Advertisement
ಪಡೀಲ್ ಜಂಕ್ಷನ್‌ನಿಂದ ಬಿಕರ್ನಕಟ್ಟೆ, ನಂತೂರು ಕಡೆಗೆ ಸಾಗುವ ಹೆದ್ದಾರಿಯ ಕೆಂಬಾರಿನಲ್ಲಿ ಎಡಭಾಗದ ರಸ್ತೆಯ ಬದಿ ಈ ಬಾರಿ ಸುರಿದ ಮಳೆಗೆ ಕುಸಿದಿತ್ತು. ಇದು ಏರು ರಸ್ತೆಯಾಗಿರುವುದರಿಂದ ಮೇಲ್ಭಾಗದಲ್ಲಿರುವ ಮರೋಳಿ ಕಡೆಯಿಂದ ಹರಿದು ಬರುವ ನೀರು ಕುಸಿತಗೊಂಡಲ್ಲಿ ರಸ್ತೆಯಿಂದ ಕೆಳಕ್ಕೆ ಹರಿಯುತ್ತದೆ. ಹಲವು ವರ್ಷಗಳಿಂದ ಇದೇ ರೀತಿ ನೀರು ಹರಿದು, ಮಣ್ಣು ಸವೆದು ಈ ಬಾರಿ ಆಗಸ್ಟ್ ತಿಂಗಳಲ್ಲಿ ಕುಸಿತಗೊಂಡಿದೆ. ಸದ್ಯ ತಾತ್ಕಾಲಿಕವಾಗಿ ಮಣ್ಣು ಹಾಕಿ ನೀರು ಕೆಳಗೆ ಹರಿದು ಹೋಗದಂತೆ ತಡೆಯಲಾಗಿದ್ದು, ಸ್ಥಳದಲ್ಲಿ ಒಂದು ಬ್ಯಾರಿಕೇಡ್ ಇಡಲಾಗಿದೆ.
Related Articles
Advertisement
ಇನ್ನೊಂದು ಕಡೆ ಬಿರುಕು ಮಣ್ಣು ಹಾಕಿ ಹೆದ್ದಾರಿಯಲ್ಲಿ ನೀರಿನ ಪಥಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಇನ್ನೊಂದು ಕಡೆಯಲ್ಲಿ ನೀರು ಪ್ರಪಾತಕ್ಕೆ ಹರಿಯಲು ದಾರಿ ಕಂಡು ಕೊಂಡಿದೆ. ಮುಂದಿನ ಒಂದೆರಡು ಮಳೆಗಾಲದಲ್ಲಿ ಇಲ್ಲಿಯೂ ನೀರು ಹರಿಯುತ್ತಿದ್ದರೆ, ಹೆದ್ದಾರಿಯಲ್ಲಿ ಇನ್ನೊಂದು ಕಡೆ ಬಿರುಕು ಉಂಟಾಗುವುದು ಖಚಿತ. ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ, ನೀರು ಹರಿದು ಹೋಗಲು ಅವಕಾಶ ಇರುವೆಡೆಯೆಲ್ಲ ಹರಿದು, ಈ ರೀತಿಯ ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.
ಅಧಿಕಾರಿಗಳ ಸಭೆಯಲಿ ಚರ್ಚಿಸಿ ತೀರ್ಮಾನ: ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಾರಿ ನಿರಂತರ ಮಳೆಯಾಗುತ್ತಿದ್ದು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ಅಡ್ಡಿಯಾಗಿದೆ. ಕೆಂಬಾರು ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತ ಕುರಿತು ಹೆದ್ದಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪ್ರಶ್ನಿಸಿ, ಯಾವ ರೀತಿ ಪರಿಹಾರ ಕೈಗೊಳ್ಳಬಹುದು ಎಂದು ತೀರ್ಮಾನಿಸಲಾಗುವುದು. -ವೇದವ್ಯಾಸ ಕಾಮತ್, ಶಾಸಕರು ಭರತ್ ಶೆಟ್ಟಿಗಾರ್