ಯಮಕನಮರಡಿ: ಕಾಕತಿ ಗ್ರಾಮದಿಂದ ಮಹಾರಾಷ್ಟ್ರ ಗಡಿ ಭಾಗದವರೆಗೆ 100 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ಈಗಾಗಲೇ ನಾಲ್ಕು ಲೈನ್ ರಸ್ತೆ ಇದ್ದು ಇನ್ನು 2 ಲೈನ್ ರಸ್ತೆಗೆ ಕೇಂದ್ರ ಸರ್ಕಾರದಿಂದ 2890 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಹುಕ್ಕೇರಿ ತಾಲೂಕಿನ ಯಮಕನಮರಡಿ ಯಿಂದ ಗುಡಗನಹಟ್ಟಿವರೆಗೆ 2 ಕಿ.ಮೀ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಾಮಗಾರಿಗೆ ಲೋಕೋಪಯೋಗಿ ಇಲಾಖೆ 5054 ಯೋಜನೆಯಡಿ 80 ಲಕ್ಷ ರೂ. ಮಂಜೂರು ಮಾಡಿದೆ. ಸಂಸದರ ನಿಧಿ ಯಿಂದ ಈ ಭಾಗದಲ್ಲಿ ಇನ್ನಷ್ಟು ಕೆಲಸ ಮಾಡಲ ಪ್ರಯತ್ನ ಮಾಡಲಾಗುವುದು.
ಗೋಟೂರ-ವಿಜಯಪುರ ರಸ್ತೆ ಕೂಡ ಶೀಘ್ರ ಆರಂಭವಾಗಲಿದೆ. ಕೇಂದ್ರ ಸರ್ಕಾರ ಗ್ರಾಮೀಣ ಭಾಗದಲ್ಲಿ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ -ಸಿಲಿಂಡರ್, ಬಡವರಿಗೆ ಮನೆಗಳು, ಜೆಜೆಎಂ ಯೋಜನೆಯಡಿ ಪ್ರತಿ ಮನೆಗೆ ನೀರು ಪೂರೈಸುತ್ತಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ವೇಳೆ ಮಾಜಿ ಸಚಿವ ಶಶಿಕಾಂತ ನಾಯಿಕ, ಚಿಕ್ಕೋಡಿ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ, ರವೀಂದ್ರ ಹಂಜಿ, ಹುಕ್ಕೇರಿ ಕೆಇಬಿ ಅಧ್ಯಕ್ಷ ಕಲಗೌಡಾ ಪಾಟೀಲ, ಮಾರುತಿ ಅಷ್ಟಗಿ, ಶ್ರೀಶೈಲ ಯಮಕನಮರಡಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್‌ಟಿ ಘಟಕದ ಅಧ್ಯಕ್ಷ ಬಸವರಾಜ ಹುಂದ್ರಿ, ಸಿದ್ದಲಿಂಗ ಸಿದ್ದಗೌಡರ, ಪ್ರಲ್ಹಾದ ನಾಯಿಕ, ಉದಯ ನಿರ್ಮಳ, ಕುಶಾಲ ರಜಪೂತ, ಸಂತೋಷ ಚಿಕ್ಕೋರ್ಡೆ, ಭರಮಾ ಯಾದವಾಡಿ, ಪ್ರಕಾಶ ನಗಾರಿ, ಮಲ್ಲಪ್ಪ ಶಿಳ್ಳಿ, ಈರಣ್ಣ ಅತ್ತಿಮರದ, ಸುರೇಶ ಕೇದನೂರಿ, ರವಿ ಕುರಾಡೆ, ಶಿವಾನಂದ ಮಸಗುಪ್ಪಿ, ಹಣಮಂತ ಬರಗಾಲಿ, ಚಿಕ್ಕೋಡಿ ಪಿಡಬ್ಲ್ಯುಡಿ ಎಇಇ ಬಿ.ಬಿ. ಬೇಡಕಿಹಾಳ ಇದ್ದರು. ಜೆ.ಎನ್. ಅವಾಡೆ ನಿರೂಪಿಸಿ, ವಂದಿಸಿದರು.