Advertisement

ರಾಜಸ್ಥಾನಕ್ಕೂ ವ್ಯಾಪಿಸಿದ ವಿವಾದ:ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ತಡೆದ ಕಾಲೇಜು

08:47 AM Feb 12, 2022 | Team Udayavani |

ಜೈಪುರ: ಕರ್ನಾಟಕದ ಉಡುಪಿಯ ಕಾಲೇಜೊಂದರಲ್ಲಿ ಆರಂಭವದ ಹಿಜಾಬ್ ವಿವಾದ ಇದೀಗ ರಾಜಸ್ಥಾನಕ್ಕೂ ವ್ಯಾಪಿಸಿದೆ. ರಾಜಸ್ಥಾನದ ಜೈಪುರ ಜಿಲ್ಲೆಯ ಚಕ್ಸು ಎಂಬಲ್ಲಿನ ಖಾಸಗಿ ಕಾಲೇಜೊಂದು ಶುಕ್ರವಾರ ಬುರ್ಖಾ ಧರಿಸಿ ಬಂದ ಕೆಲವು ಹುಡುಗಿಯರನ್ನು ಕಾಲೇಜಿಗೆ ಪ್ರವೇಶಿಸದಂತೆ ತಡೆದಿದೆ ಎಂದು ವರದಿ ತಿಳಿಸಿದೆ.

Advertisement

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಕಾಂಗ್ರೆಸ್ ಶಾಸಕ ವಾಜಿಬ್ ಅಲಿ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘಟನೆಯ ಬಗ್ಗೆ ಗಮನಹರಿಸಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

“ದ್ವೇಷದ ವ್ಯಾಪಾರಿಗಳು ಈಗ ರಾಜಸ್ಥಾನವನ್ನು ವಿಷಪೂರಿತಗೊಳಿಸಲು ಬಯಸುತ್ತಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈ ಘಟನೆಯನ್ನು ಅರಿತುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ” ಎಂದು ವಾಜಿದ್ ಅಲಿ ಬರೆದಿದ್ದಾರೆ.

ಇದನ್ನೂ ಓದಿ:ಹಿಜಾಬ್‌ ಸಮವಸ್ತ್ರವಲ್ಲ; ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಹೇಳಿಕೆ

ವರದಿಗಳ ಪ್ರಕಾರ, ಕಸ್ತೂರಿ ದೇವಿ ಕಾಲೇಜಿನ ಕೆಲವು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಕಾಲೇಜು ಆಡಳಿತ ಮಂಡಳಿ ಅವಕಾಶ ನೀಡಿಲ್ಲ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿಯರು ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿ, ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

Advertisement

ಪೊಲೀಸರೂ ಸ್ಥಳಕ್ಕೆ ಆಗಮಿಸಿದ್ದು, ವಿದ್ಯಾರ್ಥಿಗಳ ಪೋಷಕರನ್ನು ಸಮಾಧಾನಪಡಿಸಿದ್ದಾರೆ. “ಕಾಲೇಜಿನಲ್ಲಿ ಸಮವಸ್ತ್ರವನ್ನು ಧರಿಸಲು ಅವರಿಗೆ ಮನವರಿಕೆಯಾಯಿತು. ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗಿದೆ” ಎಂದು ಚಕ್ಸು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ಸಿಂಗ್ ಅವರು ಪಿಟಿಐಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next