Advertisement
ಹೈದ್ರಾಬಾದ್ ಕರ್ನಾಟಕದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ವಾಣಿಜ್ಯೋದ್ಯಮಿಗಳನ್ನು ಒಳಗೊಂಡ ಸಂಸ್ಥೆ ಆಡಳಿತ ಮಂಡಳಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಒಟ್ಟು 2,934 ಸದಸ್ಯರನ್ನು ಹೊಂದಿರುವ ಎಚ್‌ಕೆಸಿಸಿಐ ಸಂಸ್ಥೆ ಆಡಳಿತ ಮಂಡಳಿಗೆ ಚುನಾಯಿತರಾಗಲು ಸದಸ್ಯರು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರವಿ ಸರಸಂಬಿ, ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀಕಾಂತ ಮೈಲಾಪುರ ಸ್ಪರ್ಧಿಸುತ್ತಿದ್ದಾರೆ. ಸಹ ಖಜಾಂಚಿ ಹಾಗೂ ಸಹ ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಗಳು ಯಾರು ಎಂಬುದು ಅಂತಿಮಗೊಂಡಿಲ್ಲ. ಬಸವರಾಜ ಹಡಗಿಲ್ ಅವರು ಪ್ಯಾನಲ್ ರಚಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ತಳೆದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಇನ್ನೆರಡು ದಿನಗಳಲ್ಲಿ ಚುನಾವಣಾ ಕಣ ತಯಾರಾಗಲಿದೆ.
Related Articles
Advertisement
ಹಾಲಿ ಅಧ್ಯಕ್ಷ ಸೋಮಶೇಖರ ಟೆಂಗಳಿ ಕಳೆದೆರಡು ವರ್ಷಗಳ ಕಾಲ ಅಭಿವೃದ್ಧಿ ಮಾಡಿದ ಕಾರ್ಯ ಮುಂದಿಟ್ಟುಕೊಂಡು ಮತದಾರರ ಬಳಿ ತೆರಳಲು ನಿರ್ಧರಿಸಿದ್ದಾರೆ. ಪ್ರಸ್ತುತ ಎಚ್ ಕೆಸಿಸಿಐಗೆ ಸದಸ್ಯರನ್ನು ಹೆಚ್ಚಳ ಮಾಡುವ ಹಾಗೂ ನಂದೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಂಸ್ಥೆಗೆ ಸೇರಿರುವ 3 ಎಕರೆ ಭೂಮಿಯಲ್ಲಿ 28 ಕೋಟಿ ರೂ. ವೆಚ್ಚದ ಬೃಹತ್ ಕೈಗಾರಿಕಾ ತರಬೇತಿ ಹಾಗೂ ವಸ್ತುಪ್ರದರ್ಶನ ಕೇಂದ್ರ ತೆರೆಯಲು ನೀಲನಕ್ಷೆ ರೂಪಿಸಿ ಕಾರ್ಯಪ್ರವೃತ್ತರಾಗಿರುವುದು ತಮಗೆ ಸ್ಫೂರ್ತಿ ಬಂದಿದೆ ಎನ್ನುತ್ತಾರೆ ಟೆಂಗಳಿ.
ಹಣಮಂತರಾವ ಭೈರಾಮಡಗಿ