Advertisement

ಬರಲಿದೆ ಟೋಲ್‌ಗ‌ಳಲ್ಲಿ  ಹೈವೇ ನೆಸ್ಟ್‌

12:06 PM May 19, 2018 | Team Udayavani |

ಮಂಗಳೂರು: ಹೆದ್ದಾರಿ ನಿರ್ಮಾಣ ಮಾಡುವ ಜತೆಗೆ ಪ್ರಯಾಣಿಕರಿಗೆ ರಸ್ತೆ ಸಂಚಾರ ಸಂದರ್ಭ ವಿವಿಧ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ದೇಶದ ಎಲ್ಲ ಟೋಲ್‌ ಪ್ಲಾಝಾಗಳಲ್ಲಿ “ಹೈವೇ ನೆಸ್ಟ್‌’ ಎಂಬ ಹೆಸರಿನ ವಿನೂತನ ಕ್ಯಾಂಟೀನ್‌ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರ ಮುಂದಾಗಿದ್ದು, ಪ್ರತಿ ಟೋಲ್‌ ನಲ್ಲಿಯೂ ಸುಮಾರು 200 ರಿಂದ 250 ಮೀ. ಅಂತರದಲ್ಲಿ ಈ “ಹೆದ್ದಾರಿ ಗೂಡು’ಗಳು ತಲೆಯೆತ್ತಲಿವೆ. 

Advertisement

ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಝಾ ಬಳಿಯೇ ಪ್ರಯಾಣಿಕರಿಗೆ ಹೊಟೇಲ್‌, ವಿಶ್ರಾಂತಿ ಕೊಠಡಿ, ಶೌಚಾ ಲಯ ಹಾಗೂ ವಾಹನ ಪಾರ್ಕಿಂಗ್‌ ಸೌಲಭ್ಯ ಒದಗಿಸಲು ಈ ಮೂಲಕ ನಿರ್ಧರಿಸಲಾಗಿದೆ. ಈಗಾಗಲೇ ದೇಶದ ಹಲವು ಟೋಲ್‌ ಫ್ಲಾಝಾಗಳಲ್ಲಿ ಕಾರ್ಯಾರಂಭಿಸಿರುವ ಈ ಯೋಜನೆ ರಾಜ್ಯದ ಎಲ್ಲ ಟೋಲ್‌ಗ‌ಳಲ್ಲೂ ಶೀಘ್ರದಲ್ಲಿ ಪೂರ್ಣ ರೀತಿಯಲ್ಲಿ ಜಾರಿಯಾಗಲಿದೆ. ತಿಂಡಿ ತಿನಿಸುಗಳ ಕ್ಯಾಂಟೀನ್‌, ಶೌಚಾಲಯ ಹಾಗೂ ವಾಟರ್‌ ಎಟಿಎಂ ಎಂಬ ಮೂರು ಪ್ರತ್ಯೇಕ ವ್ಯವಸ್ಥೆ ಟೋಲ್‌ ಫ್ಲಾಝಾದ ಬಳಿ ದೊರೆಯಲಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಟೋಲ್‌ ಫ್ಲಾಝಾ ಗಳಲ್ಲಿ ಪ್ರಸ್ತುತ “ಹೈವೇ ನೆಸ್ಟ್‌’ ಪರಿಚಯಿಸ ಲಾಗುತ್ತಿದ್ದು, ಪ್ರಾರಂಭಿಕ ಸಿದ್ಧತೆಗಳನ್ನು ಕೂಡ ನಡೆಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತಾದರೆ, ಒಂದೆರಡು ತಿಂಗಳಿನ ಒಳಗೆ ಹೈವೇ ನೆಸ್ಟ್‌ನ ಸೌಲಭ್ಯ ಹೆದ್ದಾರಿ ಪ್ರಯಾಣಿಕರಿಗೆ ಎಲ್ಲ ಟೋಲ್‌ ಫ್ಲಾಝಾದಲ್ಲಿ ಲಭ್ಯ ವಾಗಲಿದೆ. ಬ್ರಹ್ಮರಕೂಟ್ಲು ಟೋಲ್‌ಗೇಟ್‌ನ ಸಮೀಪದಲ್ಲಿ ಹೈವೇ ನೆಸ್ಟ್‌ನ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ. ಕೆಲವು ತಿಂಗಳ ಹಿಂದೆಯೇ ಇದರ ಪರಿಕರಗಳನ್ನು ಇಲ್ಲಿಗೆ ತರಿಸಿ ನೆಸ್ಟ್‌ ಸ್ಥಾಪಿಸಲಾಗಿದೆ. ಇದರ ಸುತ್ತಲೂ ಕಾಂಕ್ರೀಟ್‌ ಕೆಲಸ ಮಾಡಲಾಗಿದ್ದು, ಶೌಚಾಲಯ ಹಾಗೂ ವಾಟರ್‌ ಎಟಿಎಂ ಶೀಘ್ರ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

ಏನಿರುತ್ತದೆ ?
ಹೈವೇ ನೆಸ್ಟ್‌ (ಮಿನಿ)ನಲ್ಲಿ ಚಿಪ್ಸ್‌, ಬಿಸ್ಕತ್ಸ್ , ಕುಕ್ಕೀಸ್‌ ಸೇರಿದಂತೆ ಎಲ್ಲ ವಿಧದ ಪ್ಯಾಕೆಟ್‌ ತಿಂಡಿಗಳು, ನೀರಿನ ಬಾಟಲಿ, ಪಾನೀಯಗಳು ಹಾಗೂ ಚಹಾ-ಕಾಫಿ ವ್ಯವಸ್ಥೆ ಇದೆ. “ವಾಟರ್‌ ಎಟಿಎಂ’ ಕೂಡ ಇಲ್ಲಿ ಇರಲಿದೆ. ಹಣ ಪಾವತಿಸಿ ಅದರ ಮೌಲ್ಯದಷ್ಟು ಶುದ್ಧ ಕುಡಿಯುವ ನೀರನ್ನು ಎಟಿಎಂ ಮಾದರಿಯಲ್ಲಿಯೇ ಪಡೆಯ ಬಹುದು. ಕ್ಯಾಂಟೀನ್‌ ಪಕ್ಕದಲ್ಲಿಯೇ, ಪುರುಷ/ ಮಹಿಳೆಯರಿಗೆ ಪ್ರತ್ಯೇಕ ಶೌಚಾ ಲಯ ವ್ಯವಸ್ಥೆ ಇರಲಿದೆ. ವಿಕಲ ಚೇತನರಿಗೂ ಅನು ಕೂಲ ವಾಗುವಂತೆ ಇದನ್ನು ನಿರ್ಮಿಸಲಾಗುತ್ತದೆ. ಲಭ್ಯ ಭೂಮಿ ಇರುವ ಸ್ಥಳದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕೂಡ ಮಾಡಲಾಗುತ್ತದೆ. 

ಹೈವೇ ನೆಸ್ಟ್‌  ಯಾಕೆ?
ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಝಾ ಬಳಿಯೇ ಪ್ರಯಾ ಣಿಕ ರಿಗೆ ಹೊಟೇಲ್‌, ವಿಶ್ರಾಂತಿ ಕೊಠಡಿ, ಶೌಚಾಲಯ ಹಾಗೂ ವಾಹನ ಪಾರ್ಕಿಂಗ್‌ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಕಳೆದ ಕೆಲವು ವರ್ಷ ಗಳಿಂದ ಕೇಳಿಬರುತ್ತಿತ್ತು. ಕೆಲವು ಕಡೆ ಹೆದ್ದಾರಿ ಹಾದು ಹೋಗುವ ಜಾಗದಲ್ಲಿ ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಹಲವು ಕಿ.ಮೀ. ದೂರ ಕ್ರಮಿಸ ಬೇಕಾದ ಹಿನ್ನೆಲೆಯಲ್ಲಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿ ಯಲು ನೀರು ಸಿಗಲು ಕೂಡ ಕೆಲವು ಕಿ.ಮೀ. ಸಾಗಬೇಕಾಗುತ್ತದೆ. ಇದಕ್ಕಾಗಿ ಕನಿಷ್ಠ ಟೋಲ್‌ ಫ್ಲಾಝಾ ಇರುವ ಜಾಗದಲ್ಲಿ ಹೆದ್ದಾರಿ ಪ್ರಾಧಿ ಕಾರದ ವತಿ ಯಿಂದಲೇ ಶೌಚಾಲಯ, ಪಾರ್ಕಿಂಗ್‌ ಸಹಿತ ಸರ್ವ ವ್ಯವಸ್ಥೆ ಗಳನ್ನು ಪ್ರಯಾ ಣಿಕರಿಗೆ ನೀಡುವ ನೆಲೆಯಿಂದ “ಹೈವೇ ನೆಸ್ಟ್‌’ ಅನ್ನು ಜಾರಿ ಗೊಳಿಸಲಾಗುತ್ತದೆ. 

Advertisement

ಕರಾವಳಿಯ ಟೋಲ್‌ ಗೇಟ್‌ಗಳು
– ಬ್ರಹ್ಮರಕೂಟ್ಲು  ಟೋಲ್‌ಗೇಟ್‌
– ಸುರತ್ಕಲ್‌ ಟೋಲ್‌ಗೇಟ್‌ 
– ತಲಪಾಡಿ ಟೋಲ್‌ಗೇಟ್‌ 
– ಹೆಜಮಾಡಿ ಟೋಲ್‌ಗೇಟ್‌ 
– ಸಾಸ್ತಾನ ಟೋಲ್‌ಗೇಟ್‌ 

– ದಿನೇಶ್ ಇರಾ

Advertisement

Udayavani is now on Telegram. Click here to join our channel and stay updated with the latest news.

Next