Advertisement

ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ : ಹೈಕೋರ್ಟ್ ನಲ್ಲಿ ಪುನರುಚ್ಚಾರ

04:55 PM Feb 21, 2022 | Team Udayavani |

ಬೆಂಗಳೂರು: ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಕರ್ನಾಟಕ ಸರಕಾರ ಸೋಮವಾರ ಹೈಕೋರ್ಟ್ ನಲ್ಲಿ ಪುನರುಚ್ಚರಿಸಿದೆ ಮತ್ತು ಧಾರ್ಮಿಕ ಸೂಚನೆಗಳನ್ನು ಶಿಕ್ಷಣ ಸಂಸ್ಥೆಗಳ ಹೊರಗೆ ಇಡಬೇಕು ಎಂದು ಹೇಳಿದೆ.

Advertisement

“ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬುದು ನಮ್ಮ ನಿಲುವು. ಸಂವಿಧಾನ ರಚನಾ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ‘ಧಾರ್ಮಿಕ ಸೂಚನೆಗಳನ್ನು ಶಿಕ್ಷಣ ಸಂಸ್ಥೆಗಳ ಹೊರಗೆ ಇಡೋಣ’ ಎಂದು ಹೇಳಿಕೆ ನೀಡಿದ್ದರು ಎಂದು ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ನ ಪೂರ್ಣ ಪೀಠಕ್ಕೆ ತಿಳಿಸಿದರು.

ವಿಸ್ಕ್ರತ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆ ಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ ದೀಕ್ಷಿತ್ ಸರಕಾರ ಮತ್ತು ಅರ್ಜಿದಾರರ ವಾದ ಆಲಿಸುತ್ತಿದ್ದಾರೆ.

ಎಜಿ ಪ್ರಕಾರ, ಅಗತ್ಯ ಧಾರ್ಮಿಕ ಆಚರಣೆಗೆ ಮಾತ್ರ ಆರ್ಟಿಕಲ್ 25 ರ ಅಡಿಯಲ್ಲಿ ರಕ್ಷಣೆ ಸಿಗುತ್ತದೆ, ಇದು ನಾಗರಿಕರು ತಮ್ಮ ಆಯ್ಕೆಯ ನಂಬಿಕೆಯನ್ನು ಆಚರಿಸಲು ಖಾತರಿ ನೀಡುತ್ತದೆ. ಅವರು ಆರ್ಟಿಕಲ್ 25 ರ ಭಾಗವಾಗಿ “ಧರ್ಮದಲ್ಲಿನ ಸುಧಾರಣೆಗಳನ್ನು” ಉಲ್ಲೇಖಿಸಿದ್ದಾರೆ.

ಇಂದಿನ ಕೋರ್ಟ್ ಪ್ರಕ್ರಿಯೆಗಳು ಪ್ರಾರಂಭವಾದ ತಕ್ಷಣ, ಸಿಜೆ ಅವಸ್ತಿ ಅವರು ಹಿಜಾಬ್‌ಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದು ಹೇಳಿದರು.

Advertisement

“ಸರಕಾರದ ಆದೇಶವು ನಿರುಪದ್ರವವಾಗಿದೆ ಮತ್ತು ರಾಜ್ಯ ಸರ್ಕಾರವು ಹಿಜಾಬ್ ಅನ್ನು ನಿಷೇಧಿಸಿಲ್ಲ ಮತ್ತು ಅದರ ಮೇಲೆ ಯಾವುದೇ ನಿರ್ಬಂಧಗಳನ್ನು ಹಾಕಿಲ್ಲ ಎಂದು ನೀವು ವಾದಿಸಿದ್ದೀರಿ. ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರವನ್ನು ಧರಿಸಬೇಕು ಎಂದು ಜಿಒ ಹೇಳುತ್ತದೆ. ನಿಮ್ಮ ನಿಲುವು ಏನು – ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ಅನುಮತಿಸಬಹುದೇ ಅಥವಾ ಬೇಡವೇ? ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನಾವಡಗಿ, ಸಂಸ್ಥೆಗಳು ಅನುಮತಿ ನೀಡಿದರೆ, ಸಮಸ್ಯೆ ಉದ್ಭವಿಸಿದಾಗ ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next