Advertisement

ಉನ್ನತ ಶಿಕ್ಷಣ ಎಲ್ಲರಿಗೂ ದೊರೆಯಲಿ

07:40 PM Mar 23, 2018 | Team Udayavani |

ಅಂಕೋಲಾ: ಜಾಗತಿಕರಣ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರವು ಮಾರುಕಟ್ಟೆ ಶಕ್ತಿಗಳಿಗೆ ತೆರೆದುಕೊಳ್ಳುತ್ತಿದೆ. ಗುಣಮಟ್ಟದ ಶಿಕ್ಷಣ 
ಉಳ್ಳವರಿಗೆ ಮಾತ್ರ ಎನ್ನುವಂತಾಗಿದ್ದು ಬಡವರಿಗೆ ಉಚ್ಚ ಶಿಕ್ಷಣ ಗಗನಕುಸುಮವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪುಗೊಳ್ಳುತ್ತಿರುವಾಗ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇಂದು ಯಾವ ರೀತಿಯ ಶಿಕ್ಷಣ ಬೇಕು ಎಂಬುದನ್ನು ಸರ್ಕಾರಕ್ಕೆ ತಿಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅಭಿಪ್ರಾಯಪಟ್ಟರು.

Advertisement

ಜಿ.ಸಿ. ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ದಿಕ್ಸೂಚಿ ಭಾಷಣ
ಮಾಡಿದ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವ ಡಾ| ಒ.ವಿ. ನಂದಿಮಠ, ಉನ್ನತ ಶಿಕ್ಷಣ ಮತ್ತು ಉದ್ಯೋಗ ಮಾರುಕಟ್ಟೆ ಪರಸ್ಪರ ನಿಕಟವಾಗುತ್ತಿವೆ. ಆದರೆ ಜ್ಞಾನ ವಿಜ್ಞಾನ ಕ್ಷೇತ್ರಗಳಲ್ಲಿನ ಸಂಶೋಧನೆಗಳು ತರಗತಿಗಳನ್ನು ತಲುಪುತ್ತಿಲ್ಲ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಕೇವಲ ಪದವಿಧರರನ್ನು ಸೃಷ್ಟಿಸಿದರೆ ಸಾಲದು. ರಾಷ್ಟ್ರದ ಅಭಿವೃದ್ಧಿಗೆ ಅಗತ್ಯವಾದ ಪರಿಣಿತ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಕುರಿತು ಡಾ| ಎಂ.ಜಿ. ಹೆಗಡೆ ಮಾತನಾಡಿದರು. ವಿಚಾರ ಸಂಕಿರಣದ ಸಂಯೋಜಕ ಡಾ| ಎಸ್‌.ವಿ. ವಸ್ತ್ರದ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಡಾ| ಇಮಿ¤ಯಾಜ್‌ ಅಹ್ಮದ್‌ ಖಾನ್‌ ಸ್ವಾಗತಿಸಿದರು. ಧಾರವಾಡದ
ಸಿಎಂಡಿಆರ್‌ ಸಂಸ್ಥೆ ಪ್ರಾಧ್ಯಾಪಕ ಡಾ| ಎಸ್‌.ವಿ. ಹನಗೊಡಿಮಠ, ಕವಿಕಾಶಿ ಸಂಘದ ಅಧ್ಯಕ್ಷ ಡಾ| ಬಿ.ಎ. ಬೆಳವಟಗಿ ಉಪಸ್ಥಿತರಿದ್ದರು. ಕೆನರಾ ವೆಲ್ಫೆರ್‌ ಟ್ರಸ್ಟಿನ ಆಡಳಿತಾಧಿ ಕಾರಿ ಅಧ್ಯಕ್ಷತೆ ವಹಿಸಿದ್ದರು.

ಪ್ರಭಂದಗಳ ಸಾರಲೇಖಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಸಂಶೋದನಾ ಪ್ರಬಂಧಗಳನ್ನು ಮಂಡಿಸಿದರು. ತಾಂತ್ರಕ ವಿಷಯ ಗೋಷ್ಠಿಯಲ್ಲಿ ಡಾ| ಶಂಕರ ಭಟ್‌, ಡಾ| ಸೀಮಾ ರಥ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಡಾ| ಜಯಕರ ಭಂಡಾರಿ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷಿ ನಾಯಕ 
ನಿರೂಪಿಸಿದರು. ಪ್ರೊ| ಪೂರ್ಣಿಮಾ ಗಾಂವಕರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next