ವಾಹನ ಸವಾರರ ಅಪರಿಮಿತ ವೇಗ, ನಿರ್ಲಕ್ಷ್ಯದ ಚಾಲನೆ ಮತ್ತು ಓವರ್ ಟೇಕ್ ಭರಾಟೆಯ ಕಾರಣದಿಂದಾಗಿ ಹೆದ್ದಾರಿ ಬದಿ, ಡಿವೈಡರ್ ನಡುವೆ ಇರುವ ಸೂಚನಾ ಫಲಕ, ಮೈಲುಗಲ್ಲುಗಳು ಉರುಳಿವೆ.
ಎಲ್ಲೆಲ್ಲಿ ಸಮಸ್ಯೆ?
ಎರ್ಮಾಳು, ಉಚ್ಚಿಲ ಪೇಟೆ, ಮೂಳೂರು, ಮೂಳೂರು ಅಲ್ ಇಹ್ಸಾನ್ ಸ್ಕೂಲ್ ಮುಂಭಾಗ, ಕೊಪ್ಪಲಂಗಡಿ, ಪಾಂಗಾಳ, ಕಟಪಾಡಿ, ಉದ್ಯಾವರ ಸಹಿತ ಹಲವೆಡೆಗಳಲ್ಲಿ ಮುರಿದುಬಿದ್ದ ಸೂಚನಾಫಲಕಗಳಿವೆ.
ಸ್ಥಳೀಯರಿಂದಲೇ ತೆರವು
ಪೂರ್ಣ ಧರಾಶಾಯಿಯಾದ, ಅರ್ಧ ವಾಲಿದ, ತುಂಡಾಗಿ ಬಿದ್ದಿರುವ ಸೂಚನಾ ಫಲಕಗಳನ್ನು ಕೆಲವು ಕಡೆಗಳಲ್ಲಿ ಸ್ಥಳೀಯರೇ ತುಂಡರಿಸಿ ತೆಗೆದು ಅಪಾಯವನ್ನು ತಗ್ಗಿಸುವ ಯತ್ನ ಮಾಡಿದ್ದಾರೆ. ಬಿದ್ದ ಫಲಕಗಳನ್ನು ತೆರವುಗೊಳಿಸಲು ಗುತ್ತಿಗೆದಾರರಾಗಲಿ, ಸ್ಥಳೀಯ ಸಂಸ್ಥೆಯಾಗಲಿ ಮುಂದೆ ಬರುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುರ್ತಾಗಿ ಸ್ಪಂದಿಸಬೇಕು
ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಬಗ್ಗೆ ಮುತುವರ್ಜಿಯೇ ಇಲ್ಲದಂತೆ ಕಾಮಗಾರಿ ನಡೆದಿದೆ. ತುಂಡಾಗಿ ಬಿದ್ದಿರುವ ಕಬ್ಬಿಣದ ಸೂಚನಾ ಫಲಕಗಳಿಂದ ದ್ವಿಚಕ್ರ ವಾಹನ ಸವಾರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗುತ್ತಿಗೆದಾರರು ತುರ್ತಾಗಿ ಸ್ಪಂದಿಸಬೇಕಾಗಿದೆ.
– ದಯಾನಂದ, ಮೂಳೂರು
Advertisement
ನಿರ್ಲಕ್ಷ್ಯಮಾಡಿದ್ದಾರೆಅಧಿಕಾರಿಗಳು ಮತ್ತು ಗುತ್ತಿಗೆದಾರರು ಹೆದ್ದಾರಿ ಬದಿಯಲ್ಲಿ ಅಪಾಯಕಾರಿಯಾಗಿ ಬಿದ್ದ ಸೂಚನಾ ಫಲಗಳನ್ನು ತಿಂಗಳುಗಟ್ಟಲೆ ಆದರೂ ತೆರವುಗೊಳಿಸದೇ ಪೂರ್ಣ ನಿರ್ಲಕ್ಷ್ಯಮಾಡಿದ್ದಾರೆ.
– ಚಂದ್ರ, ಮೂಳೂರು