ತಾರನಾಥ ಮೇಸ್ತ ಶೀರೂರು ಮತ್ತು ವಿನಯಚಂದ್ರ ಸಾಸ್ತಾನ ಅವರು ಜಾಗೃತಿ ಕರಪತ್ರಗಳನ್ನು ಹಂಚುತ್ತ, ಉಡುಪಿಯಿಂದ ಕಾಪುವಿನವರೆಗೆ ಕಾಲ್ನಡಿಗೆ ನಡೆಸಿದ್ದಾರೆ.
ವಲಸೆ ಕಾರ್ಮಿಕರು,ಶಿಕ್ಷಿತರು ಗುರಿ
ಪಾದಯಾತ್ರೆ ಸಂದರ್ಭ ವಲಸೆ ಕಾರ್ಮಿಕರು, ಶಿಕ್ಷಿತರನ್ನು ಹೆಚ್ಚಾಗಿ ಭೇಟಿ ಮಾಡುತ್ತಿದ್ದು ಅವರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕರಾವಳಿಯಲ್ಲಿ ಸಾವಿರಾರು ಕಾರ್ಮಿಕರಿದ್ದು, ಪ್ರತಿ ಸಂದರ್ಭದಲ್ಲೂ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಮತದಾನದ ಬಗ್ಗೆ ತಿಳಿದಿಲ್ಲ ಎಂಬ ಮಾತುಗಳು ಕೇಳಿಬಂದಿದೆ. ಅವರಿಗೆ ವೇತನ ಸಹಿತ ರಜೆ ಪಡೆದು ಮತದಾನ ಮಾಡುವ ಬಗ್ಗೆ ಮನವಿ ಮಾಡಿದ್ದೇವೆ. ಇನ್ನು, ಶಿಕ್ಷಿತರೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದು, ಅವರನ್ನೇ ಜಾಗೃತಿ ಗೊಳಿಸುವ ಪ್ರಯತ್ನ ನಡೆಸಬೇಕಿದೆ ಎಂದು ತಾರನಾಥ ಮೇಸ್ತ ಮತ್ತು ವಿನಯಚಂದ್ರ ಸಾಸ್ತಾನ ಹೇಳಿದರು.
Advertisement
ರಜೆ ದುರುಪಯೋಗ ಸಲ್ಲದುಮತದಾನದಂದು ಸಾರ್ವತ್ರಿಕ ರಜೆಯಿರುತ್ತದೆ. ಆದರೆ ಆ ರಜೆಯನ್ನು ಉದ್ಯೋಗಸ್ಥರು ಮತದಾನಕ್ಕಾಗಿ ಬಳಸು ತ್ತಿಲ್ಲ. ಆ ಬಗ್ಗೆ ಶಿಕ್ಷಿಕತರನ್ನು ಎಚ್ಚರಿಸುವ ಸಲುವಾಗಿ ಮತ್ತು ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರಿಗೂ ಅವರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಎಲ್ಲೆಲ್ಲಿ ಕಾಲ್ನಡಿಗೆ?
ಪ್ರಥಮ ಹಂತದಲ್ಲಿ ಉಡುಪಿಯಿಂದ ಕುಂದಾಪುರದವರೆಗೆ (41 ಕಿ.ಮೀ.) ಪಾದಯಾತ್ರೆ ನಡೆಸಿದ್ದು, ಗುರುವಾರ ಉಡುಪಿಯಿಂದ ಕಾಪು (13 ಕಿ.ಮೀ.) ಕಾಲ್ನಡಿಗೆ ನಡೆಸಿದ್ದಾರೆ. ಮುಂದೆ ಉಡುಪಿಯಿಂದ ಹಿರಿಯಡಕ (16 ಕಿ.ಮೀ.), ಕುಂದಾಪುರದಿಂದ ಬೈಂದೂರು (27 ಕಿ.ಮೀ.) ಕಾಲ್ನಡಿಗೆ ನಡೆಸಲಿದ್ದಾರೆ. ಜಾಗೃತಿ ಕಾರ್ಯಕ್ರಮ ಇಲ್ಲಿಗೆ ಮುಗಿಸದೇ ಜಿಲ್ಲೆಯಾದ್ಯಂತ ಮಾಡುತ್ತೇವೆ ಎಂದಿದ್ದಾರೆ.
“ನಾನು ಪ್ರತಿಜ್ಞೆ ಮಾಡುತ್ತೇನೆ, ನೀವು ಧೈರ್ಯದಿಂದ ಪ್ರತಿಜ್ಞೆ ಮಾಡಿ ಭಾರತ ದೇಶವು ಸ್ವಾತಂತ್ರ್ಯ ಪಡೆದ ಅನಂತರ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಮತದಾನ ನನ್ನ ಅಮೂಲ್ಯ ಹಕ್ಕು. ಆಮಿಷಗಳಿಗೆ ಬಲಿಯಾಗದೆ, ಸ್ವಾಭಿಮಾನವನ್ನು ಕಳೆದುಕೊಳ್ಳದೆ ತಪ್ಪದೆ ಪ್ರಾಮಾಣಿಕವಾಗಿ ಯೋಗ್ಯ ಅಭ್ಯರ್ಥಿಗೆ ಅಮೂಲ್ಯವಾದ ಮತ ಚಲಾಯಿಸುತ್ತೇನೆ’ ಎಂಬ ಪ್ರತಿಜ್ಞೆ ಕರಪತ್ರದಲ್ಲಿದೆ.