Advertisement
ಶುಲ್ಕ ವಸೂಲಿ: ತಾಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯನ್ನು ಕೇಂದ್ರ ಸರ್ಕಾರ ಮೇಲ್ದಜೇಗೇರಿಸಲು ಉದ್ದೇಶಿಸಿ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು ಚುತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲು ಕ್ರಮ ಕೈಗೊಂಡಿದ್ದರು. ಅದರಂತೆ 2013ರಲ್ಲಿ ಲ್ಯಾಂಕೋಕಂಪನಿ ಹೊಸಕೋಟೆಯಿಂದ ಮುಳಬಾಗಿಲು ನಗರದ ಮದರಸಾವರೆಗೂ ನಿರ್ಮಿಸಿ ಹೆದ್ದಾರಿ ಅಭಿವೃದ್ಧಿಗಾಗಿ ವ್ಯಯವಾಗಿರುವ ಹಣವನ್ನು ವಸೂಲಿ ಮಾಡಲು ದೇವರಾಯಸಮುದ್ರ ಬಳಿ ಟೋಲ್ ನಿರ್ಮಿಸಿದ್ದಾರೆ.
Related Articles
Advertisement
ಸಿಮೆಂಟ್ ದಿಮ್ಮಿಗಳಿಂದ ಮುಚ್ಚಿದ್ದರೂ ಕೊರೆತ : ಹೆದ್ದಾರಿಯಲ್ಲಿ 24 ಗಂಟೆ ವಾಹನ ಶರವೇಗದಿಂದ ಸಂಚರಿಸುತ್ತಿರುತ್ತವೆ. ಆದರೆ, ಹಳ್ಳಿಗಳ ಜನ ಹೆದ್ದಾರಿ ಯಲ್ಲಿ ವಿಭಜಕದ ಮೂಲಕ ಹಠಾತ್ ಆಗಿ ಒಂದು ಕಡೆಯಿಂದ ಮತ್ತೂಂದು ಕಡೆ ವಾಹನ ನುಗ್ಗಿಸಿದಾಗಎದುರುಗಡೆಯಿಂದ ವೇಗವಾಗಿ ಬರುವ ವಾಹನ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿವೆ. ಸಾಕಷ್ಟು ಜನಮೃತಪಟ್ಟು ಮತ್ತೂ ಕೆಲವರು ಗಾಯಗೊಂಡಿರುವ ಘಟನೆಗಳು ನಡೆದಿವೆ. ಹೆಚ್ಚು ಅಪಘಾತಗಳುಉಂಟಾಗುತ್ತಿದ್ದ ದೊಡ್ಡ ಮಾದೇನಹಳ್ಳಿ, ನಲ್ಲೂರು ಕ್ರಾಸ್, ಕಮದಟ್ಟಿ-ಕಾಮನೂರು ಕಡೆ ಈ ಹಿಂದೆ ಕೊರೆಯಲಾಗಿದ್ದ ರಸ್ತೆ ವಿಭಜಕಗಳನ್ನು ಕಬ್ಬಿಣದ ಬ್ಯಾರಿಕೇಡ್ ಮತ್ತು ಸಿಮೆಂಟ್ ದಿಮ್ಮಿಗಳಿಂದ ಮುಚ್ಚಲಾಗಿದ್ದರೂ ಜನ ಅದರ ಪಕ್ಕದಲ್ಲಿಯೇ ಕೊರೆದು ಬೈಕ್‌ಗಳಲ್ಲಿ ಸಂಚರಿಸ್ತುದ್ದಾರೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.
ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ವಿವಿಧಗೇಟ್‌ಗಳಲ್ಲಿ ಜನ ಅಕ್ರಮವಾಗಿ ರಸ್ತೆ ವಿಭಜಕ ಕೊರೆದು ದಾರಿ ಮಾಡಿಕೊಂಡಿದ್ದಾರೆ.ಈ ದಾರಿಗಳ ಮೂಲಕ ಸಂಚರಿಸುವಾಗವೇಗವಾಗಿ ಬರುವ ವಾಹನಗಳು ಅಪಘಾತ ಕ್ಕೀಡಾಗುತ್ತಿವೆ. ಹೀಗಾಗಿ ಹೆದ್ದಾರಿ ಅಧಿಕಾರಿ ಗಳು ಕೂಡಲೇ ಕ್ರಮ ಕೈಗೊಳ್ಳಬೇಕು. -ರಾಮಚಂದ್ರ, ಟ್ಯಾಕ್ಸಿ ಚಾಲಕ
ಹೆದ್ದಾರಿಯಲ್ಲಿ ಇಂತಹ ಕೃತ್ಯಗಳಿಂದ ಉಂಟಾಗುತ್ತಿರುವ ಅಪಘಾತತಪ್ಪಿಸಲು ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. -ಉಕೇಶ್‌ಕುಮಾರ್, ಪ್ರಭಾರಿ ಡೀಸಿ
-ಎಂ.ನಾಗರಾಜಯ್ಯ