Advertisement
115 ಪ್ರಯಾಣಿಕರನ್ನು ಹೊತ್ತು ರವಿವಾರ ಮಧ್ಯರಾತ್ರಿ 2.55ರ ಹೊತ್ತಿಗೆ ಮುಂಬಯಿಯಿಂದ ಪ್ರಯಾಣ ಬೆಳೆಸಿದ್ದ ವಿಮಾನದ ಸಿಬ್ಬಂದಿಗೆ ಅದರಲ್ಲಿನ ಶೌಚಾಲಯದಲ್ಲಿ ಚೀಟಿಯೊಂದು ಸಿಕ್ಕಿತ್ತು. ವಿಮಾನದಲ್ಲಿ ಬಾಂಬ್ ಇದ್ದು, 12 ಮಂದಿ ಅಪಹರಣಕಾರರೂ ಇದರಲ್ಲೇ ಪ್ರಯಾಣಿ ಸುತಿ ¤ದ್ದಾರೆಂದು ಉರ್ದು, ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿತ್ತು. ಜತೆಗೆ, ವಿಮಾನವು ನೇರವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಲಿದೆ ಎಂದೂ ಬರೆಯಲಾಗಿತ್ತು. ವಿಚಾರ ತಿಳಿದೊಡನೆ “ಹೈಜಾಕ್ ಬಟನ್’ ಒತ್ತಿದ ಪೈಲಟ್, ದಿಲ್ಲಿ ಕಡೆಗೆ ಹೋಗಬೇಕಿದ್ದ ವಿಮಾನವನ್ನು ಅಹ್ಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಪ್ರಯಾಣಿಕರನ್ನು ಕೆಳಗಿಸಿ ತಪಾಸಣೆ ನಡೆಸಲಾಗಿ, ಆ ಬೆದರಿಕೆ ಹುಸಿಯೆಂದು ತಿಳಿದುಬಂತು.
Advertisement
ವಿಮಾನಕ್ಕೆ ಹೈಜಾಕ್ ಶಾಕ್
07:05 AM Oct 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.