Advertisement
ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಉಪ ವಿಭಾಗ ಮುದ್ದೇಬಿಹಾಳ 2021-22ನೇ ಲೆಕ್ಕ ಶಿರ್ಷಿಕೆ 5054 ಅಂಪೇಂಡಿಕ್ಸ್-ಇ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ತಾಳಿಕೋಟೆ ತಾಲೂಕಿನ ಹುನಗುಂದ-ಸುರಪುರ-ರಾಜ್ಯ ಹೆದ್ದಾರಿ 60 ಕಿ.ಮೀ. 70.23 ರಿಂದ 73.20ರವರೆಗೆ ಅಭಿವೃದ್ಧಿಪಡಿಸುವ 495.00 ಲಕ್ಷ ರೂ. ರಸ್ತೆ ಕಾಮಗಾರಿಗೆ ಹಾಗೂ 4 ಕೋಟಿ ರೂ. ವೆಚ್ಚದಲ್ಲಿಯ ಭಂಟನೂರ ಗ್ರಾಮದಲ್ಲಿ ನಡೆದ ಗೊಟಗುಣಕಿ-μàರಾಪುರ ವ್ಹಾಯಾ ಭಂಟನೂರ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಇನ್ನೂ ಕೆಲವು ಕಾಮಗಾರಿಗಳ ಟೆಂಡರ್ ಮುಗಿದಿದ್ದು ಶೀಘ್ರದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುವದು. ತಾಳಿಕೋಟೆಯಿಂದ ಬಿಳೇಭಾವಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು 15 ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದೇನೆಂದ ಅವರು,. ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಎಲ್ಲ ಗ್ರಾಮಗಳಿಗೆ ಜಲ ಜೀವನ್ ಮಶೀನ ಅಡಿಯಲ್ಲಿ ಪ್ರತಿ ಮನೆಗಳಿಗೆ ನಳ ಸಂಪರ್ಕ ಕಾರ್ಯ ನಡೆಯುತ್ತಿದೆ ಅವುಗಳು ಮುಕ್ತಾಯಗೊಂಡರೆ ಕುಡಿಯುವ ನೀರಿನ ತಾಪತ್ರೆಯ ಸಂಪೂರ್ಣ ದೂರಾಗಲಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ (ಅಸ್ಕಿ), ಸಂಗನಗೌಡ ಹೆಗರಡ್ಡಿ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಶೇಖರಗೌಡ ತಂಗಡಗಿ, ಬಸನಗೌಡ ಪಾಟೀಲ (ಲಕ್ಕುಂಡಿ), ಮುತ್ತು ದೇಸಾಯಿ ಶಂಕರಗೌಡ ದೇಸಾಯಿ, ಸೋಮನಗೌಡ ಹಾದಿಮನಿ, ಸಿದ್ದು ಬುಳ್ಳಾ, ಜಿಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಪ್ರಶಾಂತ ಹಾವರಗಿ, ಪ್ರಧಾನ ಕಾರ್ಯದರ್ಶಿ ಬೀಮನಗೌಡ ಲಚ್ಯಾಣ, ಗುರುಗೌಡ ಗುರಡ್ಡಿ, ನಿಂಗನಗೌಡ ಕೊಡಗಾನೂರ, ಮುತ್ತುಗೌಡ ಮಾಳಿ, ಗುತ್ತಿಗೆದಾರ ರಮೇಶ ಕವಲಗಿ, ಮಾಜಿ ಟಿ.ಪಿ ಬಸನಗೌಡ ಪೀರಾಪೂರ, ಬಿ.ಎಂ. ಪಾಟೀಲ (ತಮದಡ್ಡಿ), ಕಿರಿಯ ಅಭಿಯಂತರ ಡಿ.ಬಿ. ಕಲಬುರ್ಗಿ ಇದ್ದರು.