಸಿದ್ದಾನೆ.