Advertisement

ಬಾಂಗ್ಲಾದಲ್ಲಿ ವಿಮಾನ ಹೈಜಾಕ್‌ ಯತ್ನ: ಸೆರೆ

12:30 AM Feb 25, 2019 | |

ಢಾಕಾ: ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ ದುಬೈಗೆ ತೆರಳುತ್ತಿದ್ದ ವಿಮಾನವನ್ನು ಅಪಹರಿಸುವ ಯತ್ನ ಭಾನುವಾರ ನಡೆದಿದೆ. 

Advertisement

ಬಾಂಗ್ಲಾದೇಶದ ಬಿಮನ್‌ ಬಾಂಗ್ಲಾದೇಶ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಇದಾಗಿದ್ದು, ಚಿತ್ತಗಾಂಗ್‌ನಿಂದ ಢಾಕಾಗೆ ಬಂದು ಅಲ್ಲಿಂದ ದುಬೈಗೆ ವಿಮಾನ ತೆರಳುತ್ತಿತ್ತು. ಮೂಲಗಳ ಪ್ರಕಾರ ಓರ್ವ ಪ್ರಯಾಣಿಕನಿಗೆ ಅಪಹರಣಕಾರ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅಪಹರಣ ಪ್ರಯತ್ನ ನಡೆಯುತ್ತಿದ್ದಂತೆಯೇ ಚಿತ್ತಗಾಂಗ್‌ ವಿಮಾನ ನಿಲ್ದಾಣಕ್ಕೆ ವಿಮಾನ ವಾಪಸಾಗಿದ್ದು, ತುರ್ತು ನಿರ್ಗಮನದ ಮೂಲಕ ಎಲ್ಲ 145 ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ಅಪಹರಣಕಾರನನ್ನೂ ಬಂಧಿಸಲಾಗಿದೆ ಎನ್ನಲಾಗಿದೆ. ವಿಮಾನವನ್ನು ಸುತ್ತುವರಿದ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಅಪಹರಣಕಾರನನ್ನು ಬಂಧಿಸುವಲ್ಲಿ ಯಶ ಸ್ವಿಯಾಗಿದ್ದಾರೆ. ಅಪಹರಣಕಾರ ಪಿಸ್ತೂಲ್‌, ಬಾಂಬ್‌ಗಳನ್ನು ಹೊಂ ದಿದ್ದ ಎಂದು ಹೇಳಲಾಗಿದೆ. 

ಪಾಕಿಸ್ತಾನಕ್ಕೆ ಭಾರತದ ವಿಮಾನವನ್ನು ಅಪಹರಿಸಲಾಗುತ್ತದೆ ಎಂಬ ಬೆದರಿಕೆ ಕರೆ ಶನಿವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ,ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಶನಿವಾರದಿಂದಲೇ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next