Advertisement

ಹಿಜಾಬ್ ವಿವಾದದ ಬಳಿಕ ಬೆದರಿಕೆ ಕರೆಗಳು: ಹೆದರುವುದಿಲ್ಲ ಎಂದ ರಘುಪತಿ ಭಟ್

04:03 PM Feb 12, 2022 | Team Udayavani |

ಉಡುಪಿ: ಹಿಜಾಬ್ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ ಬೆನ್ನಲ್ಲೇ ತನಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಉಡುಪಿ ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

Advertisement

ಕರ್ನಾಟಕದಲ್ಲಿ ಹಿಜಾಬ್ ಸಮಸ್ಯೆ ಹುಟ್ಟಿಕೊಂಡ ಉಡುಪಿಯ ಮಹಿಳಾ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಭಟ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಮಗೆ ಬಂದಿರುವ ಕರೆಗಳಲ್ಲಿ ಹೆಚ್ಚಿನವು ವಿದೇಶಗಳಿಂದ ಬಂದ ಇಂಟರ್ನೆಟ್ ಕರೆಗಳಾಗಿವೆ.

ಕರೆ ಮಾಡಿದವರು ಜೀವ ಬೆದರಿಕೆ ಹಾಕುತ್ತಿದ್ದಾರೆ ಅದು ನನಗೆ ಹೊಸದಲ್ಲ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. ಹಿಜಾಬ್ ವಿಚಾರ ಹೆಚ್ಚು ಪ್ರತಿಪಾದಿಸಿದರೆ ಗುರಿಯಾಗಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.ತನಗೆ ಸ್ಥಳೀಯ ಸಂಖ್ಯೆಗಳಿಂದ ಹಲವಾರು ಕರೆಗಳು ಬಂದಿವೆ ಮತ್ತು ಬೆಳವಣಿಗೆಯ ಬಗ್ಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು. ಈ ಹಿಂದೆಯೂ ಇಂತಹ ಹಲವು ಬೆದರಿಕೆಗಳನ್ನು ಎದುರಿಸಿದ್ದು, ಈ ಬೆಳವಣಿಗೆಗೆ ಹೆದರುವುದಿಲ್ಲ ಎಂದರು.

ಉಡುಪಿಯ ಮುಸ್ಲಿಮರು ತಮ್ಮೊಂದಿಗೆ ಇದ್ದಾರೆ ಮತ್ತು ಜಿಲ್ಲೆಯ ಖಾಜಿಗಳು ಈ ವಿಷಯದಲ್ಲಿ ತನಗೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು.

ಉಡುಪಿಯ ಉಡುಪಿ ಪಿಯು ಕಾಲೇಜಿನಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸಬೇಕೆಂದು ಒತ್ತಾಯಿಸುವ ಆರು ವಿದ್ಯಾರ್ಥಿನಿಯರು ಕೆಲವು ಅಂಶಗಳಿಂದ ದಾರಿ ತಪ್ಪಿದ್ದಾರೆ ಎಂದು ಭಟ್ ಪುನರುಚ್ಚರಿಸಿದರು.

Advertisement

ದೂರವಾಣಿ, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೂಲಕ ಬಂದಿರುವ ಬೆದರಿಕೆಗಳಿಗೆಲ್ಲ ಕಾಲೇಜಿನ ಸಮವಸ್ತ್ರ ಹಾಗೂ ಶಿಸ್ತಿನ ವಿಚಾರವಾಗಿಯೇ ಆಗಿವೆ ಎಂದಿದ್ದಾರೆ.

ಶಾಸಕ ಭಟ್ ಅವರ ಭದ್ರತೆಗೆ ಗನ್ ಮ್ಯಾನ್ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next