ಹೊಸದಿಲ್ಲಿ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಲ್ಲ ವ್ಯವಹಾರಗಳಿಗೂ ಬಿಸಿ ಮುಟ್ಟಿಸಿದೆ. ಈ ಮೊದಲು ಆರ್ಥಿಕ ಹಿಂಜರಿತದಿಂದ ಕಂಗಾಲಾಗಿದ್ದ ಭಾರತದ ಕಾರು ಮಾರುಕಟ್ಟೆಗೆ ಲಾಕ್‌ಡೌನ್ ಇನ್ನಷ್ಟು ಸಮಸ್ಯೆ ಸೃಷ್ಟಿಸಿದೆ.
ಆದರೂ ಈ ಒಂದು ಕಾರು ಭರ್ಜರಿ ಬೇಡಿಕೆಗಳಿಸಿಕೊಂಡಿದ್ದು ದಾಖಲೆ ಮಾಡಿದೆ. ಅದೇ ಹ್ಯುಂಡೈ ಕ್ರೆಟಾ.
ಎಪ್ರಿಲ್‌ನಲ್ಲಿ ಭಾರತದಲ್ಲಿ ಯಾವುದೇ ಕಾರುಗಳು ಮಾರಾಟವಾಗಿರಲಿಲ್ಲ. ಆದರೆ ಮೇ ವೇಳೆಗೆ ಮಾರಾಟ ಮತ್ತೆ ಶುರುವಾಗಿದ್ದು, ಒಂದೇ ತಿಂಗಳಲ್ಲಿ 3212 ಕಾರುಗಳು ಮಾರಾಟವಾಗುವ ಮೂಲಕ ಹ್ಯುಂಡೈ ಕ್ರೆಟಾ ದಾಖಲೆ ಸೃಷ್ಟಿಸಿದೆ. ಇದು ದೇಶದಲ್ಲಿ ಅತ್ಯಧಿಕವಾಗಿ ಮಾರಾಟವಾದ ಕಾರೂ ಹೌದು.
ಈವರೆಗೆ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಮಾರುತಿ ಸುಝುಕಿಯ ಕಾರುಗಳೇ ಇದ್ದವು. ಈಗ ಅದನ್ನು ಹ್ಯುಂಡೈ ಕಸಿದುಕೊಂಡಿವೆ. ಲಾಕ್‌ಡೌನ್‌ಗಿಂತ ಮೊದಲು ಕ್ರೆಟಾಗೆ ಭರ್ಜರಿ ಬುಕ್ಕಿಂಗ್ ಸೃಷ್ಟಿಯಾಗಿತ್ತು.
ಆದರೆ ಒಟ್ಟಾರೆ ಕಾರು ಮಾರಾಟದಲ್ಲಿ ಹ್ಯುಂಡೈ ಸಾಧನೆ ಕಡಿಮೆ ಇದೆ. ಮೇ ತಿಂಗಳಲ್ಲಿ ಹ್ಯುಂಡೈ ಕಂಪೆನಿಯ 6883 ಕಾರುಗಳು ಮಾರಾಟವಾಗಿವೆ. ಆದರೆ ಮೊದಲ ಸ್ಥಾನವನ್ನು ಮಾರುತಿ ಸುಝಕಿ ಪಡೆದುಕೊಂಡಿದೆ. ಇದು 13,865 ಕಾರುಗಳನ್ನು ಮಾರಾಟ ಮಾಡಿದೆ.
ಇನ್ನು ಅತ್ಯಧಿಕ ಮಾರಾಟವಾದ ಕಾರುಗಳ ಮಾಡೆಲ್‌ಗಳಲ್ಲಿ ಕ್ರೆಟಾ, ಅದರ ಬಳಿಕ ಎರ್ಟಿಗಾ, ಮಾರುತಿ ಸುಝುಕಿ ಡಿಸೈರ್, ಮಹೀಂದ್ರಾ ಬೊಲೆರೋ ಮತ್ತು ಮಾರುತಿ ಸುಝುಕಿ ಇಕೋ ವಾಹನಗಳಿವೆ.