ರಾಯಚೂರು: ರಾಯಚೂರು ಹೈದರಾಬಾದ್ ಮುಖ್ಯರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾದ ಕಾರಣ ಪ್ರಯಾಣಿಕರು ಗಂಟೆಗಟ್ಟಲೇ ಪ್ರಯಾಸ ಪಡುವಂತಾಯಿತು.
ಸಮೀಪದ ಯರಮರಸ್ ಬಳಿಯ ಕೈಗಾರಿಕೆ ವಲಯದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಟ್ರಾಫಿಕ್ ಜಾಮ್ ಉಂಟಾಗಿ ಸಮಸ್ಯೆ ಸೃಷ್ಟಿಯಾಯಿತು. ಈ ಭಾಗದಲ್ಲಿ ಹತ್ತಿ ಮಿಲ್ ಗಳು ಹೆಚ್ಚಾಗಿದ್ದು, ರೈತರು ಹತ್ತಿ ಬೆಳೆ ಮಾರಾಟಕ್ಕೆ ತರುತ್ತಿರುವ ಕಾರಣ ವಾಹನಗಳು ಸಾಲುಗಟ್ಟಿವೆ. ಅಡ್ಡಾದಿಡ್ಡಿ ಓಡಾಡುವುದರಿಂದ ಸಮಸ್ಯೆಯಾಗುತ್ತಿದೆ.
ಯರಮರಸ್ ವಿಐಪಿ ಸರ್ಕ್ಯೂಟ್ ಬಳಿಯಿಂದ ಯರಮರಸ್ ಕ್ಯಾಂಪ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೈದರಾಬಾದ್ ಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದ್ದು , ನಿತ್ಯ ಸಾವಿರಾರು ವಾಹನ ಸಂಚರಿಸುತ್ತಿವೆ.
ಇದನ್ನೂ ಓದಿ:ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ! ಅಪಾಯದಿಂದ ಪಾರು
ಸ್ಥಳದಲ್ಲಿ ಟ್ರಾಫಿಕ್ ಪೊಲೀಸರು ಇಲ್ಲದ ಕಾರಣ ಸಾಕಷ್ಟು ತೊಂದರೆಯಾಯಿತು. ಹತ್ತಿ ಮಾರಾಟ ಮುಗಿಯುವವರೆಗೆ ಈ ರಸ್ತೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.