Advertisement

ಕಟಪಾಡಿ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾರಣಾಂತಿಕ ಹೊಂಡ -ಗುಂಡಿಗಳು, ವಾಹನ ಸವಾರರ ಆಕ್ರೋಶ

03:46 PM Jul 17, 2022 | Team Udayavani |

ಕಟಪಾಡಿ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾರಣಾಂತಿಕ ಹೊಂಡ-ಗುಂಡಿಗಳು ಅಪಾಯವನ್ನು ಆಹ್ವಾನಿಸುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ಕಟಪಾಡಿಯಿಂದ ಉಡುಪಿಯತ್ತ ತೆರಳುವ ಪಶ್ಚಿಮ ಪಾರ್ಶ್ಶ್ವ ದ ಇಳಿಜಾರು ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹದಾಕಾರದ ಹೊಂಡ-ಗುಂಡಿಯು ಜೀವ ಬಲಿಗಾಗಿ ಬಾಯ್ದೆರೆದು ಕಾದು ಕುಳಿತಂತಾಗಿದೆ. ಸಮಾನಾಂತರವಾಗಿ ಅತೀವೇಗದಿಂದ ವಾಹನಗಳ ಸಂಚರಿಸುವ ಸಂದರ್ಭ ಅಂದಾಜು ತಪ್ಪುವ ವಾಹನ ಚಾಲಕರು ಕಡೆ ಕ್ಷಣದಲ್ಲಿ ಗುಂಡಿ ತಪ್ಪಿಸುವ ಭರದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಳೆ ಬಂದಾಗ ನೀರು ತುಂಬಿದ ಗುಂಡಿಯು ಗಮನಕ್ಕೆ ಬಾರದೆ ವಾಹನಗಳು ಬಿಡಿ ಭಾಗಗಳನ್ನು ಕಳಚಿಕೊಳ್ಳುವ ದುಸ್ಥಿತಿಯನ್ನು ಅಲ್ಲಲ್ಲಿ ಕಾಣುವಂತಾಗಿದೆ. ಕತ್ತಲಾದ ಬಳಿಕ ದ್ವಿಚಕ್ರ, ಲಘು ವಾಹನ ಸವಾರರಿಗೆ ಹೊಂಡಗುಂಡಿಯಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿಯ ಸಂಚಾರವು ಬಲು ಅಪಾಯಕಾರಿಯಾಗಿ ಪರಿಣಮಿಸಿದೆ. ವಾಹನ ಚಾಲಕರೂ ಈ ಬಗ್ಗೆ ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸಬೇಕಿದೆ. ಎಚ್ಚರ ತಪ್ಪಿದಲ್ಲಿ ಅಪಾಯ ಮೈಮೇಲೆ ಎಳೆದುಕೊಂಡಂತಾಗಲಿದೆ.

ಪ್ರಮುಖವಾಗಿ ಕಟಪಾಡಿ, ಉದ್ಯಾವರ, ಪಾಂಗಾಳ, ಕಾಪು, ಉಚ್ಚಿಲ ಪ್ರದೇಶಗಳಲ್ಲಿ ಈ ಬೃಹತ್ ಗಾತ್ರದ ಮಾರಣಾಂತಿಕ ಹೊಂಡ ಗುಂಡಿಗಳು ಕಂಡು ಬರುತ್ತಿದ್ದು, ಕೆಲವೆಡೆ ಹೆದ್ದಾರಿಯಲ್ಲಿಯೇ ಮಳೆ ನೀರು ನಿಲ್ಲುವುದರಿಂದ ಸುವ್ಯವಸ್ಥಿತ ಸಂಚಾರಕ್ಕೆ ಅವ್ಯವಸ್ಥೆಯು ಕಾಡುವಂತಾಗಿದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ.

Advertisement

ತೀವ್ರತರವಾದ ಅವಘಡ ಸಂಭವಿಸುವ ಮುನ್ನವೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸಮರೋಪಾದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಸಂಚಾರವೇ ದುಸ್ತರವಾಗಿದೆ. ಸ್ವಲ್ಪ ಏಮಾರಿದಲ್ಲಿ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹೆದ್ದಾರಿ ನಡುವೆ ಕಂಡು ಬರುವ ಆಳವಾದ ಗುಂಡಿ ಅಪಾಯಕಾರಿಯಾಗಿದೆ. ಬೈಕ್ ಈ ಗುಂಡಿಯಲ್ಲಿ ಬಿದ್ದು ಏಳುವ ಸಂದರ್ಭ ಇತರೇ ವಾಹನಗಳು ಢಿಕ್ಕಿ ಹೊಡೆದು ಅಪಘಾತವಾಗುವ ಸಂಭವ ಹೆಚ್ಚಿದೆ. ಜನರ ಜೀವದ ಜೊತೆ ಚೆಲ್ಲಾಟ ಆಡದೇ, ಮಳೆಯ ನೆಪವೊಡ್ಡದೆ ಹೆದ್ದಾರಿ ಸಂಚಾರಕ್ಕೆ ಸುರಕ್ಷತೆಯನ್ನು ಕಲ್ಪಿಸಬೇಕಿದೆ ಎಂದು ಬೈಕ್ ಸವಾರ ಫಾರೆಸ್ಟ್ ಗೇಟ್, ಕಟಪಾಡಿಯ ಸಂತೋಷ್ ಪೂಜಾರಿ ಅಕ್ರೋಶ ವ್ಯಕ್ತಪಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೀಗ ಅಪಾಯಕಾರಿ ಸಂಚಾರವಾಗಿದೆ. ಮಳೆ ಬಂದಾಗ ನೀರು ತುಂಬಿ ಗುಂಡಿಯು ಗಮನಕ್ಕೆ ಬಾರದೆ ಪ್ರಯಾಣಿಕರೂ ಹೆದರುವ ಪರಿಸ್ಥಿತಿ ನಿಮರ್ಾಣವಾಗಿದೆ. ವಾಹನಗಳು ಬಿಡಿಭಾಗಗಳನ್ನು ಕಳಚಿಕೊಳ್ಳುವಂತಾಗಿದೆ. ದುಡಿಮೆಯ ದುಡ್ಡು ಗ್ಯಾರೇಜ್ಗೆ ಹಾಕುವಂತಹ ಪರಿಸ್ಥಿತಿ ನಿಮರ್ಾಣಗೊಂಡಿದೆ. ಇಂತಹ ಅವ್ಯವಸ್ಥೆಯನ್ನು ಕೇಳುವವರೇ ಇಲ್ಲವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯು ಹೆದ್ದಾರಿ ಗುಂಡಿಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಿ ಉದ್ಯಾವರ ರಿಕ್ಷಾ ಚಾಲಕ ಮಾಲಕ ಸಂಘದ ಆಧ್ಯಕ್ಷ ಗಣೇಶ್ ಕೊಟ್ಯಾನ್ ಪಿತ್ರೋಡಿ ಮತ್ತು ಜನರು ಬಿದ್ದು ಸಾಯುವ ಪರಿಸ್ಥಿತಿ ನಿಮರ್ಾಣಗೊಂಡಿದೆ. ಸರಕಾರವು ಕೋಟಿ ಕೋಟಿ ಬಿಡುಗಡೆಯ ಹೇಳಿಕೆ ನೀಡುತ್ತಿದ್ದರೂ ಹೆದ್ದಾರಿಯ ಅವ್ಯವಸ್ಥೆಯನ್ನು ಕೇಳುವ ಗತಿ ಇಲ್ಲವಾಗಿದೆ. ಯಾವುದೇ ಜನಪ್ರತಿನಿಧಿಗಳು ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಜನ ಸಾಮಾನ್ಯರನ್ನು, ದುಡಿದು ತಿನ್ನುವ ವರ್ಗದವರ ಸಂಕಷ್ಟಕ್ಕೆ ಮುಕ್ತಿಯೇ ಇಲ್ಲವಾಗಿದೆ. ಎಂದು ಕಟಪಾಡಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಪ್ರ,ಕಾರ್ಯದಶಿ ಹನೀಫ್ ಮಣಿಪುರ ತಮ್ಮ ಆಸಹನೆ ಯನ್ನು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next