Advertisement

ಹೈಕೋರ್ಟ್ ಹಿಜಾಬ್‌ ವಿಚಾರಣೆ : ಯೂನಿಫಾರ್ಮ್ ಕಾಯ್ದೆ ಕುರಿತು ಚರ್ಚೆ

04:09 PM Feb 16, 2022 | Team Udayavani |

ಬೆಂಗಳೂರು: ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ಮುಂದುವರಿಸಿದೆ.

Advertisement

ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಫೆ 16  ಮಧ್ಯಾಹ್ನ 2.30ಕ್ಕೆ ವಿಚಾರಣೆ ಆರಂಭಿಸಿದ್ದು, ಅರ್ಜಿದಾರರ ಪರವಾಗಿ ಹಿರಿಯ ವಕೀಲ ರವಿವರ್ಮ ಕುಮಾರ್ ಅವರು ವಾದ ಮಂಡನೆ ಮಾಡುತ್ತಿದ್ದಾರೆ.

1995 ರ ಯೂನಿಫಾರ್ಮ್ ಆಕ್ಟ್ ಕುರಿತು ವಿವರಗಳನ್ನು ನೀಡಿದ್ದು, ಒಮ್ಮೆ ಸಮವಸ್ತ್ರ ಜಾರಿಯಾದರೆ ಶಿಕ್ಷಣ ಸಂಸ್ಥೆ ೫ ವರ್ಷಗಳ ಕಾಲ ಅದನ್ನು ಬದಲಾವಣೆ ಮಾಡುವಂತಿಲ್ಲ. ಒಂದೊಮ್ಮೆ ಬದಲಾವಣೆ ಮಾಡಬೇಕಾದರೂ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿಯೇ ಮಾಡಬೇಕಾಗುತ್ತದೆ ಎಂದಿದ್ದಾರೆ.

ಯಾವ ಅಧಿಕಾರದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಯರನ್ನು ಹೊರಗಿಡಲಾಗಿದೆ ಎಂದು ಸರಕಾರದ ನಿರ್ಧಾರದ ಕುರಿತು ನ್ಯಾಯ ಪೀಠವನ್ನು ಪ್ರಶ್ನಿಸಿದ್ದಾರೆ.

ಪಿಯು ಕಾಲೇಜುಗಳ ಶಿಕ್ಷಣದ ಗುಣಮಟ್ಟ ಕಾಪಾಡಲು ಸರಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆಯ ಕುರಿತು ತಿಳಿಸಿದರು. ಸರಕಾರ ಇದನ್ನು ಆದೇಶವಾಗಿ ನೀಡಿಲ್ಲ, ಕೇವಲ ಸುತ್ತೋಲೆ ಎಂದು ತಿಳಿಸಿದರು.

Advertisement

ಸರಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಿ ವಿದ್ಯಾರ್ಥಿಗಳು ನಿರ್ದಿಷ್ಟ ವಸ್ತ್ರ ಸಂಹಿತೆ (ಡ್ರೆಸ್‌ಕೋಡ್‌)ಗೆ ಒತ್ತಾಯಿ ಸದೆ ಈಗಿರುವ ವಸ್ತ್ರಸಂಹಿತೆಯನ್ನು ಅನುಸರಿಸಬೇಕು. ಕಾನೂನು ಸುವ್ಯವಸ್ಥೆಯ ಹೊರತಾಗಿಯೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಬೇಕು ಎಂಬುದು ಸರಕಾರದ ಕಾಳಜಿ ಎಂದು ಪೀಠಕ್ಕೆ ಸರಕಾರದ ನಿಲುವನ್ನು ಅವರು ವಿವರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next