ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ. ಈಗ ಕಾಶ್ಮೀರಕ್ಕೆ ನಾವು ಇತರ ರಾಜ್ಯಗಳಂತೆ ತೆರಳಬಹುದಾಗಿದೆ. ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಈಗ ತೆಗೆದುಹಾಕಲಾಗಿದೆ.
ಈ ಬೆಳವಣಿಗೆಗಳು ನಡೆದ ಬೆನ್ನಲ್ಲೆ ಕಾಶ್ಮೀರಗಳತ್ತ ಜನರ ಚಿತ್ತ ನೆಟ್ಟಿದ್ದು, ಅಲ್ಲಿ ಜಾಗ ಖರೀದಿಸಲು, ಮದುವೆಯಾಗಲು ಸುಂದರ ಹುಡುಗಿಯರನ್ನು ಗೂಗಲ್ ಮೂಲಕ ಜನರು ಹುಡುಕುತ್ತಿದ್ದಾರೆ. ಇವುಗಳಲ್ಲಿ “marry kashmir girl’ ಮತ್ತು kashmiri girls ಎಂಬ ಎರಡು ಪದಗಳು ಈ ವಾರ ಗೂಗಲ್‌ನಲ್ಲಿ ಹೆಚ್ಚು ಕಂಡಿದೆ. ಕಾಶ್ಮೀರದಲ್ಲಿ ಸುಂದರ ಹುಡುಗಿಯರು ಇದ್ದು, ಅವರನ್ನು ಮದುವೆಯಾಗಬಹುದು ಎಂದು ಕೆಲವು ರಾಜಕೀಯ ನಾಯಕರು ಹೇಳಿಕೆ ಕೊಟ್ಟ ಬಳಿಕ ಈ ವಿದ್ಯಮಾನಗಳು ನಡೆದಿದೆ.
ಚಿತ್ರದ ಮೂಲ: ಇಂಡಿಯಾ ಟೈಮ್ಸ್
“marry kashmir girl’ ಎಂಬುದನ್ನು ದೇಶದಲ್ಲಿ ದಿಲ್ಲಿ ಜನರು ಅತೀ ಹೆಚ್ಚು ಬಾರಿ ಗೂಗಲ್‌ನಲ್ಲಿ ಹುಡುಕಿದ್ದಾರೆ. ಬಳಿಕದ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಇದೆ. “kashmiri girls’ ಎಂಬುದನ್ನು ಹುಡುಕಿದವರಲ್ಲಿ ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಾಖಂಡ್, ಹಿಮಾಚಲ ಪ್ರದೇಶ, ಉತ್ತರಾಖಂಡ್ ಬಳಿಕದ ಸ್ಥಾನದಲ್ಲಿದೆ.
ಇನ್ನು ಕಾಶ್ಮೀರದಲ್ಲಿ ಭೂಮಿಯನ್ನು ಕೊಂಡುಕೊಳ್ಳಲು (buy land in kashmir) ಜಾಖಂಡ್ ಮತ್ತು ದಿಲ್ಲಿಯ ನಗರದವರು ಹೆಚ್ಚು ಆಸಕ್ತಿ ಹೊಂದಿರುವ ವಿಷಯ ಗೂಗಲ್ ಸರ್ಚ್ ನಲ್ಲಿ ಬಯಲಾಗಿದೆ. ಕಾಶ್ಮೀರದ ಭೂಮಿಯನು ಕೊಂಡುಕೊಳ್ಳುವುದು ಹೇಗೆ (how to buy land in Kashmir) ಎಂದು ಗೂಗಲ್‌ನಲ್ಲಿ ಹುಡುಕಿದವರ ಪೈಕಿ ಹರಿಯಾಣದವರು ಹೆಚ್ಚಿದ್ದಾರೆ. ನಂತರದ ಸ್ಥಾನದಲ್ಲಿ ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರ ಇದೆ.