Advertisement

ಹುಮನಾಬಾದ್ ಕಾಲೇಜಿಗೂ ವಿಸ್ತಾರಣೆಗೊಂಡ ಹಿಜಾಬ್- ಕೇಸರಿ ಶಾಲು ವಿವಾದ

01:03 PM Feb 22, 2022 | Team Udayavani |

ಹುಮನಾಬಾದ: ಹಿಜಾಬ್- ಕೇಸರಿ ಶಾಲು ವಿವಾದ ಇದೀಗ ಹುಮನಾಬಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿಗೂ ಮಂಗಳವಾರ ವಿಸ್ತಾರಗೊಂಡಿದೆ.

Advertisement

ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ನ್ಯಾಯಾಲಯದ ಹಾಗೂ ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಕಾಲೇಜಿನ ವರ್ಗಕೋಣೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿನಿತ್ಯ ಹಿಜಾಬ್ ಹಾಗೂ ಬುರ್ಖಾ ಧರಿಸುತ್ತಿದ್ದಾರೆ. ಆದೇಶ ಬಂದು ವಾರ ಕಳೆದರೂ ಕೂಡ ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ವಿಫಲವಾಗಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು.

ಈ ಕುರಿತು ಅನೇಕ ಬಾರಿ  ಉಪನ್ಯಾಸರಿಗೆ ಮನವರಿಕೆ ಮಾಡಿದರು ಕೂಡ ಕಾಲೇಜು ಸಿಬ್ಬಂದಿಗಳು ಮಾತ್ರ ನಮ್ಮ ಮಾಹಿತಿಗೆ ಗೌರವ ನೀಡದ ಹಿನ್ನೆಲೆಯಲ್ಲಿ ಇಂದು ಕೇಸರಿ ಶಾಲು ಹಾಕಿಕೊಳ್ಳುವ ಸ್ಥಿತಿ ಬಂದಿದೆ. ಹಿಜಾಬ್-ಬುರ್ಖಾ ತೆಗೆಸಲು ಸಾಧ್ಯವಾಗದ ಉಪನ್ಯಾಸಕರು ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರಿಗೂ ಒಂದೇ ನ್ಯಾಯ ಇರಬೇಕು, ಈ ಕುರಿತು ಕಾಲೇಜಿನ ಸಿಸಿ ಕ್ಯಾಮೆರಾಗಳ ದೃಶ್ಯಗಳು ಬೇಕಾದರೆ ಪರಿಶೀಲನೆ ಮಾಡಲಿ. ನ್ಯಾಯಾಲಯದ ಆದೇಶದ ನಂತರ ಕಾಲೇಜಿನಲ್ಲಿ ಕಾನೂನು ಪಾಲನೆಯಾಗಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ಮಾಡಲಿ ಎಂದು ಶಾಲು ಧರಿಸಿಬಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಮನವಿ

Advertisement

ಕಾಲೇಜಿನ ಪ್ರಾಚಾರ್ಯರ ವೀರಪ್ಪ ತುಪ್ಪದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರು. ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿನಿಯರು ಮೊದಲ ಕಾನೂನು ಪಾಲನೆ ಮಾಡಲು ತಿಳಿಸಿ ನಂತರ ನಾವು ಕೂಡ ಶಾಲು ತೆಗೆಯುತ್ತೇವೆ ಎಂದು ಹೇಳಿದರು. ಆದರೆ, ಯಾರು ಕೂಡ ಮಾತು ಕೆಳದ ಹಿನ್ನೆಲೆಯಲ್ಲಿ ತರಗತಿಗಳು ರದ್ದು ಮಾಡಿ ಮನೆಗೆ ತೆರಳುವಂತೆ ತಿಳಿಸಿದರು.

ಕಾಲೇಜಿನಲ್ಲಿ ಸಮಸ್ಯೆ ಇಲ್ಲ

ಇಷ್ಟು ದಿನಗಳ ಕಾಲ ಕಾಲೇಜಿನಲ್ಲಿ ಯಾವುದೆ ವಿವಾದ ಇದ್ದಿಲ್ಲ. ಆದರೆ, ಇಂದು ಬಿಕಾಂ ವರ್ಗದಲ್ಲಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಅವರನ್ನು ಮನವೊಲಿಸುವ ಕೆಲಸ ಮಾಡಿ ಮನೆಗೆ ಕಳುಹಿಸಲಾಗಿದೆ. ಸದ್ಯ ಕಾಲೇಜಿನಲ್ಲಿ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಕಾಲೇಜಿನಲ್ಲಿ ಕಾನೂನು ಪಾಲನೆ ಮಾಡಲಾಗುತ್ತಿದೆ ಎಂದು ಪ್ರಾಚಾರ್ಯ ವೀರಪ್ಪ ತುಪ್ಪದ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next