ಅಫಜಲಪುರ: ಭಾರತಕ್ಕೆ ಸ್ವಾತಂತ್ರ ಸಿಕ್ಕು ಸುಮಾರು ವರ್ಷಗಳ ಬಳಿಕ ಹೈ.ಕ. ಭಾಗಕ್ಕೆ ಹೈದ್ರಾಬಾದ್ ನಿಜಾಮರಿಂದ ಸ್ವಾತಂತ್ರ ಸಿಕ್ಕಿದೆ. ಹೈಕ ವಿಮೋಚನೆ ನಮಗೆಲ್ಲ ನಿಜವಾದ ಸ್ವಾತಂತ್ರ್ಯಾವಾಗಿದೆ ಎಂದು ಬಿಇಒ ವಸಂತ ರಾಠೊಡ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಡೆದ ಹೈಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೈದ್ರಾಬಾದ್ ನಿಜಾಮರಿಗೆ ಭಾರತದಲ್ಲಿ ವಿಲೀನವಾಗಲು ಇಷ್ಟವಿರಲಿಲ್ಲ. ಸರ್ದಾರ್ ವಲ್ಲಭಭಾಯಿ
ಪಟೇಲ್ ಅವರ ಶ್ರಮದಿಂದ ಹೈಕ ಭಾಗಕ್ಕೆ ನಿಜಾಮರಿಂದ ಮುಕ್ತಿ ಸಿಕ್ಕು ಭಾರತದ ಗಣರಾಜ್ಯಕ್ಕೆ ನಾವು ಸೇರ್ಪಡೆಗೊಂಡೆವು ಎಂದು ಹೇಳಿದರು.
ಗ್ರೇಡ್ 2 ತಹಶೀಲ್ದಾರ ಪ್ರಭಾಕರ ಖಜೂರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಅಧಿಕಾರಿ ಗಳಾದ ವೀರಭದ್ರಪ್ಪ ದೊಡ್ಮನಿ, ವಿಠ್ಠಲ ಹಾದಿಮನಿ, ಕೆ.ಎಂ. ಕೋಟೆ, ಶಂಕರಗೌಡ ಪಾಟೀಲ, ವಿಜಯಕುಮಾರ ಪಾಟೀಲ, ವಿಜಯಕುಮಾರ ಫೂಲಾರಿ, ಪಂಡಿತ್ ಸೋಲೇಕರ, ವಿಜಯಕುಮಾರ ಕುದರಿ, ಮಹಮ್ಮದ್ ಖಾಸಿಮ್, ಶಿಕ್ಷಕರಾದ ಶಿವಲಿಂಗಪ್ಪ ಕಾಶಪ್ಪಗೋಳ, ರಾಜಕುಮಾರ ಗೌರ, ಪರಮೇಶ್ವರ ಧನ್ನಿ, ಬಸವರಾಜ ಪೂಜಾರಿ ಇದ್ದರು.
ಮಾದನ ಹಿಪ್ಪರಗಿ ಗ್ರಾಪಂನಲ್ಲಿ ಹೈಕ ದಿನಾಚರಣೆ ಮಾದನ ಹಿಪ್ಪರಗಿ: ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಪ್ರಯುಕ್ತ ಗ್ರಾಪಂ ಅಧ್ಯಕ್ಷೆ ಚಿನ್ನಮ್ಮ ರಾಜಕುಮಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮತಾನಾಡಿದ ಅವರು, ಹೈ.ಕ. ವಿಕೋಚನೆಗಾಗಿ ಹೋರಾಟ ಮಾಡಿದ ಮಹನೀಯರು ನಮಗೆಲ್ಲ ಆದರ್ಶ ವ್ಯಕ್ತಿಗಳಾಗಿ ಕಾಣುತ್ತಾರೆ. ನಮ್ಮೂರಿನ ಮಲಕಾಜಪ್ಪ ಜೇವೂರ, ಮಹಾಮಲ್ಲಪ್ಪ ನಿಂಬಾಳ, ಶಿವಲಿಂಗಯ್ಯ ಸ್ವಾಮಿ, ಶಿವಲಿಂಗಪ್ಪ ದುತ್ತರಗಿ, ರೇವಣಸಿದ್ದಪ್ಪ ಅಷ್ಟಗಿ ಅವರ ಜತೆ ಇನ್ನು ಅನೇಕರು ಮನೆ ಬಿಟ್ಟು ಭೂಗತರಾಗಿ ರಜಾಕ ಸೈನ್ಯದ ವಿರುದ್ಧ ಹೋರಾಟ ನಡೆಸಿದರು ಎಂದು ಹೇಳಿದರು.
ಸದಸ್ಯರಾದ ಲಕ್ಷ್ಮಣ ಸಮತಾ ಜೀವನ, ಸಿದ್ದಾರೂಢ ಸಿಂಗಸೆಟ್ಟ, ಶರಣಬಸಪ್ಪ ಕೋಣದೆ, ಸಿಬ್ಬಂದಿ ಮಹೇಶ
ಸಿಂಗೆ, ಸುರೇಶ ರೂಗಿ, ಶರಣು ಕಣ್ಣಿ, ಶಿಕ್ಷಕರಾದ ರೇವಣಪ್ಪ ನಿಂಬಾಳ, ಸಾಹಿತಿ ಗಿರೀಶ ಜಕಾಪುರೆ ಇದ್ದರು. ಸರಕಾರಿ ಪಬ್ಲಿಕ್ ಸ್ಕೂಲ್‌ನಲ್ಲಿ ಮುಖ್ಯಗುರು ಭೀಮಣ್ಣ ದಾಸರ ಧ್ವಜಾರೋಹಣ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಸಲಗರ, ಸಿದ್ದರಾಮ ಮುನ್ನೋಳ್ಳಿ, ಬಸವರಾಜ ದಮಗೊಂಡ, ರಮೇಶ ತಾಂದಳೆ, ಲಕ್ಷ್ಮಣ ಕೆಳಗಿಮನಿ, ಬನಶಂಕರಿ ಉಡಗಿ ಇದ್ದರು.