Advertisement

ಅವೈಜಾನಿಕ ತೆರಿಗೆಯೇ ತೈಲಬೆಲೆ ಹೆಚಳಕ್ಕೆ ಕಾರಣ

02:04 PM Nov 29, 2021 | Team Udayavani |

ಚಾಮರಾಜನಗರ: ಒಕ್ಕೂಟ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ವಿಧಿಸುತ್ತಿರುವ ಅವೈಜ್ಞಾನಿಕ ತೆರಿಗೆಗಳೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್‌ ಅಹಮದ್‌ ಟೀಕಿಸಿದರು.

Advertisement

ಬೆಲೆ ಏರಿಕೆಗೆ ಅಂತ್ಯ ಹಾಡಿ, ಬಡವರ ಬವಣೆ ಬಗೆಹರಿಸಿ ಎಂಬ ಘೋಷ ವಾಕ್ಯದೊಂದಿಗೆ ಬೆಲೆ ಏರಿಕೆಯ ವಿರುದ್ಧ ಎಸ್‌ಡಿಪಿಐ ವತಿಯಿಂದ ಹಮ್ಮಿಕೊಳ್ಳಲಾಗಿರುವ ಜಾಗೃತಿ ಅಭಿಯಾನದ ಅಂಗವಾಗಿ, ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪ್ರಗತಿಪರ ಸಂಘಟನೆಗಳು ಪದಾಧಿಕಾರಿಗಳ ಜತೆ ನಡೆದ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂಧನ ಬೆಲೆಯ 3ನೇ ಎರಡರಷ್ಟು ಹಣವನ್ನು ಸರ್ಕಾರ ಅಬಕಾರಿ ಸುಂಕ, ಸೆಸ್‌ ಮತ್ತು ತೆರಿಗೆ ರೂಪದಲ್ಲಿ ಜನರಿಂದ ಹಗಲು ದರೋಡೆ ಮಾಡುತ್ತಿದೆ. ತೈಲ ಬೆಲೆ ನಿರ್ಧರಿಸುವ ಅಧಿಕಾರವನ್ನು ಖಾಸಗಿ ಕಂಪನಿಗಳ ಕಪಿ ಮುಷ್ಟಿಗೆ ನೀಡಿದೆ.

ಅವೈಜ್ಞಾನಿಕ ತೆರಿಗೆ ವಿಧಿಸಿದೆ ಎಂದರು. ಸಂವಾದದಲ್ಲಿ ಕರ್ನಾಟಕ ಸಮಾಜವಾದಿ ಪಾರ್ಟಿ ರಾಜ್ಯಾಧ್ಯಕ್ಷ ಜಿ.ಎಂ.ಗಾಡ್ಕರ್‌, ದಲಿತ ಮುಖಂಡರಾದ ಕೆ. ಎಂ.ನಾಗರಾಜು, ಸಂಘಸೇನ, ಸಿ.ಎಂ. ಶಿವಣ್ಣ,ದೊಡ್ಡಿಂದುವಾಡಿ ಸಿದ್ದರಾಜು, ನಿಜಧ್ವನಿ ಗೋವಿಂದ ರಾಜು, ಹೋರಾಟಗಾರ್ತಿ ಸುಶೀಲಾ, ವಕೀಲ ರಂಗಸ್ವಾಮಿ, ಮುಖಂಡ ರಾದ ಮಹೇಶ್‌ಗೌಡ, ಸಿ.ಕೆ.ನಯಾಜ್‌ವುಲ್ಲಾ, ಜಾಕೀರ್‌, ಬಿಎಸ್‌ಪಿ ಬೇಡಮೂಡ್ಲು ಬಸವಣ್ಣ, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ಸೈಯದ್‌ ಆರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌, ಛಲವಾದಿ ಮಹಾಸಭಾದ ನಾರಯಣ್‌, ಪಿಎಫ್ಐ ಜಿಲ್ಲಾಧ್ಯಕ್ಷ ಕಫೀಲ್, ಯುವ ಮುಖಂಡ ಪ್ರಸನ್ನಕುಮಾರ್‌, ಸಿಎಫ್ಐ ವಿದ್ಯಾರ್ಥಿ ಸಂಘಟನೆಯ ಜಿಲ್ಲಾಧ್ಯಕ್ಷ ಜುನೇದ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next