Advertisement

ಮಲತಾಯಿಗೆ ಮಗು ಒಪ್ಪಿಸಲು ಹೈ-ಕೋರ್ಟ್ ನಕಾರ‌

09:58 AM Dec 23, 2021 | Team Udayavani |

ಬೆಂಗಳೂರು: ವಿವಾಹ ವಿಚ್ಛೇದನ ಪ್ರಕರಣ ವೊಂದರಲ್ಲಿ ಮೊದಲ ಪತ್ನಿಯ ಮಗುವನ್ನು ಮಲತಾಯಿಗೆ ಒಪ್ಪಿಸಲು ನಿಕಾರಿಸಿದ ಹೈಕೋರ್ಟ್‌, ಅರ್ಜಿದಾರ ಪತಿಗೆ 50 ಸಾವಿರ ರೂ. ದಂಡ ವಿಧಿಸಿದೆ. ಮಗನನ್ನು ತನ್ನ ಬಳಿ ಇರಿಸಿಕೊಳ್ಳಲು ನಿರ್ದೇಶಿಸಬೇಕು ಎಂದು ಕೋರಿ ಪತ್ನಿಯಿಂದ ವಿಚ್ಛೇದನ ಪಡೆದು, ಎರಡನೇ ಮದುವೆಯಾಗಿರುವ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿವಾಹ ವಿಚ್ಛೇದನ ಮೂಲಕ ಗಂಡ- ಹೆಂಡತಿ ಪ್ರತ್ಯೇಕವಾಗಿಬಹುದು.

Advertisement

ಆದರೆ, ಅವರಿಬ್ಬರಿಗೆ ಜನಸಿದ ಮಗುವಿನ ಪಾಲನೆ ಪೋಷಣೆಗೆ ಜನ್ಮ ನೀಡಿದ ತಾಯಿಯೇ ಸೂಕ್ತ. ಇದು ಅವಳ ಹಕ್ಕು ಕೂಡ. ಅರ್ಜಿದಾರರ ಈಗಾಗಲೇ ಎರಡನೇ ಮದುವೆ ಆಗಿರುವುದರಿಂದ ಮಲತಾಯಿ ಮಡಿಲಿಗೆ ಮಗುವನ್ನು ಒಪ್ಪಿಸುವುದು ಸಮರ್ಥನೀಯವಲ್ಲ ಎಂದು ಹೇಳಿದೆ. ಅರ್ಜಿ ವಜಾಗೊಳಿಸಿರುವ ನ್ಯಾಯ ಪೀಠ, ಅರ್ಜಿದಾರ ಪತಿಗೆ 50 ಸಾವಿರ ರೂ. ದಂಡ ವಿಧಿಸಿದೆ.

ದಂಡದ ಮೊತ್ತವನ್ನು ವಿಚ್ಛೇದಿತ ಪತ್ನಿಗೆ ಒಂದು ತಿಂಗಳಲ್ಲಿ ಪಾವತಿಸಬೇಕು. ವಿಫ‌ಲವಾದರೆ, ಮಗುವಿನ ಭೇಟಿಗೆ ನೀಡಿರುವ ಅವಕಾಶವನ್ನು ಅಮಾನತುಗೊಳಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.

ಆದೇಶದಲ್ಲಿ ಪ್ರವಾದಿ ಮಾತು ಉಲ್ಲೇಖ: ಓಹ್‌ ಅಲ್ಲಾಹುವೇ, ಇದು ನನ್ನ ಮಗು, ನನ್ನ ಗರ್ಭದ ಫ‌ಲ, ನನ್ನ ಎದೆಹಾಲು ಉಂಡು ಪ್ರೇಮ, ವಾತ್ಸಲ್ಯದಲಿ ಮಿಂದೇಳುತ್ತಿದೆ. ಇಂತಹ ಮಗುವನ್ನು ಇವನ ತಂದೆ ತನ್ನೊಂದಿಗೆ ಕರೆದೊಯ್ದು ಪೋಷಿಸುವ ಬಯಕೆ ವ್ಯಕ್ತಪಡಿಸುತ್ತಿದ್ದಾನೆ.

ಇದನ್ನೂ ಓದಿ;- ಪ್ರಿಯಾಂಕಾ ಮಕ್ಕಳ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿಯೇ ಇಲ್ಲ: ಸುಳ್ಳು ಹೇಳಿದ್ರಾ ಕೈ ನಾಯಕಿ?

Advertisement

ಏನು ಮಾಡಲಿ,’ ಎಂಬ ಅಸಹಾಯಕ ಮಹಿ ಳೆಯ ಮೊರೆಗೆ, ಪ್ರವಾದಿ ಮೊಹಮ್ಮದರು; ಮಗು ನಿನ್ನ ಬಳಿ ಇರುವುದೇ ಸೂಕ್ತ’, ತಾಯಿಯ ಬಳಿಯೇ ಮಗು ಬೆಳೆಯಬೇಕು ಎಂಬುದನ್ನು ಪ್ರವಾದಿಗಳು ಆವತ್ತೇ ಹೇಳಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖೀಸಿದೆ. ಖಾಸಗಿ ಕಂಪನಿಯೊಂದರ ಉದ್ಯೋಗಿ ಯಾಗಿದ್ದ ಬೆಂಗಳೂರು ಮೂಲದ ವ್ಯಕ್ತಿ, ದಾವಣಗೆರೆ ಮೂಲದ ಲೆಕ್ಕಪರಿಶೋಧಕಿಯನ್ನು 2009ರಲ್ಲಿ ವಿವಾಹವಾಗಿದ್ದ.

2013ರಲ್ಲಿ ಇವರಿಗೆ ಗಂಡು ಮಗು ಜನಿಸಿತ್ತು. ಇಬ್ಬರ ನಡುವೆ ಮನಸ್ತಾಪ ಉಂಟಾದ ಕಾರಣ ವಿಚ್ಛೇದನ ಪಡೆದು ಕೊಂಡಿದ್ದರು. ಮಗುವನ್ನು ತನಗೆ ಒಪ್ಪಿಸು ವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಹಾಗಾಗಿ, ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next