ನಿಂದಾಗಿ ಕೆಲವೇ ದಿನಗಳಲ್ಲಿ ಢಮಾರ್ ಆಗಿತ್ತು. ಅನಂತರ ಮತ್ತೆ ದುರಸ್ತಿ ಮಾಡಿ ದೀಪ ಉರಿಯ ಲಾರಂಭಿಸಿದ್ದು, 2ನೇ ಬಾರಿಯ ದುರಸ್ತಿಗೂ ಜಗ್ಗದ ಹೈಮಾಸ್ಟ್ ಹೈವೋಲ್ಟೇಜ್ ಪ್ರಸರಣವಾಗಿ ಹಾಳಾಗಿದೆ.
Advertisement
ಎರಡೆರಡು ಬಾರಿ ಹೈವೋಲ್ಟೇಜ್ ಬಂದು ದೀಪ ಹಾಳಾಗಿರುವುದರ ಹಿಂದೆ ಏನಾದರೂ ಸಮಸ್ಯೆ ಇದೆಯೇ ಎನ್ನುವುದನ್ನು ನಗರಸಭೆ ಎಂಜಿನಿಯರ್ ಅವರು ಪರಿಶೀಲನೆ ಮಾಡಿದಾಗ ಕೇಬಲ್‌ನಲ್ಲಿ ಸಮಸ್ಯೆ ಇರುವುದು ಗೊತ್ತಾಗಿದೆ. ಹೈಮಾಸ್ಟ್‌ನಲ್ಲಿ 6 ವಿದ್ಯುತ್ ದೀಪ ಇದೆ. ಯಾವೊಂದು ದೀಪವೂ ಉರಿಯುತ್ತಿಲ್ಲ. ಇಲ್ಲಿ ರಾತ್ರಿ ಸಮರ್ಪಕವಾಗಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ನಿಲ್ದಾಣದಲ್ಲಿ ಬಸ್ಸು ಕಾಯುವ ಪ್ರಯಾಣಿಕರಿಗೆ ಮುಖ್ಯವಾಗಿ ಕೆಲಸ ಬಿಟ್ಟು ಮನೆಗೆ ಹೋಗುವ ಯುವತಿ/ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ.
ಜೂನ್ ಮೊದಲ ವಾರ ಹೈಮಾಸ್ಟ್ ದೀಪದ ದುರಸ್ತಿ ಕಾರ್ಯಗಳು ಮುಗಿದು ಎಲ್ಲ ದೀಪಗಳೂ ಬೆಳಗಿದ್ದವು. ಕೆಲ ದಿನ ದಲ್ಲೇ ಮತ್ತೆ ಕತ್ತಲು. ನಗರಸಭೆಯವರು ಮತ್ತೆ ದುರಸ್ತಿ ಮಾಡಿದರು. ಅದೂ ಕೆಟ್ಟು ಹೋಯ್ತು. ಒಂದೇ ತಿಂಗಳಲ್ಲಿನ 2 ಬಾರಿಯ ದುರಸ್ತಿಯೂ ಹೈವೋಲ್ಟೇಜ್ಗೆ ಬಲಿಯಾದಂತಾಗಿದೆ. ಈ ಬಗ್ಗೆ ನಗರಸಭೆ ಎಂಜಿನಿಯರ್ ಅವರಲ್ಲಿ ಕೇಳಿದಾಗ, ದುರಸ್ತಿ ಕಾರ್ಯ 2 ಬಾರಿ ನಡೆಸಿದ್ದೇವೆ. 2ನೇ ಬಾರಿಗೆ ವಿದ್ಯುತ್ ಹೈವೋಲ್ಟೇಜ್ನಿಂದಾಗಿ ಹೈಮಾಸ್ಟ್ ದೀಪ ಮತ್ತೆ ಹಾಳಾಯಿತು. ವಿದ್ಯುತ್ ಪ್ರಸರಣ ಕೇಬಲ್‌ನಲ್ಲಿ ದೋಷ ವಿರುವುದನ್ನು ಪತ್ತೆ ಮಾಡಿದ್ದೇವೆ. ಇನ್ನೆರಡು ದಿನದಲ್ಲಿ ಹೈಮಾಸ್ಟ್ ದೀಪ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.