ಕಪಾಟಿನಲ್ಲಿ ಭದ್ರವಾಗಿ ಇಟ್ಟಿದ್ದ ಆ ಬೆಲ್ ಬಾಟಮ್ ಜೀನ್ಸ್, ಬೂಟ್ ಕಟ್ ಜೀನ್ಸ್ ಸೇರಿದಂತೆ ಇತರ ಎಲ್ಲ ಹೈ ವೇಸ್ಟ್ ಜೀನ್ಸ್ ಪ್ಯಾಂಟ್‌ಗಳನ್ನೂ ಹೊರ ತೆಗೆಯಿರಿ. ಸಂದೇಹವಿಲ್ಲದೆ ಅವುಗಳನ್ನು ಮತ್ತೆ ತೊಟ್ಟುಕೊಂಡು ಎಲ್ಲೆ ಡೆ ಓಡಾಡಬಹುದು ನೋಡಿ!
ಫ್ಯಾಷನ್ ಲೋಕದಲ್ಲಿ ಒಮ್ಮೆಲೇ ಲೊ ವೇಸ್ಟ್ ಜೀನ್ಸ್ ಬಹು ದೊಡ್ಡ ಅಲೆ ಎಬ್ಬಿಸಿತ್ತು. ಎಬ್ಬಿಸಿದ ನಂತರ ವರ್ಷಗಳ ಕಾಲ ಅದರದೇ ಹಾವಳಿ ಇತ್ತು. ಆದರೀಗ ಕೇವಲ ರೆಟ್ರೋ ಥೀಮ… ಪಾರ್ಟಿ, ಫ್ಯಾನ್ಸಿ ಡ್ರೆಸ್ ಹಾಗು ಫ್ಯಾಷನ್ ಶೋಗಳಿಗೆ ಸೀಮಿತವಾಗಿದ್ದ ಹೈ ವೇಸ್ಟ್ ಜೀನ್ಸ್ ಟ್ರೆಂಡ್ ಆಗುತ್ತಿದೆ. ಹೌದು! ನಿಮ್ಮ ಕಪಾಟಿನಲ್ಲಿ ಭದ್ರವಾಗಿ ಇಟ್ಟಿದ್ದ ಆ ಬೆಲ… ಬಾಟಮ… ಜೀನ್ಸ್, ಬೂಟ್ ಕಟ್ ಜೀನ್ಸ್ ಸೇರಿದಂತೆ ಇತರ ಎಲ್ಲ ಹೈ ವೇಸ್ಟ್ ಜೀನ್ಸ್ ಪ್ಯಾಂಟ್‌ಗಳನ್ನೂ ಹೊರ ತೆಗೆಯಿರಿ. ಸಂದೇಹವಿಲ್ಲದೆ ಅವುಗಳನ್ನು ಮತ್ತೆ ತೊಟ್ಟುಕೊಂಡು ಎಲ್ಲೆಡೆ ಓಡಾಡಬಹುದು ನೋಡಿ!
ಚಿತ್ರನಟಿಯರು ಫ್ಲೈಟ್ ಏರುವ ಮುನ್ನ ಅಥವಾ ಫ್ಲೈಟ್‌ನಿಂದ ಇಳಿದಾಗ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸುವುದೇ ಫೋಟೋಗ್ರಾಫರ್‌ಗಳ ಕ್ಯಾಮೆರಾಗಳು. ಈ ಕಾರಣದಿಂದ ಅವರೆಲ್ಲ ಆಕರ್ಷಕ ಉಡುಪನ್ನು ತೊಟ್ಟುಕೊಂಡೇ ಇಂಥ ಸ್ಥಳಗಳಲ್ಲಿ ದರ್ಶನ ಕೊಡುತ್ತಾರೆ. “ಏರ್‌ಪೋರ್ಟ್ ಫ್ಯಾಶನ್’ ಎಂಬುದು ಅಸ್ತಿತ್ವಕ್ಕೆ ಬಂದಿದ್ದು ಕೂಡ ಇದೇ ಹಿನ್ನೆಲೆಯಲ್ಲಿಯೇ. ಸದ್ಯದ ಏರ್‌ಪೋರ್ಟ್ ಫ್ಯಾಶನ್ ಅಂದ್ರೆ… ಹೈ ವೇಸ್ಟ್ ಜೀನ್ಸ್ ಪ್ಯಾಂಟ್ ಹಾಗೂ ಅದರ ಜೊತೆ ಶರ್ಟ್ ಅಥವಾ ಟಿ ಶರ್ಟ್‌ಗಳು. ಹಾಲಿವುಡ್ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ, ಬೆಂಗಳೂರಿನ ಬೆಡಗಿಯರಾದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಬಾಲಿವುಡ್ ನಟಿಯರಾದ ಆಥಿಯಾ ಶೆಟ್ಟಿ, ಸೋನಂ ಕಪೂರ್, ಪರಿಣೀತಿ ಚೋಪ್ರಾ, ಶ್ರದ್ಧಾ ಕಪೂರ್, ಮಲೈಕಾ ಅರೋರಾ, ಆಲಿಯಾ ಭಟ್, ಮತ್ತಿರರು ಈ ಫ್ಯಾಷನ್ ಟ್ರೆಂಡ್ ಆಗುತ್ತಿರಲು ಕಾರಣಕರ್ತರು.
ನಿಮ್ಮ ದೇಹ ಪ್ರಕೃತಿಗೆ ಯಾವ ಥರದ ಜೀನ್ಸ್ ಒಪ್ಪುತ್ತದೆ ಎನ್ನುವುದನ್ನು ಕಂಡುಹಿಡಿಯಲು ಇಲ್ಲಿವೆ ಕೆಲವು ಟಿಪ್ಸ್. ಚಿಕ್ಕ ದೇಹಾಕೃತಿ ಹೊಂದಿದ್ದರೆ, ಸ್ಕಿನ್ ಫಿಟ್ ಜೀನ್ಸ್ ಚೆಂದ. ಸ್ಕಿನ್ ಫಿಟ್ ಎಂದರೆ, ಬಹುತೇಕ ಮೈಗಂಟುವಷ್ಟು ಬಿಗಿಯಾಗಿರುವ ಉಡುಗೆ. ಇದನ್ನು ಉಟ್ಟರೆ, ನಡು ಸಣ್ಣ ಹಾಗೂ ಕಾಲುಗಳು ಉದ್ದವಾಗಿ ಕಾಣಿಸುತ್ತವೆ. ಆದರೆ, ಇದರ ಜೊತೆ ಸಡಿಲ ಅಂಗಿ ಧರಿಸಬೇಕೇ ಹೊರತು, ಬಿಗಿಯಾದ ಅಂಗಿ ತೊಡಬಾರದು. ಬಿಗಿಯಾದ ಅಂಗಿ ತೊಟ್ಟರೆ ದೇಹಾಕೃತಿ ಇರುವುದಕ್ಕಿಂತಲೂ ಚಿಕ್ಕದಾಗಿ ಕಾಣಿಸುತ್ತದೆ. ಹಾಗಾಗಿ, ಮಹಿಳೆಯರು ಗಿಡ್ಡವಾಗಿ ಕಾಣಿಸುತ್ತಾರೆ. ಗಟ್ಟಿಮುಟ್ಟಾದ ದೇಹಾಕೃತಿ ಇದ್ದರೆ, ಒಳ್ಳೆಯ ಫಿಟ್ಟಿಂಗ್ ಇರುವ ಅಂಗಿ ಜೊತೆ ಬೂಟ್ ಕಟ್ ಅಥವಾ ಬೆಲ್ ಬಾಟಮ… ಜೀನ್ಸ್ ತೊಡಬಹುದು. ಇದನ್ನು ಉಟ್ಟರೆ, ಮಹಿಳೆಯರು ದಪ್ಪಗೆ ಕಾಣಿಸುವುದಿಲ್ಲ. ಈ ಪ್ಯಾಂಟ್ ಜೊತೆ ಸಡಿಲ ಅಂಗಿ ತೊಟ್ಟರೆ ದಪ್ಪ ಕಾಣುವ ಸಾಧ್ಯತೆ ಇದೆ. ಆದ್ದರಿಂದ ಸಡಿಲ ಅಂಗಿಯ ತೋಳುಗಳಿಗೆ ಫಿಟ್ಟಿಂಗ್ ಇಡಿಸಿ.
ಬಣ್ಣ ಬಣ್ಣದ ಜೀನ್ಸ್
ಜೀನ್ಸ್ ಎಂದಾಗ ಕೇವಲ ಗಾಢ ನೀಲಿ ಹಾಗು ತಿಳಿ ನೀಲಿ ಅಷ್ಟೇ ಅಲ್ಲ; ಕಂದು, ಬೂದಿ, ಕಪ್ಪು, ಹಸಿರು, ಬಿಳಿಯೂ ಇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಜೀನ್ಸ್‌ನಲ್ಲೂ ಚೆಕ್ಸ್ (ಅಂದರೆ ಚೌಕಾಕಾರ), ಚುಕ್ಕಿಗಳು, ಹೂವಿನ ಆಕೃತಿಯ ಮುದ್ರೆಗಳು, ಎಂಬ್ರಾಯರಿ ಮುಂತಾದ ಆಯ್ಕೆಗಳಿವೆ. ಚಿನೊಸ್ ಹೆಸರಿನಲ್ಲಿ ಬಣ್ಣ- ಬಣ್ಣದ ಜೀನ್ಸ್ ಪ್ಯಾಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕೆಂಪು, ಹಳದಿ, ಗುಲಾಬಿ, ನೇರಳೆ, ಕೇಸರಿ ಮುಂತಾದ ಬಣ್ಣಗಳಲ್ಲಿ ಜೀನ್ಸ್ ಸಿಗುತ್ತವೆ. ಇವುಗಳಲ್ಲೂ ಹೈ ವೇಸ್ಟ್ ಆಯ್ಕೆ ಲಭ್ಯ.
– ಅದಿತಿಮಾನಸ ಟಿ.ಎಸ್.