Advertisement
ಹೌದು, ಇಂತಹ ಧ್ಯೇಯಗಳನ್ನಿಟ್ಟುಕೊಂಡು ಕಾರ್ಯಾರಂಭ ಮಾಡಿರುವ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ಕಳೆದ ನಾಲ್ಕು ವರ್ಷಗಳಿಂದ ಪ್ರಾಧ್ಯಾಪಕರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಯಶಸ್ವಿಯಾಗಿ ಸಾಗಿದ್ದು, ಈ ವರೆಗೂ 3500ಕ್ಕೂ ಅಧಿಕ ಬೋಧಕರಿಗೆ ಇಂದಿನ ಹೈಟೆಕ್ ಯುಗದ ಶಿಕ್ಷಣ ವ್ಯವಸ್ಥೆಯ ಕುರಿತು ತರಬೇತಿ ನೀಡಿ ಮುಗಿಸಿದೆ.ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ರೂಪುರೇಷೆಗಳನ್ನು ಸಿದ್ಧಪಡಿಸಿ ಅದನ್ನು ಜಾರಿಗೊಳಿಸಿದ ಕೀರ್ತಿ ಧಾರವಾಡಕ್ಕೆ ಸಲ್ಲುತ್ತದೆ.
Related Articles
Advertisement
ವಿದೇಶಿ ವಿವಿಗಳ ಜೊತೆಗೆ ಒಪ್ಪಂದ: ಇನ್ನು ಉನ್ನತ ಶಿಕ್ಷಣ ಅಕಾಡೆಮಿಯು ಕೇವಲ ದೇಶದೊಳಗಿನ ಶಿಕ್ಷಣ ವ್ಯವಸ್ಥೆ ಮಾತ್ರವಲ್ಲ ವಿದೇಶಿ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣದ ಬಗ್ಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಜೊತೆಗೆ ಒಡಂಬಡಿಕೆಗೆ ಸಜ್ಜಾಗಿದೆ. ಈಗಾಗಲೇ ಪೆನ್ಸೆಲೇನಿಯಾ ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದ ಏರ್ಪಟ್ಟಿದ್ದು, ಸ್ಪೇನ್ ವಿಶ್ವವಿದ್ಯಾಲಯದ ಜೊತೆಗೂ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ವಿಧಾನಗಳ ಕುರಿತು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.
ಕಟ್ಟಡದ ಮೊದಲ ಭಾಗ ಕಳೆದ ವರ್ಷವೇ ಪೂರ್ಣ: 2018 ರಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿಯ ಅಗತ್ಯವನ್ನು ಅರಿತು ಹಳಿಯಾಳ ರಸ್ತೆಗೆ ಹೊಂದಿಕೊಂಡಿರುವ ಕವಿವಿ ಕ್ಯಾಂಪಸ್‌ನಲ್ಲಿಯೇ 90 ಕೋಟಿ ರೂ. ವೆಚ್ಚದಲ್ಲಿ ಉನ್ನತ ಶಿಕ್ಷಣ ತರಬೇತಿ ನೀಡುವ ಅಕಾಡೆಮಿ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುಮೋದನೆ ದೊರಕಿಸಿಕೊಟ್ಟರು. ಕಟ್ಟಡದ ಮೊದಲ ಭಾಗ ಕಳೆದ ವರ್ಷವೇ ಪೂರ್ಣಗೊಂಡಿದ್ದು, ಇಲ್ಲಿ ಹಾಸ್ಟೆಲ್ ಕಾರ್ಯಾರಂಭ ಮಾಡಿದೆ. ಕೊರೊನಾ ಅಡ್ಡಿಯಾತಂಕವೂ ದೂರವಾಗಿದ್ದು, ಸದ್ಯಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ಸರ್ಕಾರ ವ್ಯವಸ್ಥೆ ಮಾಡಿಕೊಟ್ಟಿದೆ. ಕಟ್ಟಡ ಸಜ್ಜಾದ ನಂತರ ಈಗಿರುವ ಐದು ಪಟ್ಟು ಕಾರ್ಯಕ್ಷೇತ್ರವನ್ನು ಅಕಾಡೆಮಿ ಹೆಚ್ಚಿಸಿಕೊಳ್ಳಲಿದೆ. ಅದಕ್ಕಾಗಿ ಅಗತ್ಯವಿರುವ ನೌಕರ ವ್ಯವಸ್ಥೆಯನ್ನು ಸರ್ಕಾರ ಒದಗಿಸುವ ಭರವಸೆ ನೀಡಿದೆ.
ಹೊಸ ಸಂಶೋಧನೆ, ಶಿಕ್ಷಣ ಗುಣಮಟ್ಟ ಹೆಚ್ಚಳ, ಡಿಜಿಟಲ್ ತಂತ್ರಜ್ಞಾನದೊಂದಿಗೆ ಶಿಕ್ಷಣ ಒದಗಿಸುವಂತೆ ಮಾಡುವುದು, ಅದಕ್ಕಾಗಿ ಪ್ರಾಧ್ಯಾಪಕರನ್ನು ಸಜ್ಜುಗೊಳಿಸುವ ಸವಾಲುಗಳು ಅಕಾಡೆಮಿಯ ಮುಂದಿವೆ. ಇವೆಲ್ಲದಕ್ಕೂ ಅಕಾಡೆಮಿ ಸಜ್ಜಾಗಿದೆ. –ಪ್ರೊ| ಶಿವಪ್ರಸಾದ, ನಿರ್ದೇಶಕರು, ಉನ್ನತ ಶಿಕ್ಷಣ ಅಕಾಡೆಮಿ, ಕವಿವಿ, ಧಾರವಾಡ
-ಬಸವರಾಜ ಹೊಂಗಲ್