Advertisement

ಮುಚ್ಚುವ ಭೀತಿಯಲ್ಲಿ ನೀರೋಣಿ ಪ್ರಾಥಮಿಕ ಶಾಲೆ

11:32 PM Jun 12, 2019 | sudhir |

ಉಪ್ಪುಂದ: ಆಂಗ್ಲ ಶಿಕ್ಷಣದ ವ್ಯಾಮೋಹಕ್ಕೆ ಒಳಗಾಗಿರುವ ಹೆತ್ತವರು ತಾವು ಹುಟ್ಟಿ ಬೆಳೆದ ಊರಿನ, ತಾವೇ ಕಲಿತ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸದೇ ಆಂಗ್ಲ ಶಾಲೆಗಳತ್ತ ಮುಖ ಮಾಡಿರುವುದರಿಂದ ಊರಿನ ಶಾಲೆಯ ಮುಚ್ಚಲು ಕಾರಣರಾಗುತ್ತಿದ್ದಾರೆ.

Advertisement

1983ರಲ್ಲಿ ಆರಂಭವಾದ ಮರವಂತೆಯ ನೀರೋಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಸ್ಥಿತಿ. ಕಲಿಕೆಗೆ ಮಕ್ಕಳ ದಾಖಲಾತಿ ಆಗದೆ ಶೆ„ಕ್ಷಕಣಿಕ ವರ್ಷವೇ ಮುಚ್ಚುವ ಹಂತದಲ್ಲಿದೆ.

ಮೂವತ್ತಾರೂ ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬುನಾದಿಯಾಗಿರುವ ಈ ಶಾಲೆಯಲ್ಲಿ ಸ್ವಂತ ನಿವೇಶನ, ಕಟ್ಟಡ, ಆವರಣ, ಬಾವಿ, ಶೌಚಾಲಯ, ಅಡುಗೆ ಕೋಣೆ, ಕಂಪ್ಯೂಟರ್‌ ವ್ಯವಸ್ಥೆ, ಅಂಗನವಾಡಿ ಕೇಂದ್ರ ಮುಂತಾದ ಎಲ್ಲಾ ಅಗತ್ಯಗಳನ್ನು ಒಳಗೊಂಡಿದೆ.

ಯಾವುದೇ ಸೌಲಭ್ಯಗಳ ಕೊರತೆ ಇಲ್ಲದಿದ್ದರೂ ಮುಚ್ಚ‌ಲೇ ಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದು ತಲುಪಿದೆ.

ದಾಖಲಾತಿಯೇ ಇಲ್ಲ.
1ರಿಂದ 5ನೆ ತರಗತಿ ವರೆಗೆ ಕಳೆದ ವರ್ಷ 1, 2ಕ್ಕೆ ದಾಖಲಾತಿ ಆಗಿಲ್ಲ. ಈ ವರ್ಷ 3ನೆ ತರಗತಿಗೆ ಇನ್ನೂ ಒಂದೇ ಒಂದು ಮಗು ಸೇರಿಲ್ಲ. 4ರಲ್ಲಿ ಮೂವರು ಮಕ್ಕಳಿದ್ದಾರೆ. ಅವರು ಹೊನ್ನ ಖಾರ್ವಿ, ಜನಾರ್ದನ ಖಾರ್ವಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಜು ಖಾರ್ವಿ ಮಕ್ಕಳು. ಶಾಲೆ ಉಳಿವಿಗಾಗಿ ಕಾದಿದ್ದಾರೆ.

Advertisement

ಜೂನ್‌ 11ರೊಳಗೆ ಸಂಖ್ಯೆ ಹೆಚ್ಚದಿದ್ದರೆ ಮೂವರನ್ನೂ ಬೇರೆ ಶಾಲೆಗೆ ಸೇರಿಸಲಿದ್ದಾರೆ. 5ರಲ್ಲಿ ಮಕ್ಕಳಿಲ್ಲ. ಅಂದರೆ ಸದ್ಯ ಮಕ್ಕಳ ಸಂಖ್ಯೆ 3 ಮಾತ್ರ. ಸುತ್ತಲಿನ ಮಕ್ಕಳೆಲ್ಲ ಇಷ್ಟರಲ್ಲೇ ಬೇರೆ ಶಾಲೆಗೆ ಸೇರಿದ್ದರಿಂದ ಇನ್ನು ಇಲ್ಲಿ ಹೊಸ ಸೇರ್ಪಡೆ ಆಸೆ ಇಲ್ಲ. ಆದ್ದರಿಂದ 4ನೆ ತರಗತಿಯ ಮೂವರೂ ಬೇರೆ ಶಾಲೆಗೆ ಹೋಗಲಿದ್ದಾರೆ. ಆಗ ಈ ಶಾಲೆ ಶೂನ್ಯ ಮಕ್ಕಳ ಶಾಲೆ ಆಗಲಿದೆ.

ಊರೂರು ಸುತ್ತಿದ್ದರೂ ಮಕ್ಕಳು ಬರಲಿಲ್ಲ
ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರಿದ್ದಾರೆ. ಕೆರ್ಗಾಲಿನ ಸುಶೀಲಾ, ಮರವಂತೆ ಲಲಿತಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೇಖಾ ದೇವಾಡಿಗ, ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ ಖಾರ್ವಿ, ಶಿಕ್ಷಕಿಯರು ಎ.1, ಮೇ 2, ಜೂನ್‌ 5ರಂದು ಸುತ್ತಲಿನ ಮನೆಗಳಿಗೆ ಭೇಟಿ ನೀಡಿ ಶಾಲೆಗೆ ಮಕ್ಕಳನ್ನು ಸೇರಿಸಿ, ಶಾಲೆ ಉಳಿಸಿಕೊಳ್ಳಲು ಪೋಷಕರ ಮನ ಒಲಿಸಲು ಯತ್ನಿಸಿದ್ದರೂ ಫಲ ಮಾತ್ರ ಶೂನ್ಯ.

ಇಲಾಖೆಯ ಮೌನ
ಹಲವು ಮಕ್ಕಳು ದೂರದ ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಿರುವುದು, ಪೋಷಕರು ಬಸ್‌ ಸೌಕರ್ಯ ಅಪೇಕ್ಷಿಸುತ್ತಿರುವುದು ಮತ್ತು ಈ ಶಾಲೆಯ ಜತೆ ಅನ್ಯ ಸರಕಾರಿ ಶಾಲೆಗಳೇ ಪೈಪೋಟಿ ನಡೆಸುತ್ತಿರುವುದು, ಅದರ ವಿರುದ್ಧ ಇಲಾಖೆ ಮೌನವಾಗಿರುವುದು ಮರವಂತೆ ಕರಾವಳಿ ಕಿರಿಯ ಪ್ರಾಥಮಿಕ ಶಾಲೆಯ ಇಂದಿನ ಸ್ಥಿತಿಗೆ ಕಾರಣ.
– ರೇಖಾ ದೇವಾಡಿಗ, ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next