Advertisement

“ತಿಂಗಳಾಂತ್ಯದೊಳಗೆ ಹೆದ್ದಾರಿಯ ಸಣ್ಣ-ಪುಟ್ಟ  ಸಮಸ್ಯೆ ಇತ್ಯರ್ಥ’ 

08:04 PM Sep 18, 2021 | Team Udayavani |

ಕುಂದಾಪುರ:  ಇಲ್ಲಿನ ಶಾಸ್ತ್ರಿ ಸರ್ಕಲ್‌ ಸುತ್ತಮುತ್ತಲಿನ ಹೆದ್ದಾರಿಯ ಮರು ಡಾಮರು ಕಾಮ ಗಾರಿ ಹಾಗೂ ಅಂಡರ್‌ಪಾಸ್‌ ಬಳಿಯ ಸಣ್ಣ- ಪುಟ್ಟ ಸಮಸ್ಯೆಗಳೆಲ್ಲವೂ ಈ ತಿಂಗಳಾಂತ್ಯದೊಳಗೆ ಇತ್ಯರ್ಥಪಡಿಸುವ ಭರವಸೆಯನ್ನು ನವಯುಗ ಸಂಸ್ಥೆಯ ಎಂಜಿನಿಯರ್‌ ಹಾಗೂ ಅಧಿಕಾರಿಗಳು ನೀಡಿದ್ದಾರೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರು ಸ್ಪಷ್ಟಪಡಿಸಿದರು.

Advertisement

ಅವರು ಶನಿವಾರ ಇಲ್ಲಿನ ಮಿನಿವಿಧಾನಸೌಧದಲ್ಲಿ ಫ್ಲೈಓವರ್‌, ಅಂಡರ್‌ಪಾಸ್‌ ಹಾಗೂ ರಾಷ್ಟ್ರೀಯ ಹೆದ್ದಾರಿ ಕುರಿತ ಕೆಲವೊಂದು ಸಮಸ್ಯೆಗಳ ಕುರಿತಂತೆ ನವಯುಗ ಸಂಸ್ಥೆಯ ಎಂಜಿನಿಯರ್‌, ಸಿಬಂದಿ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದರು.

4 ದಿನಗಳ ಗಡುವು:

ಇಲ್ಲಿನ ಪುರಸಭೆ ವ್ಯಾಪ್ತಿ ಹಾಗೂ ಅದರ ಆಸುಪಾಸಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಈ ಬಗ್ಗೆ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರ ಅಭಿಪ್ರಾಯಗಳನ್ನು ಪರಿಗಣಿಸಿ ಈ ಸಭೆಯನ್ನು ಕರೆಯಲಾಗಿತ್ತು.

ಸಭೆಯಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ತಹಶೀಲ್ದಾರ್‌ ಕಿರಣ್‌ ಗೌರಯ್ಯ, ಡಿವೈಎಸ್‌ಪಿ ಶ್ರೀಕಾಂತ್‌, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಎಸ್‌ಐಗಳಾದ ಸದಾಶಿವ ಗವರೋಜಿ, ಸುದರ್ಶನ್‌, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕಂದಾಯ ಅಧಿಕಾರಿ ದಿನೇಶ್‌, ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ್‌ ಅಂಕದಕಟ್ಟೆ, ಮುಖಂಡರಾದ ಕಾಡೂರು ಸುರೇಶ್‌ ಶೆಟ್ಟಿ, ಸುನೀಲ್‌ ಶೆಟ್ಟಿ, ಸುರೇಶ್‌ ಶೆಟ್ಟಿ, ಸತೀಶ್‌ ಪೂಜಾರಿ, ಸಂತೋಷ್‌ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿಯ ಕೆಂಚನೂರು ಸೋಮಶೇಖರ್‌ ಶೆಟ್ಟಿ, ಬಂಟರ ಸಂಘದ ಆವರ್ಸೆ ಸುಧಾಕರ ಶೆಟ್ಟಿ, ಮತ್ತಿತರರು ಪಾಲ್ಗೊಂಡಿದ್ದರು.

Advertisement

ಗುಜರಿ ವಸ್ತು ತೆರವು ಕಾರ್ಯ: 4 ದಿನ ಗಳ ಗಡುವು :

ಫ್ಲೈಓವರ್‌ ಕೆಳಗೆ ರಾಶಿ ಹಾಕಲಾದ ಗುಜರಿ ವಸ್ತುಗಳನ್ನು ತೆರವು ಮಾಡುವ ಕಾರ್ಯವನ್ನು ಶನಿವಾರ ಆರಂಭಿಸಲಾಗಿದೆ. ಎ.ಸಿ. ರಾಜು ಕೆ. ಅವರೇ ಸ್ವತಃ ಸ್ಥಳದಲ್ಲಿ ನಿಂತು, ನವಯುಗದವರಿಂದ ವಾಹನ ಕರೆಯಿಸಿ, ತೆರವು ಮಾಡಲು ಸೂಚಿಸಿದ್ದಾರೆ. ಈ ವೇಳೆ ಕಳೆದ 6 ತಿಂಗಳಿನಿಂದ ಈ ಬಗ್ಗೆ ತಿಳಿಸಿದ್ದರೂ, ತೆರವು ಮಾಡದಿರುವ ಬಗ್ಗೆ ಎಸಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ನವಯುಗದವರ ವಿರುದ್ಧ ಗರಂ ಆದರು. ಇನ್ನು 4 ದಿನದೊಳಗೆ ಇಲ್ಲಿನ ಎಲ್ಲ ವಸ್ತುಗಳನ್ನು ತೆರವು ಮಾಡು ವಂತೆ ಸೂಚಿಸ ಲಾಗಿದೆ.

ಮರು ಡಾಮರು ಕಾಮಗಾರಿ:

ಶಾಸ್ತ್ರಿ ಸರ್ಕಲ್‌ ಆಸುಪಾಸಿನ ಹೆದ್ದಾರಿಯು ಸಂಪೂರ್ಣ ಹೊಂಡ- ಗುಂಡಿಗಳಿಂದ ಕೂಡಿದ್ದು, ಕೂಡಲೇ ಮರು ಡಾಮರು ಕಾಮಗಾರಿ ಮಾಡಬೇಕು ಎಂದು ಎಸಿಯುವರು ಸೂಚಿಸಿದ್ದಾರೆ. ಅದಕ್ಕೆ ಮಳೆ ಕಡಿಮೆಯಾದ ಕೂಡಲೇ ಅಂದರೆ ಈ ತಿಂಗಳಾಂತ್ಯದೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಇದರೊಂದಿಗೆ ಅಂಡರ್‌ಪಾಸ್‌, ಫ್ಲೈಓವರ್‌ನಿಂದ ಕೆಳಕ್ಕೆ ಮಳೆ ನೀರು ಬೀಳುತ್ತಿದ್ದು, ಅದನ್ನು ಸರಿಪಡಿಸುವಂತೆ ನವಯುಗದವರಿಗೆ ಸೂಚನೆ ನೀಡಲಾಗಿದೆ.

ಸುದಿನ ವರದಿ :

ಫ್ಲೈಓವರ್‌ ಕೆಳಗೆ ರಾಶಿ ಹಾಕಲಾದ ಗುಜರಿ ವಸ್ತುಗಳ ಬಗ್ಗೆ, ಕಾಮಗಾರಿ ಮುಗಿಯುತ್ತ ಬಂದರೂ, ಅದನ್ನು ತೆರವು ಮಾಡದಿರುವುದು, ಅಂಡರ್‌ಪಾಸ್‌, ಫ್ಲೈಓವರ್‌ ಮೇಲಿನಿಂದ ಸರ್ವಿಸ್‌ ರಸ್ತೆಗೆ ಮಳೆ ನೀರು ಬೀಳುವ ಬಗ್ಗೆ “ಉದಯವಾಣಿ ಸುದಿನ’ವು ಅನೇಕ ಬಾರಿ ವಿಶೇಷ ವರದಿಗಳ ಮೂಲಕ ಗಮನಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next