Advertisement
ರಾಷ್ಟ್ರೀಯ ಹೆದ್ದಾರಿ-73ರ ಮಂಗಳೂರು ವಿಲ್ಲುಪುರಂ ರಸ್ತೆಯ ಬಿ.ಸಿ. ರೋಡಿನಿಂದ ಪುಂಜಾಲಕಟ್ಟೆವರೆಗೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. 2018ರಲ್ಲಿ ಆರಂಭಗೊಂಡಿದ್ದ ಕಾಮಗಾರಿ 2020ರ ಡಿಸೆಂಬರ್‌ಗೆ ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ನಿಂದಾಗಿ ವಿಳಂಬವಾಗಿದೆ.
Related Articles
Advertisement
ಭೂಸ್ವಾಧೀನ ಪ್ರಕ್ರಿಯೆಗೆ 100 ಕೋ.ರೂ.:
ಚತುಷ್ಪಥ ಕಾಮಗಾರಿಗೆ ಈಗಾಗಲೆ 383 ಕೋ.ರೂ. ಪ್ರಸ್ತಾವನೆ ಸಿದ್ಧಗೊಂಡಿದ್ದು ಭೂಸ್ವಾಧೀನಕ್ಕಾಗಿ 100 ಕೋ.ರೂ. ಮೀಸಲಿಡಲಾಗಿದೆ. ಹೆದ್ದಾರಿ ಇಲಾಖೆ ಸರ್ವೇ ಕಾರ್ಯದ ಜತೆ ಕಂದಾಯ ಇಲಾಖೆಯಿಂದಲೂ 5 ಮಂದಿ ಸರ್ವೇಕಾರ್ಯದಲ್ಲಿ ತೊಡಗಿದ್ದಾರೆ. ಡಿಪಿಆರ್ ಪೂರ್ಣಗೊಂಡ ಬಳಿಕ ಅಧಿಸೂಚನೆ ಪ್ರಕಟಗೊಳ್ಳಲಿದೆ. ಆಬಳಿಕ ಆಕ್ಷೇಪಣೆಗೆ ಅವಕಾಶವಿರಲಿದ್ದು 2022ರ ಜನವರಿಯಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ.
ಬೈಪಾಸ್ ರಸ್ತೆ ಚಿಂತನೆ ತಟಸ್ಥ :
ಹಲವು ಚರ್ಚೆ ಹಾಗೂ ವರ್ತಕರಲ್ಲಿ ಗೊಂದಲಗಳಿಗೆ ಕಾರಣವಾಗಿದ್ದ ಗುರುವಾಯನಕೆರೆ-ಉಜಿರೆ ವರೆಗಿನ ಬೈಪಾಸ್ ರಸ್ತೆ ಚಿಂತನೆ ಸದ್ಯದ ಮಾಹಿತಿಯಂತೆ ಕೈಬಿಡಲಾಗಿದೆ. ಬೆಳ್ತಂಗಡಿ-ಗುರುವಾಯನಕೆರೆ ಪೇಟೆ ಮಧ್ಯೆಯೇ ಚತುಷ್ಪಥ ಕಾಂಕ್ರೀಟ್ ರಸ್ತೆ ಸಾಗಲಿದೆ. ಇದು ವರ್ತಕರಲ್ಲಿ ಹಲವು ಗೊಂದಲಗಳಿಗೆ ಎಡೆಮಾಡಿದೆ. ಪೇಟೆ, ವ್ಯಾಪಾರ ಹೋದ ಬಳಿಕ ರಸ್ತೆ ಅಭಿವೃದ್ಧಿಯಾದರೇನು? ಆದ್ದರಿಂದ ಬೈಪಾಸ್ ಮಾಡಲಿ ಎನ್ನುತ್ತಾರೆ ಅವರು.
ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಪುಂಜಾಲಕಟ್ಟೆಯಿಂದ-ಚಾರ್ಮಾಡಿ ವರೆಗೆ ಹೆದ್ದಾರಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಆರಂಭಿಸಿವೆ. ಸರಕಾರದ ಮಟ್ಟದಲ್ಲಿ ಎಲ್ಲ ಪ್ರಕ್ರಿಯೆಗಳು ನಡೆದರೆ 2022ರ ಬಳಿಕ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.– ಕೃಷ್ಣಮೂರ್ತಿ, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು ಉಪವಿಭಾಗ
-ಚೈತ್ರೇಶ್ ಇಳಂತಿಲ