Advertisement

ಪತ್ರಿಕೆಗಳ ವಿರುದ್ಧ ಮಹಾ ಹೇಳಿಕೆಗೆ ಹೈಕೋರ್ಟ್‌ ಕಿಡಿ

10:11 AM Apr 28, 2020 | sudhir |

ಮುಂಬಯಿ: ವೃತ್ತಪತ್ರಿಕೆಗಳಿಂದಲೂ ಕೋವಿಡ್ ಹಬ್ಬುತ್ತದೆ ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ಸೋಮವಾರ ಕಿಡಿಕಾರಿದೆ. ಆರೋಗ್ಯ ತಜ್ಞರ ಅಭಿಪ್ರಾಯ ಪಡೆಯದೇ ನಿಮ್ಮಿಷ್ಟ ಬಂದಂತೆ ಹೇಗೆ ಹೇಳಿಕೆ ನೀಡಿದಿರಿ ಎಂದು ಪ್ರಶ್ನಿಸಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವುದಕ್ಕೆ ನಿರ್ಬಂಧ ಹೇರಿ ಮಹಾರಾಷ್ಟ್ರ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ನ್ಯಾ.ಪ್ರಸನ್ನ ಬಿ. ವರಾಲೆ, ಈ ಕುರಿತು ಸರ್ಕಾರದ ಪ್ರತಿಕ್ರಿಯೆ ಕೋರಿದ್ದರು. ಸೋಮವಾರ ಸರ್ಕಾರವು ಅಫಿಡವಿಟ್‌ ಸಲ್ಲಿಸಿ, ವೈರಸ್‌ ಒಂದೊಂದು ಮೇಲ್ಮೆ„ನಲ್ಲಿ ನಿರ್ದಿಷ್ಟ ಸಮಯದವರೆಗೆ ಉಳಿಯುತ್ತವೆ. ಪತ್ರಿಕೆಗಳು ಒಬ್ಬರ ಕೈಯಿಂದ ಮತ್ತೂಬ್ಬರ ಕೈಗೆ ಹೋಗುವಾಗ ವೈರಸ್‌ ಹಬ್ಬುವ ಸಾಧ್ಯತೆಯಿರುತ್ತದೆ’ ಎಂದು ಹೇಳಿತು. ಈ ಸ್ಪಷ್ಟನೆಯಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, ನಿಮ್ಮ ಹೇಳಿಕೆ ಹಿಂದಿನ ಲಾಜಿಕ್‌ ಯಾರಿಗೂ ಅರ್ಥವಾಗುತ್ತಿಲ್ಲ. ನೀವು ಅಫಿಡವಿಟ್‌ ನಲ್ಲಿ ಎಲ್ಲೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು ಅಥವಾ ಪರಿಣತರ ಅಭಿಪ್ರಾಯ, ಹೇಳಿಕೆಯನ್ನು ಉÇÉೇಖೀಸಿಲ್ಲ. ಆದರೆ, ಮತ್ತೂಂದೆಡೆ ಅನೇಕ ತಜ್ಞರು ಪತ್ರಿಕೆಗಳ ಮೂಲಕ ಕೋವಿಡ್ ಹರಡಲ್ಲ ಎಂದು ಹೇಳಿರುವುದು ಹಲವು ಪತ್ರಿಕೆಗಳಲ್ಲಿ ವರದಿಯಾಗಿವೆ’ ಎಂದರು.

ಜತೆಗೆ, ತಮ್ಮೆಲ್ಲ ಸಂದೇಹಗಳಿಗೂ ಉತ್ತರ ಸಿಗುವಂತೆ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾ.ವರಾಲೆ, ಮುಂದಿನ ವಿಚಾರಣೆಯಲ್ಲಿ ಜೂ.11ಕ್ಕೆ ಮುಂದೂಡಿದರು. ಏ.18ರಂದು ಲಾಕ್‌ ಡೌನ್‌ ಗೆ ಸಂಬಂಧಿಸಿದ ಮಾರ್ಗಸೂಚಿ ಹೊರಡಿಸಿದ್ದ ಮಹಾರಾಷ್ಟ್ರ ಸರ್ಕಾರ, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಮನೆ ಮನೆಗೆ ತಲುಪಿಸುವುದಕ್ಕೆ ನಿರ್ಬಂಧ ಹೇರಿತ್ತು. ಈ ನಿರ್ಧಾರಕ್ಕೆ ಸಂಬಂಧಿಸಿ ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಏ.21ರಂದು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಆದೇಶಿಸಿತ್ತು. ಜತೆಗೆ, ಈ ವಿಚಾರದಲ್ಲಿ ಕೋರ್ಟ್‌ ಗೆ ಸಲಹೆ ನೀಡಲು ವಕೀಲ ಸತ್ಯಜಿತ್‌ ಬೋರಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾ ಗಿಯೂ ನೇಮಕ ಮಾಡಿತ್ತು. ಅದೇ ದಿನ, ಮಹಾರಾಷ್ಟ್ರ ಸರ್ಕಾರವು ಮುಂಬೈ ಮೆಟ್ರೋಪಾಲಿಟನ್‌ ಪ್ರದೇಶ ಮತ್ತು ಪುಣೆ ಹೊರತು ಪಡಿಸಿ ಉಳಿದ ಕಡೆ ಪತ್ರಿಕೆಗಳ ವಿತರಣೆಗೆ ಅವಕಾಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next